– ವಿರಾಟ್ ವಿನಯತೆಗೆ ಫ್ಯಾನ್ಸ್ ಮೆಚ್ಚುಗೆ
ದುಬೈ: ಕೆಲ ದಿನಗಳ ಹಿಂದಷ್ಟೆ ಬದ್ಧವೈರಿ ಪಾಕ್ ತಂಡದ ಬೌಲರ್‌ನ ಶೂಲೇಸ್ ಕಟ್ಟುವ ಮೂಲಕ ಮೆಚ್ಚುಗೆಗೆ ಪಾತ್ರರಾಗಿದ್ದ ವಿರಾಟ್ ಕೊಹ್ಲಿ (Virat Kohli), ಈಗ ಮತ್ತೊಂದು ವಿಚಾರಕ್ಕೆ ಸುದ್ದಿಯಲ್ಲಿದ್ದಾರೆ. ಐಸಿಸಿ ಚಾಂಪಿಯನ್ಸ್ ಟ್ರೋಫಿ (Champions Trophy 2025) ಗೆದ್ದ ಸಂಭ್ರಮದಲ್ಲಿದ್ದಾಗ ಬೌಲರ್ ಮೊಹಮ್ಮದ್ ಶಮಿ ಅವರ ತಾಯಿ ಕಾಲು ಮುಟ್ಟಿ ಆಶೀರ್ವಾದ ಪಡೆದು ಕೊಹ್ಲಿ ಗಮನ ಸೆಳೆದಿದ್ದಾರೆ.
Advertisement
ಭಾರತದ ಐತಿಹಾಸಿಕ ಗೆಲುವಿನ ಸಂಭ್ರಮದ ನಡುವೆ, ಕೊಹ್ಲಿ ಮತ್ತು ಮೊಹಮ್ಮದ್ ಶಮಿ (Mohammed Shami) ಅವರ ತಾಯಿ ಅಂಜುಮ್ ಅರಾ ನಡುವಿನ ಹೃದಯಸ್ಪರ್ಶಿ ಕ್ಷಣ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಕಾಲಿನ ಗಾಯದಿಂದಾಗಿ ಒಂದು ವರ್ಷದ ವಿರಾಮದ ನಂತರ ತಮ್ಮ ಮಗ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಮರಳುವುದನ್ನು ವೀಕ್ಷಿಸಲು ದುಬೈಗೆ ಬಂದಿದ್ದರು. ಪಂದ್ಯದ ನಂತರ ಕೊಹ್ಲಿ, ಶಮಿ ಅವರ ತಾಯಿಯನ್ನು ಭೇಟಿಯಾದರು. ಕೊಹ್ಲಿ ಭಾವುಕರಾಗಿ ಶಮಿ ಅವರ ತಾಯಿಯ ಬಳಿಗೆ ಬಂದು ಗೌರವದ ಸಂಕೇತವಾಗಿ ಅವರ ಪಾದಗಳನ್ನು ಮುಟ್ಟಿ ಆಶೀರ್ವಾದ ಪಡೆದರು. ಶಮಿ ತಾಯಿ ಕೂಡ ಕೊಹ್ಲಿ ತಲೆ ಮುಟ್ಟಿ ಆಶೀರ್ವದಿಸಿದರು. ಈ ಭಾವುಕ ಕ್ಷಣದ ವೀಡಿಯೋ ವೈರಲ್ ಆಗಿದ್ದು, ಜನಮೆಚ್ಚುಗೆ ಗಳಿಸಿದೆ. ಇದನ್ನೂ ಓದಿ: ರೋಹಿತ್ ಪಂದ್ಯಶ್ರೇಷ್ಠ – ಧೋನಿ ಬಳಿಕ ಈ ಸಾಧನೆ ಮಾಡಿದ 2ನೇ ಭಾರತೀಯ ಕ್ಯಾಪ್ಟನ್
Advertisement
Here is the clip https://t.co/MBWpwfp45U pic.twitter.com/zHE3A8KTAR
— 🇳🇿 (@whyrattkuhli) March 9, 2025
Advertisement
ಆಟಗಾರರ ನಡುವಿನ ಬಲವಾದ ಸೌಹಾರ್ದತೆ ಮತ್ತು ಗೌರವವನ್ನು ಇದು ಎತ್ತಿ ತೋರಿಸಿದೆ. ನಂತರ ವಿರಾಟ್ ಮತ್ತು ಶಮಿ ಅವರ ತಾಯಿ ಜೊತೆ ಫೋಟೊ ತೆಗೆಸಿಕೊಂಡರು. ಪರಸ್ಪರರು ಕುಶಲೋಪರಿ ವಿಚಾರಿಸಿದರು.
Advertisement
ಭಾನುವಾರ ನಡೆದ ಐಸಿಸಿ ಚಾಂಪಿಯನ್ಸ್ ಟ್ರೋಫಿ ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ (New Zealand) ವಿರುದ್ಧ 4 ವಿಕೆಟ್‌ಗಳ ಗೆಲುವು ಸಾಧಿಸುವ ಮೂಲಕ ಭಾರತ 3ನೇ ಬಾರಿಗೆ ಚಾಂಪಿಯನ್ಸ್ ಟ್ರೋಫಿ (Champions Trophy) ಕಿರೀಟ ಮುಡಿಗೇರಿಸಿಕೊಂಡಿದೆ. 2024ರಲ್ಲಿ ರೋಹಿತ್ ಶರ್ಮಾ ನಾಯಕತ್ವದಲ್ಲಿ ಟಿ20 ವಿಶ್ವಕಪ್ ಗೆದ್ದಿದ್ದ ಭಾರತಕ್ಕಿದು ಸತತ 2ನೇ ಐಸಿಸಿ ಟ್ರೋಫಿ ಆಗಿರುವುದು ವಿಶೇಷ.
ದುಬೈನ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ್ದ ನ್ಯೂಜಿಲೆಂಡ್ 50 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 251 ರನ್ ಗಳಿಸಿತ್ತು. ಸ್ಪರ್ಧಾತ್ಮಕ ಮೊತ್ತದ ಗುರಿ ಬೆನ್ನಟ್ಟಿದ ಭಾರತ (Team India) 49 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 254 ರನ್ ಗಳಿಸಿ ಗೆಲುವು ಸಾಧಿಸಿತು. ಸಂಘಟಿತ ಬೌಲಿಂಗ್, ಬ್ಯಾಟಿಂಗ್ ಪ್ರದರ್ಶನದೊಂದಿಗೆ 2000 ಇಸವಿಯಲ್ಲಿ ಕಿವೀಸ್ ವಿರುದ್ಧ ಫೈನಲ್ ಸೋಲಿಗೆ ಸೇಡು ತೀರಿಸಿಕೊಂಡಿತು. ಇದನ್ನೂ ಓದಿ: 140 ಕೋಟಿ ಭಾರತೀಯರ ಕನಸು ನನಸು – ಚಾಂಪಿಯನ್ಸ್‌ಗಳಿಗೆ ಚಾಂಪಿಯನ್ಸ್ ಟ್ರೋಫಿ ಕಿರೀಟ!