ದುಬೈ: ವಿರಾಟ್ ಕೊಹ್ಲಿಗೆ ಜಾಗತಿಕ ಕ್ರಿಕೆಟ್ ವಲಯದಲ್ಲಿ ವಿಶೇಷ ಸ್ಥಾನಮಾನವಿದೆ. ಆದರೂ ಮೈದಾನದಲ್ಲಿ ಕೆಲವೊಮ್ಮೆ ಅವರು ಸರಳ ವ್ಯಕ್ತಿಯಂತೆ ನಡೆದುಕೊಳ್ಳುವ ರೀತಿ ಅಭಿಮಾನಿಗಳಿಗೆ ಮೆಚ್ಚು. ಅದಕ್ಕೆ ನಿದರ್ಶನವೆಂಬಂತೆ ಘಟನೆಯೊಂದು ನಡೆದಿದೆ. ವಿರಾಟ್ ಕೊಹ್ಲಿ ಆಟದ ಮಧ್ಯೆ ಪಾಕ್ ತಂಡದ ಬೌಲರ್ ನಸೀಮ್ ಷಾ ಅವರ ಶೂ ಲೇಸ್ ಕಟ್ಟಿ ಸರಳತೆ ಮೆರೆದಿದ್ದಾರೆ.
ವಿರಾಟ್ ಕೊಹ್ಲಿ ವಿಶ್ವದ ಅತ್ಯುತ್ತಮ ಬ್ಯಾಟ್ಸ್‌ಮನ್. 2025 ರ ಭಾರತ-ಪಾಕಿಸ್ತಾನ ಚಾಂಪಿಯನ್ಸ್ ಟ್ರೋಫಿ ಪಂದ್ಯದಲ್ಲಿ ಪಾಕ್ ಬ್ಯಾಟಿಂಗ್ ವೇಳೆ ನಾನ್-ಸ್ಟ್ರೈಕರ್‌ನಲ್ಲಿದ್ದ ನಸೀಮ್ ಷಾ, ಕೊಹ್ಲಿಯನ್ನು ತನ್ನ ಶೂಲೇಸ್‌ಗಳನ್ನು ಕಟ್ಟಲು ಕೇಳಿಕೊಂಡರು. ಇದಕ್ಕೆ ಭಾರತದ ಮಾಜಿ ನಾಯಕ ಒಪ್ಪಿಗೆ ಸೂಚಿಸಿ ಶೂಲೇಸ್ ಕಟ್ಟಿದ್ದಾರೆ. ಈ ಅಪರೂಪದ ಕ್ಷಣವನ್ನು ಕ್ಯಾಮೆರಾದಲ್ಲಿ ಸೆರೆ ಹಿಡಿಯಲಾಗಿದೆ.
Advertisement
ಸಾಮಾನ್ಯ ವ್ಯಕ್ತಿಯಂತೆ ಎದುರಾಳಿ ತಂಡದ ಆಟಗಾರನ ಶೂಲೇಸ್ ಕಟ್ಟಿದ ಕೊಹ್ಲಿ ನಡೆಗೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸರಳತೆ ಅಂದ್ರೆ ಇದು ಎಂದು ಬಣ್ಣಿಸಿದ್ದಾರೆ. ವೈರಲ್ ಆಗಿರುವ ದೃಶ್ಯಗಳು ಹೃದಯಸ್ಪರ್ಶಿಯಾಗಿವೆ.
Advertisement
ಕಿಂಗ್ ಕೊಹ್ಲಿ ಆಕರ್ಷಕ ಶತಕ, ಶ್ರೇಯಸ್ ಫಿಫ್ಟಿ ಆಟದಿಂದ ಹೈವೋಲ್ಟೇಜ್ ಪಂದ್ಯದಲ್ಲಿ ಪಾಕ್ ವಿರುದ್ಧ ಟೀಂ ಇಂಡಿಯಾ 6 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ.
Advertisement
ಭಾರತದ ಶಿಸ್ತುಬದ್ಧ ಬೌಲಿಂಗ್‌ಗೆ ಪಾಕಿಸ್ತಾನ ಸಾಧಾರಣ ಮೊತ್ತ ಕಲೆ ಹಾಕಿತ್ತು. 49.4 ಓವರ್‌ಗೆ ಪಾಕ್ ತನ್ನೆಲ್ಲ ವಿಕೆಟ್ ಕಳೆದುಕೊಂಡು 241 ರನ್ ಗಳಿಸಿತ್ತು. 242 ರನ್ ಗುರಿ ಬೆನ್ನತ್ತಿದ ಭಾರತ 3 ವಿಕೆಟ್ ಕಳೆದುಕೊಂಡು 42.3 ಓವರ್‌ಗಳಲ್ಲಿ ಗುರಿ ತಲುಪಿತು.