Connect with us

Cricket

ಸೀಕ್ರೆಟ್ ಸಾಂತಾ ಆಗಿ ಮಕ್ಕಳ ಜೊತೆ ವಿರಾಟ್ ಕ್ರಿಸ್ಮಸ್ ಆಚರಣೆ: ವಿಡಿಯೋ

Published

on

ಕೋಲ್ಕತ್ತಾ: ಭಾರತ್ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ‘ಸೀಕ್ರೆಟ್ ಸಾಂತಾ’ ಆಗಿ ಪಶ್ಚಿಮ ಬಂಗಳಾದ ಕೋಲ್ಕತ್ತಾದಲ್ಲಿರುವ ದೀನದಲಿತರ ಮಕ್ಕಳ ಜೊತೆ ಕ್ರಿಸ್ಮಸ್ ಹಬ್ಬವನ್ನು ಆಚರಿಸಿದ್ದಾರೆ.

ಖಾಸಗಿ ವಾಹಿನಿಯೊಂದು ಈ ವಿಡಿಯೋವನ್ನು ತನ್ನ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದೆ. ಈ ವಿಡಿಯೋದಲ್ಲಿ ಕೋಲ್ಕತ್ತಾದ ಆಶ್ರಮದಲ್ಲಿರುವ ಮಕ್ಕಳು ತಮ್ಮ ನೆಚ್ಚಿನ ಕ್ರೀಡಾಪಟುಗಳಾದ ಸಚಿನ್ ತೆಂಡೂಲ್ಕರ್, ಎಂ.ಎಸ್ ಧೋನಿ, ಕ್ರಿಸ್ಟಿಯಾನೊ ರೊನಾಲ್ಡೊ, ಪಿ.ವಿ ಸಿಂಧು ಹಾಗೂ ಕ್ರಿಸ್ಮೆಸ್ ಸಮಯದಲ್ಲಿ ಇಷ್ಟವಾಗುವ ವಸ್ತುಗಳನ್ನು ನೀಡಬೇಕೆಂದು ಹೇಳಿದ್ದಾರೆ. ಮಕ್ಕಳು ಮಾತನಾಡಿದ ಈ ವಿಡಿಯೋವನ್ನು ವಿರಾಟ್ ಅವರು ನೋಡಿದ್ದಾರೆ. ಇದನ್ನೂ ಓದಿ: ಸಂತಾಕ್ಲಾಸ್ ಡ್ರೆಸ್ ಧರಿಸಿದ ಸಚಿನ್ – ಅನಾಥ ಮಕ್ಕಳೊಂದಿಗೆ ಕ್ರಿಸ್ಮಸ್ ಆಚರಣೆ

ಮಕ್ಕಳ ವಿಡಿಯೋ ನೋಡಿದ ನಂತರ ವಿರಾಟ್ ಸಾಂತಾ ಕ್ಲಾಸ್‍ನಂತಯೆ ಉಡುಪು ಧರಿಸಿ, ಮಕ್ಕಳಿಗೆ ಉಡುಗೊರೆಯನ್ನು ಹಂಚಿದ್ದಾರೆ. ಉಡುಗೊರೆ ಎಲ್ಲ ಹಂಚಿದ ಬಳಿಕ ವಿರಾಟ್ ತಾವು ಹಾಕಿದ ನಕಲಿ ಗಡ್ಡವನ್ನು ತೆಗೆದಿದ್ದಾರೆ. ವಿರಾಟ್‍ರನ್ನು ನೋಡುತ್ತಿದ್ದಂತೆ ಮಕ್ಕಳು ಮೊದಲು ಶಾಕ್ ಆಗಿ ನಂತರ ಖುಷಿಪಟ್ಟಿದ್ದಾರೆ. ಅಲ್ಲದೆ ವಿರಾಟ್‍ರನ್ನು ತಬ್ಬಿಕೊಳ್ಳುವ ಮೂಲಕ ಸಂತಸ ವ್ಯಕ್ತಪಡಿಸಿದ್ದಾರೆ.

ವಿಡಿಯೋ ಕೊನೆಯಲ್ಲಿ ವಿರಾಟ್, ಈ ಮಕ್ಕಳು ವರ್ಷವಿಡೀ ನಮಗೆ ಬೆಂಬಲಿಸುತ್ತಾರೆ. ಮಕ್ಕಳ ಜೊತೆ ಸಮಯ ಕಳೆದಿದ್ದು ಹಾಗೂ ಅವರನ್ನು ಸಂತೋಷ ತಂದ ಕ್ಷಣ ಅದ್ಭುತವಾಗಿತ್ತು. ನಾನು ಎಲ್ಲರಿಗೂ ಕ್ರಿಸ್ಮಸ್ ಹಬ್ಬದ ಹಾಗೂ ಹೊಸ ವರ್ಷದ ಶುಭಾಶಯಗಳನ್ನು ಹೇಳಲು ಇಷ್ಟಪಡುತ್ತೇನೆ ಎಂದು ಹೇಳಿದ್ದಾರೆ. ವಿರಾಟ್ ಅವರ ಈ ಕೆಲಸಕ್ಕೆ ನೆಟ್ಟಿಗರು ಸಾಕಷ್ಟು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

Click to comment

Leave a Reply

Your email address will not be published. Required fields are marked *