ದುಬೈ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಐಸಿಸಿ ಶ್ರೇಯಾಂಕ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದಿದ್ದು, 911 ಅಂಕಗಳೊಂದಿಗೆ ಜೀವಮಾನ ಶ್ರೇಷ್ಠ ಸಾಧನೆ ಮಾಡಿದ್ದಾರೆ.
ಇಂಗ್ಲೆಂಡ್ ವಿರುದ್ಧ ಏಕದಿನ ಸರಣಿಯಲ್ಲಿ 75, 45, 71 ರನ್ ಗಳಿಸುವ ಮೂಲಕ ಕೊಹ್ಲಿ 2 ಅಂಕಗಳು ಮಾತ್ರ ಪಡೆಯಲು ಸಾಧ್ಯವಾಗಿದೆ. ಇನ್ನು ಬೌಲಿಂಗ್ ನಲ್ಲಿ ಟೀಂ ಇಂಡಿಯಾ ಬೌಲರ್ ಕುಲ್‍ದೀಪ್ ಯಾದವ್ ಮೊದಲ ಬಾರಿಗೆ ಟಾಪ್ 10 ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದಾರೆ. ಇಂಗ್ಲೆಂಡ್ ವಿರುದ್ಧ ಮೊದಲ ಪಂದ್ಯದಲ್ಲಿ ಭರ್ಜರಿ ಪ್ರದರ್ಶನ ತೋರಿದ್ದ ಯಾದವ್ 6 ವಿಕೆಟ್ ಮಿಂಚಿದ್ದರು. ಅಲ್ಲದೇ ಸರಣಿಯಲ್ಲಿ ಒಟ್ಟಾರೆ 9 ವಿಕೆಟ್ ಪಡೆಯುವ ಮೂಲಕ ಶ್ರೇಯಾಂಕ ಪಟ್ಟಿಯಲ್ಲಿ 6ನೇ ಸ್ಥಾನ ಪಡೆದಿದ್ದಾರೆ. ಇಂಗ್ಲೆಂಡ್ ವಿರುದ್ಧ ಸರಣಿ ಮುಕ್ತಾಯದ ಬೆನ್ನಲ್ಲೇ ಐಸಿಸಿ ಶ್ರೇಯಾಂಕ ಪಟ್ಟಿ ಪ್ರಕಟವಾಗಿದೆ.
He may have dropped his bat, but @root66 hasn't dropped in the @MRFWorldwide ODI Rankings – he's up to second!
Meanwhile, @imkuldeep18 soars into the top 10 bowlers!
➡️ https://t.co/Zafxab2uVI pic.twitter.com/ArJBg7Qb5h
— ICC (@ICC) July 18, 2018
ಬೌಲಿಂಗ್ ಪಟ್ಟಿಯಲ್ಲಿ ಟೀಂ ಇಂಡಿಯಾ ಆಟಗಾರ ಜಸ್ಪ್ರೀತ್ ಬುಮ್ರಾ ನಂ.01 ಸ್ಥಾನದಲ್ಲಿದ್ದು, ವಿಶೇಷವಾಗಿ ಟಾಪ್ 10 ಬೌಲರ್ ಗಳಲ್ಲಿ ಐವರು ಸ್ಪೀನ್ ಬೌಲರ್ ಗಳಿದ್ದಾರೆ. ರಶೀದ್ ಖಾನ್ (2ನೇ ಸ್ಥಾನ), ಇಮ್ರಾನ್ ತಹೀರ್ (7ನೇ ಸ್ಥಾನ), ಅದಿಲ್ ರಶೀದ್ (8ನೇ ಸ್ಥಾನ) ಹಾಗೂ ಯಜುವೇಂದ್ರ ಚಹಲ್ (10ನೇ ಸ್ಥಾನ) ಪಟ್ಟಿಯಲ್ಲಿರುವ ಸ್ಪಿನ್ನರ್ ಗಳಾಗಿದ್ದಾರೆ.
ಇಂಗ್ಲೆಂಡ್ ಬ್ಯಾಟ್ಸ್ ಮನ್ ಸತತ ಎರಡು ಶತಕ ಗಳಿಸಿ ಬ್ಯಾಟಿಂಗ್ ನಲ್ಲಿ 2ನೇ ಸ್ಥಾನಕ್ಕೆ ಜಿಗಿದ್ದು, ಪಾಕಿಸ್ತಾನದ ಬಾಬರ್ ಅಜಮ್ 3ನೇ ಸ್ಥಾನಕ್ಕೆ ಕುಸಿದಿದ್ದಾರೆ. ಇನ್ನು ಐಸಿಸಿ ಆಲ್ ರೌಂಡರ್ ಪಟ್ಟಿಯಲ್ಲಿ ಯಾವುದೇ ಬದಲಾವಣೆ ಆಗದೆ ಶಕೀಬ್ ಹಲ್ ಹಸನ್ ಮೊದಲ ಸ್ಥಾನದಲ್ಲಿ ಮುಂದುವರೆದಿದ್ದಾರೆ.