ಮುಂಬೈ: ಬಿಸಿಸಿಐ ನೀಡುವ ಪಾಲಿ ಉಮ್ರಿಗರ್ ಶ್ರೇಷ್ಠ ಅಂತಾರಾಷ್ಟ್ರೀಯ ಕ್ರಿಕೆಟಿಗ ಪ್ರಶಸ್ತಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಗೆ ಸಿಕ್ಕಿದೆ.
ಈ ಕುರಿತು ಮಾಹಿತಿ ನೀಡಿರುವ ಬಿಸಿಸಿಐ ಮುಂದಿನ ಮಂಗಳವಾರ ಬೆಂಗಳೂರಿನಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ನೀಡಲಾಗುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ. 2016-17 ಹಾಗೂ 2017-18 ಸಾಲಿನಲ್ಲಿ ಕೊಹ್ಲಿ ಅವರು ನೀಡಿರುವ ಪ್ರದರ್ಶನವನ್ನು ಪರಿಗಣಿಸಿ 15 ಲಕ್ಷ ರೂ. ಮೌಲ್ಯದ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
Advertisement
ಬಿಸಿಸಿಐ ನೀಡುವ ಪ್ರಶಸ್ತಿಗಳಲ್ಲಿ ಪುರುಷ ವಿಭಾಗದ ಉನ್ನತ ಪ್ರಶಸಿಯನ್ನು ಕೊಹ್ಲಿ ಪಡೆಯುತ್ತಿದ್ದಾರೆ. ಉಳಿದಂತೆ ಟೀಂ ಇಂಡಿಯಾ ಮಹಿಳಾ ಕ್ರಿಕೆಟ್ ತಂಡದ ಆಟಗಾರ್ತಿ ಹರ್ಮನ್ ಪ್ರೀತ್ ಕೌರ್ ಮತ್ತು ಸ್ಮೃತಿ ಮಂದಣ್ಣ ಅವರು ಉತ್ತಮ ಮಹಿಳಾ ಅಂತರಾಷ್ಟ್ರೀಯ ಕ್ರಿಕೆಟ್ ಆಟಗಾರ್ತಿ ಪ್ರಶಸ್ತಿಗೆ ಆಯ್ಕೆ ಆಗಿದ್ದಾರೆ.
Advertisement
Advertisement
ಉಳಿದಂತೆ ಅಂಡರ್ 16 ವಿಜಯ್ ಹರಾರೆ ಟ್ರೋಫಿಯಲ್ಲಿ ಹೆಚ್ಚು ರನ್ ಹಾಗೂ ವಿಕೆಟ್ ಪಡೆದಿರುವ ಆಟಗಾರರಿಗೆ ಜಗ್ ಮೋಹನ್ ದಾಲ್ಮಿಯ ಪ್ರಶಸ್ತಿ ಯನ್ನು ಪ್ರಧಾನ ಮಾಡಲಿದೆ. ಅಲ್ಲದೇ ಬೆಸ್ಟ್ ಜೂನಿಯರ್ ಹಾಗೂ ಸೀನಿಯರ್ ಕ್ರಿಕೆಟ್ ಪ್ರಶಸ್ತಿಯನ್ನು ನೀಡುತ್ತದೆ.
Advertisement
9 ವಿವಿಧ ವಿಭಾಗದಲ್ಲಿ ನೀಡುತ್ತಿದ್ದ ಬಹುಮಾನದ ಮೊತ್ತವನ್ನು 1 ಲಕ್ಷ ರೂ. ನಿಂದ 1.5 ಲಕ್ಷ ರೂ. ಗೆ ಏರಿಸಿದೆ. ಬೆಂಗಾಲ್ ಕ್ರಿಕೆಟ್ ಸಂಸ್ಥೆ (ಸಿಎಬಿ) 2016-17 ನೇ ಸಾಲಿನಲ್ಲಿ ಬಿಸಿಸಿಐ ದೇಶಿಯ ಕ್ರಿಕೆಟ್‍ನಲ್ಲಿ ತೋರಿದ ಪ್ರದರ್ಶನಕ್ಕಾಗಿ ಉತ್ತಮ ಕ್ರಿಕೆಟ್ ಸಂಸ್ಥೆ ಪ್ರಶಸ್ತಿಯನ್ನು ಪಡೆದುಕೊಂಡಿದೆ. 2017-18 ಸಾಲಿನಲ್ಲಿ ಡೆಲ್ಲಿ ಮತ್ತು ಜಿಲ್ಲಾ ಕ್ರಿಕೆಟ್ ಸಂಸ್ಥೆ ಪ್ರಶಸ್ತಿ ಪಡೆದಿದೆ.
ಈ ಕುರಿತು ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿರುವ ಬಿಸಿಸಿಐ ವಾರ್ಷಿಕ ಪ್ರಶಸ್ತಿಗೆ ಆಯ್ಕೆ ಆಗಿರುವ ಎಲ್ಲರಿಗೂ ಶುಭಾಶಯ ತಿಳಿಸಿದೆ. ಅಲ್ಲದೇ ಆಟಗಾರರು ಹಾಗೂ ಕ್ರಿಕೆಟ್ ಸಂಸ್ಥೆಗಳು ತೋರಿದ ಸಾಧನೆಗೆ ಪ್ರಶಂಸೆ ವ್ಯಕ್ತಪಡಿಸಿದೆ. ಅಫ್ಘಾನಿಸ್ತಾನ ವಿರುದ್ಧ ನಡೆಯಲಿರುವ ಮೊದಲ ಟೆಸ್ಟ್ ಪಂದ್ಯದ ವೇಳೆ ಈ ಪ್ರಶಸ್ತಿಗಳನ್ನು ಪ್ರಧಾನ ಮಾಡಲಾಗುತ್ತದೆ.