ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ನೂತನ ನಾಯಕನಾಗಿ ಸ್ಫೋಟಕ ಬ್ಯಾಟ್ಸ್‌ಮನ್ ರಜತ್ ಪಾಟಿದಾರ್ (Rajat Patidar) ಅವರನ್ನ ಫ್ರಾಂಚೈಸಿ ಅಯ್ಕೆ ಮಾಡಿದೆ. ಪಾಟೀದಾರ್ ಆಯ್ಕೆಯನ್ನು ಫ್ರಾಂಚೈಸಿಯ ಜೀವಾಳ ವಿರಾಟ್ ಕೊಹ್ಲಿ ಶ್ಲಾಘಿಸಿದ್ದಾರೆ.
𝐊𝐢𝐧𝐠 𝐊𝐨𝐡𝐥𝐢 𝐀𝐩𝐩𝐫𝐨𝐯𝐞𝐬! 💌
“Myself and the other team members will be right behind you, Rajat”: Virat Kohli
“The way you have grown in this franchise and the way you have performed, you’ve made a place in the hearts of all RCB fans. This is very well deserved.”… pic.twitter.com/dgjDLm8ZCN
— Royal Challengers Bengaluru (@RCBTweets) February 13, 2025
Advertisement
ಕೊಹ್ಲಿ ಫಸ್ಟ್ ರಿಯಾಕ್ಷನ್ ಏನು?
ರಜತ್ ಪಾಟಿದಾರ್ ನಾಯಕನಾಗಿ ಆಯ್ಕೆಗೊಳ್ಳುತ್ತಿದ್ದಂತೆ ಮಾಜಿ ನಾಯಕ ವಿರಾಟ್ ಕೊಹ್ಲಿ ಶುಭಾಶಯ ಕೋರಿದ್ದಾರೆ. ಆರ್‌ಸಿಬಿ ತಂಡವನ್ನು ಪ್ರತಿನಿಧಿಸುತ್ತಿರುವ ರಜತ್ ನಾಯಕ ಸ್ಥಾನಕ್ಕೆ ಅರ್ಹರಾಗಿದ್ದಾರೆ. ನಾನು ಮತ್ತು ಆರ್‌ಸಿಬಿ ತಂಡ ಸದಾ ರಜತ್ ಅವರಿಗೆ ಬೆಂಬಲ ನೀಡುತ್ತೇವೆ. ಆರ್‌ಸಿಬಿ ನಿಮಗೆ ನಾಯಕನ ದೊಡ್ಡ ಜವಾಬ್ದಾರಿ ನೀಡಿದೆ. RCB ಅಭಿಮಾನಿಗಳು ಕೂಡ ನೂತನ ನಾಯಕನಿಗೆ ಬೆಂಬಲ ನೀಡಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ. ಕೊಹ್ಲಿಯ ಈ ಮಾತು ಆರ್‌ಸಿಬಿ ಅಭಿಮಾನಿಗಳ ಮನ ಗೆದ್ದಿದೆ.
Advertisement
Advertisement
ಸಮಾನ್ಯವಾಗಿ ವಿರಾಟ್ ಕೊಹ್ಲಿ ಯುವ ಆಟಗಾರರನ್ನು ಪ್ರೋತ್ಸಾಹಿಸುವಲ್ಲಿ ಸದಾ ಮುಂದಿರುತ್ತಾರೆ. ಇದೀಗ ಪಾಟಿದಾರ್ಗೂ ಬೆಂಬಲ ನೀಡಿ ಮತ್ತು ತಮ್ಮ ಅಭಿಮಾನಿಗಳಿಗೂ ಬೆಂಬಲ ನೀಡುವಂತೆ ಕೋರಿದ್ದು ಇದಕ್ಕೆ ಫ್ಯಾನ್ಸ್ ಫಿದಾ ಆಗಿದ್ದಾರೆ. ಇದನ್ನೂ ಓದಿ: UnSold ಪ್ಲೇಯರ್, ಟೂರ್ನಿ ಅರ್ಧದಲ್ಲೇ ಆರ್‌ಸಿಬಿ ಸೇರ್ಪಡೆ, ಸ್ಫೋಟಕ ಶತಕ ಸಿಡಿಸಿ ದಾಖಲೆ – ಪಾಟಿದಾರ್‌ಗೆ ನಾಯಕ ಪಟ್ಟ ಸಿಕ್ಕಿದ್ದು ಹೇಗೆ?
Advertisement
ರಜತ್ ಐಪಿಎಲ್ ದಾಖಲೆ:
ಈ ವರೆಗೂ ಆರ್‌ಸಿಬಿ ತಂಡದ ಪರ ರಜತ್ ಪಾಟಿದಾರ್ ಒಟ್ಟು 27 ಪಂದ್ಯಗಳನ್ನಾಡಿದ್ದಾರೆ. 24 ಇನ್ನಿಂಗ್ಸ್ಗಳಲ್ಲಿ 34.74ರ ಸರಾಸರಿಯಲ್ಲಿ ಒಟ್ಟು 779 ರನ್ ಕಲೆ ಹಾಕಿದ್ದಾರೆ. ಅದರಲ್ಲಿ 1 ಶತಕ, 7 ಅರ್ಧಶತಕ ಸೇರಿವೆ. 112ರನ್ ಐಪಿಎಲ್ನಲ್ಲಿ ಇವರ ವೈಯಕ್ತಿಕ ಗರಿಷ್ಠ ಸ್ಕೋರ್ ಆಗಿದೆ. ಇದನ್ನೂ ಓದಿ: ಆರ್‌ಸಿಬಿ ನಾಯಕನಾಗಿ ರಜತ್ ಪಾಟಿದಾರ್ ಆಯ್ಕೆ
ಐಪಿಎಲ್ 2025ರ RCB ತಂಡ:
ವಿರಾಟ್ ಕೊಹ್ಲಿ, ಫಿಲ್ ಸಾಲ್ಟ್, ಟಿಮ್ ಡೇವಿಡ್, ದೇವದತ್ ಪಡಿಕ್ಕಲ್, ಸ್ವಸ್ತಿಕ್ ಚಿಕಾರ, ರಜತ್ ಪಾಟಿದಾರ್ (ನಾಯಕ), ಕೃನಾಲ್ ಪಾಂಡ್ಯ, ಮನೋಜ್ ಭಾಂಡಗೆ, ಮೋಹಿತ್ ರಥಿ, ರೊಮಾರಿಯೊ ಶೆಫರ್ಡ್, ಜೇಕಬ್ ಬೆಥೆಲ್, ಲಿಯಾಮ್ ಲಿವಿಂಗ್‌ಸ್ಟೋನ್, ಸ್ವಪ್ನಿಲ್ ಸಿಂಗ್, ಜಿತೇಶ್ ಶರ್ಮಾ, ಜೋಶ್ ಹ್ಯಾಜಲ್‌ವುಡ್, ಭುವನೇಶ್ವರ್ ಕುಮಾರ್, ಲುಂಗಿ ಎಂಗಿಡಿ, ರಸಿಕ್ ದಾರ್ ಸಲಾಂ, ಸುಯಶ್ ಶರ್ಮಾ, ಯಶ್ ದಯಾಳ್, ನುವಾನ್ ತುಷಾರ, ಅಭಿನಂದನ್ ಸಿಂಗ್.