ಕೊಹ್ಲಿ, ಟಿಮ್ ಪೈನೆ ನಡುವೆ ಮಾತಿನ ಕಾಳಗ – ವಿಡಿಯೋ ವೈರಲ್

Public TV
2 Min Read
kohli pine

ಪರ್ತ್: ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ 2ನೇ ಟೆಸ್ಟ್ ಪಂದ್ಯದ 4ನೇ ದಿನದಾಟದ ವೇಳೆ ಇತ್ತಂಡ ನಾಯಕರು ಪರಸ್ಪರ ಎದುರಾಗಿ ಮಾತಿನ ಕಾಳಗ ನಡೆಸಿದ್ದಾರೆ.

ದಿನದಾಟದ ಆರಂಭ ಮೊದಲ ಅವಧಿಯಲ್ಲಿ ಆಸೀಸ್ ತಂಡ ಬ್ಯಾಟಿಂಗ್ ನಡೆಸುತ್ತಿದ್ದ ಸಮಯದಲ್ಲಿ ಘಟನೆ ನಡೆದಿದೆ. ಬುಮ್ರಾ ಬೌಲ್ ಮಾಡುತ್ತಿದ್ದ 71 ಓವರ್ ನಲ್ಲಿ ಕೊಹ್ಲಿ ನಾನ್ ಸ್ಟ್ರೈಕರ್ ಎಂಡ್ ಬಳಿಕ ಫೀಲ್ಡ್ ಮಾಡಲು ನಿರ್ಧರಿಸಿದ್ದರು. ಈ ಸಂದರ್ಭದಲ್ಲಿ ರನ್ ಓಡುತ್ತಿದ್ದ ಟಿಮ್ ಪೈನೆಗೆ ಅಡ್ಡ ಬಂದ ಕೊಹ್ಲಿ ಹತ್ತಿರ ಬಂದು ಮುಖಾಮುಖಿಯಾಗಿ ನಿಂತಿದ್ದರು. ಆಗ ಇಬ್ಬರ ನಡುವೆ ಕೆಲ ಮಾತುಗಳು ಅದಲು ಬದಲಾಯಿತು. ಇದನ್ನು ಕಂಡ ಅಂಪೈರ್ ಇಬ್ಬರು ಆಟಗಾರರಿಗೂ ನೀವು ತಂಡದ ನಾಯಕರು, ಇಲ್ಲಿಗೆ ಬಿಡಿ ಎಂದು ಬುದ್ಧಿವಾದ ಹೇಳಿದ್ದಾರೆ.

https://twitter.com/DRajuanandhan/status/1074526502383845377?

ಸದ್ಯ ಕೊಹ್ಲಿ, ಪೈನೆ ನಡುವಿನ ಮಾತಿನ ಚಕಮಕಿಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇತ್ತ ಕೊಹ್ಲಿ ನಡೆಯನ್ನೇ ಅವಕಾಶವಾಗಿ ಬಳಕೆ ಮಾಡಿಕೊಂಡ ಆಸೀಸ್ ಅಭಿಮಾನಿಗಳು ಕೊಹ್ಲಿ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಕಿಡಿಕಾರಿದ್ದಾರೆ.

ಇಬ್ಬರು ನಾಯಕರ ನಡುವಿನ ವಾಕ್ ಯುದ್ಧದ ಬಳಿಕ ಆಸ್ಟ್ರೇಲಿಯಾ ಪ್ಯಾಟ್ ಕಮ್ಮಿನ್ಸ್ ಟೀಂ ಇಂಡಿಯಾದ ಮುರಳಿ ವಿಜಯ್‍ರನ್ನ ಸ್ಲೆಡ್ಜಿಂಗ್ ಮಾಡಿದ ಘಟನೆಯೂ ನಡೆಯಿತು. ಟೀಂ ಇಂಡಿಯಾ 2ನೇ ಇನ್ನಿಂಗ್ಸ್ ನಲ್ಲಿ ಆರಂಭಿಕ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಈ ವೇಳೆ ಪ್ಯಾಟ್ ಮುರಳಿ ವಿಜಯ್ ಬಳಿ ಕೊಹ್ಲಿ ಕುರಿತು ಮಾತನಾಡಿ ಕಾಲೆಳೆಯಲು ಪ್ರಯತ್ನಿಸಿದ್ದರು. ಪ್ಯಾಟ್ ಸ್ಲೆಡ್ಜಿಂಗ್ ಮಾಡುತ್ತಿರುವ ಧ್ವನಿ ಸ್ಟಂಪ್ ಮೈಕಿನಲ್ಲಿ ದಾಖಲಾಗಿದೆ.

ಪಂದ್ಯದ 3ನೇ ದಿನದಾಟದ ವೇಳೆಯೂ ಕೊಹ್ಲಿ, ಪೈನೆ ಇಂತಹದ್ದೆ ಪ್ರಸಂಗ ನಡೆದಿತ್ತು. 3ನೇ ದಿನದ ಅಂತಿಮ ಅವಧಿಯಲ್ಲಿ ಫೀಲ್ಡಿಂಗ್ ಮಾಡುತ್ತಿದ್ದ ಕೊಹ್ಲಿರನ್ನು ಟಿಮ್ ಪೈನೆ ಕೆಣಕಲು ಯತ್ನಿಸಿದ್ದರು. ಆದರೆ ಇದಕ್ಕೆ ತಕ್ಕ ಪ್ರತ್ಯುತ್ತರ ಕೊಟ್ಟ ಕೊಹ್ಲಿ, ನನ್ನನ್ನು ಕೆಣಕಿದರೆ 2-0 ಆಗುತ್ತೆ ಎಂದು ಎಚ್ಚರಿಕೆ ನೀಡಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿದ್ದ ಪೇನೆ ಮೊದಲು ನೀವು ಬ್ಯಾಟಿಂಗ್ ಮಾಡಿ, ಬಿಗ್ ಹೇಡ್ ಎಂದು ಕರೆದಿದ್ದರು. ಈ ವಿಡಿಯೋ ಕೂಡ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿತ್ತು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *