ಮುಂಬೈ: ಒಂದು ಕಡೆ ವಯಸ್ಸು-ಫಿಟ್ನೆಸ್ ಕಾರಣ ಮುಂದಿಟ್ಟು ನಿವೃತ್ತಿಯ ಚರ್ಚೆ ನಡೆಯುತ್ತಿದ್ದರೆ, ಮತ್ತೊಂದು ಕಡೆ ಈ ಇಬ್ಬರು ದಿಗ್ಗಜರು ಐಸಿಸಿ ರ‍್ಯಾಂಕಿಂಗ್‌ನಲ್ಲಿ (ICC Rankings) ಅಗ್ರಸ್ಥಾನಕ್ಕೆ ಪೈಪೋಟಿಗೆ ಬಿದ್ದಿದ್ದಾರೆ.
ಕಳೆದ ತಿಂಗಳಷ್ಟೇ ಆಸ್ಟ್ರೇಲಿಯಾ (Australia) ವಿರುದ್ಧದ ಏಕದಿನ ಸರಣಿಯಲ್ಲಿ ಭರ್ಜರಿ ಪ್ರದರ್ಶನ ನೀಡಿದ್ದ ರೋಹಿತ್ ಶರ್ಮಾ ಅವರು ಐಸಿಸಿ ಏಕದಿನ ಕ್ರಿಕೆಟ್ ಶ್ರೇಯಾಂಕ ಪಟ್ಟಿಯಲ್ಲಿ ಟೀಂ ಇಂಡಿಯಾ (Team India) ನಾಯಕ ಶುಭಮನ್ ಗಿಲ್ ಅವರನ್ನು ಹಿಂದಿಕ್ಕಿ ಅಗ್ರಸ್ಥಾನಕ್ಕೇರಿದ್ದರು. ಈಗಲೂ ಅಗ್ರಸ್ಥಾನದಲ್ಲೇ ಮುಂದುವರಿದಿದ್ದಾರೆ.
ಇದೀಗ ದಕ್ಷಿಣ ಆಫ್ರಿಕಾ (South Africa) ವಿರುದ್ಧ ಸತತ 2 ಶತಕ, ಒಂದು ಅರ್ಧಶತಕ ಬಾರಿಸಿದ ಕಿಂಗ್ ಕೊಹ್ಲಿ ಐಸಿಸಿ ODI ರ‍್ಯಾಂಕಿಂಗ್‌ನಲ್ಲಿ 2ನೇ ಸ್ಥಾನಕ್ಕೆ ಜಿಗಿದಿದ್ದಾರೆ. ಇದು ರೊ-ಕೋ ಫಿಟ್ನೆಸ್ ಬಗ್ಗೆ ಮಾತನಾಡುವವರಿಗೆ ಕಪಾಳ ಮೋಕ್ಷ ಮಾಡಿದಂತಾಗಿದೆ. ಇದನ್ನೂ ಓದಿ: ಕ್ರಿಕೆಟ್ ಅಭಿಮಾನಿಗಳಿಗೆ ಸಿಹಿ ಸುದ್ದಿ ಸಿಗಲಿದೆ: ಸಿಎಂ, ಡಿಸಿಎಂ ಭೇಟಿಯಾದ ವೆಂಕಟೇಶ್ ಪ್ರಸಾದ್
ಟಾಪ್ 5ರಲ್ಲಿ 3 ಭಾರತೀಯರು
ಸದ್ಯ ಐಸಿಸಿ ಏಕದಿನ ಬ್ಯಾಟಿಂಗ್ ರ‍್ಯಾಂಕಿಂಗ್‌ನ ಅಗ್ರ ಐವರಲ್ಲಿ ಮೂರು ಸ್ಥಾನಗಳನ್ನ ಭಾರತೀಯರೇ ಆಕ್ರಮಿಸಿಕೊಂಡಿದ್ದಾರೆ. 781 ರೇಟಿಂಗ್ಸ್ ಹೊಂದಿರುವ ಮಾಜಿ ನಾಯಕ ರೋಹಿತ್ ಶರ್ಮಾ (Rohit Sharma) ಅಗ್ರಸ್ಥಾನದಲ್ಲಿದ್ದರೆ, 773 ರೇಟಿಂಗ್ಸ್ ಹೊಂದಿರುವ ಕೊಹ್ಲಿ 2ನೇ ಸ್ಥಾನದಲ್ಲಿದ್ದಾರೆ. ಇನ್ನೂ ಕಿವೀಸ್‌ನ ಡೇರಿಲ್ ಮಿಚೆಲ್ (766 ರೇಟಿಂಗ್ಸ್), ಅಫ್ಘಾನಿಸ್ತಾನದ ಇಬ್ರಾಹಿಂ ಝದ್ರಾನ್ (764 ರೇಟಿಂಗ್ಸ್)ನಲ್ಲಿದ್ದು 3-4ನೇ ಸ್ಥಾನದಲ್ಲಿದ್ದರೆ 723 ರೇಟಿಂಗ್ಸ್ ಹೊಂದಿರುವ ಹಾಲಿ ನಾಯಕ ಶುಭಮನ್ ಗಿಲ್ 5ನೇ ಸ್ಥಾನದಲ್ಲಿದ್ದಾರೆ. ಇದನ್ನೂ ಓದಿ: 20,000 ರನ್ – ದಿಗ್ಗಜರ ಎಲೈಟ್ ಲಿಸ್ಟ್ ಸೇರಿದ ರೋಹಿತ್; ಈ ಸಾಧನೆ ಮಾಡಿದ 4ನೇ ಭಾರತೀಯ
2018ರಲ್ಲಿ ಏಕದಿನ ಕ್ರಿಕೆಟ್‌ನಲ್ಲಿ ಅಗ್ರಸ್ಥಾನಕ್ಕೇರಿದ್ದ ಕೊಹ್ಲಿ ದೀರ್ಘಕಾಲ ಹಾಗೇ ಆ ಸ್ಥಾನವನ್ನ ಉಳಿಸಿಕೊಂಡಿದ್ದರು. ಆದ್ರೆ ಪಾಕ್‌ನ ಮಾಜಿ ನಾಯಕ ಬಾಬರ್ ಆಜಂ 2021ರಲ್ಲಿ ಕೊಹ್ಲಿಯನ್ನ ಹಿಂದಿಕ್ಕಿದರು. ಆಗಿನಿಂದ ಕೊಹ್ಲಿ ಏಕದಿನ ರ‍್ಯಾಂಕಿಂಗ್‌ನಲ್ಲಿ ನಂ.1 ಸ್ಥಾನಕ್ಕೆ ಬಂದೇ ಇಲ್ಲ. ಇನ್ನೂ ರೋಹಿತ್ ಶರ್ಮಾ 2019ರಲ್ಲಿ ನಂ.1ಸ್ಥಾನಕ್ಕೆ ಏರಿದ್ದರು. ಅದಾದ 6 ವರ್ಷಗಳ ಬಳಿಕ ನಂ.1 ಪಟ್ಟ ಅಲಂಕರಿಸಿದ್ದಾರೆ. ಇದನ್ನೂ ಓದಿ: RCB ಫ್ಯಾನ್ಸ್‌ಗೆ ಗುಡ್‌ನ್ಯೂಸ್ ಕೊಟ್ಟ ಡಿಕೆಶಿ – 2026ರ IPL ಬೆಂಗಳೂರಿನಲ್ಲೇ ಫಿಕ್ಸ್: ಖುದ್ದು ಡಿಸಿಎಂ ಘೋಷಣೆ



