ಲಂಡನ್: ನಾಟಿಂಗ್ ಟೆಸ್ಟ್ ಪಂದ್ಯದ ವೇಳೆ ಟೀಂ ಇಂಡಿಯಾ ಯುವ ಆಟಗಾರ ರಿಷಭ್ ಪಂತ್‍ರನ್ನು ನಿಂದಿಸಿದ್ದ ಸ್ಟುವರ್ಟ್ ಬ್ರಾಡ್‍ಗೆ ಕೊಹ್ಲಿ ಆನ್ ಫೀಲ್ಡ್ ನಲ್ಲೇ ತಿರುಗೇಟು ನೀಡಿದ್ದು, ಸದ್ಯ ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಇಂಗ್ಲೆಂಡ್ ವಿರುದ್ಧದ 3ನೇ ಟೆಸ್ಟ್ ಪಂದ್ಯಕ್ಕೆ ಪಂತ್ ಪಾದಾರ್ಪಣೆ ಮಾಡಿದ್ದು, ಮೊದಲ ಇನ್ನಿಂಗ್ಸ್ ನ 92 ನೇ ಓವರ್ ನಲ್ಲಿ 26 ರನ್ ಗಳಿಸಿದ್ದ ಪಂತ್ ಔಟಾಗಿದ್ದರು. ಈ ವೇಳೆ ಪೆವಿಲಿಯನ್ ನತ್ತ ನಡೆದಿದ್ದ ಪಂತ್ ಬಳಿ ಬಂದ ಸ್ಟುವರ್ಟ್ ಬ್ರಾಡ್ ನಿಂದಿಸಿದ್ದರು. ಈ ದೃಶ್ಯಗಳು ವೀಡಿಯೋದಲ್ಲಿ ಕೂಡ ಸೆರೆಯಾಗಿತ್ತು. ಸದ್ಯ ಪಂತ್ ರನ್ನು ನಿಂದಿಸಿದ್ದ ಬ್ರಾಡ್‍ಗೆ ಅದೇ ಪಂದ್ಯದಲ್ಲಿ ಕೊಹ್ಲಿ ತಿರುಗೇಟು ನೀಡಿದ್ದಾರೆ. ಕೊಹ್ಲಿ ಮಾತಿಗೆ ಬ್ರಾಡ್ ಉತ್ತರವನ್ನು ಸಹ ನೀಡಿದ್ದು, ಇಬ್ಬರ ನಡುವಿನ ಸಂಭಾಷಣೆಯ ವೀಡಿಯೋ ವೈರಲ್ ಆಗಿದೆ.
Advertisement
Virat Kohli And Stuart Broad Engage In Banter pic.twitter.com/iE9Zt4SWoQ
— Crick. Boom???? (@FantasyCrickBoo) August 25, 2018
Advertisement
ಸ್ಟುವರ್ಟ್ ಬ್ರಾಡ್ ಅನುಚಿತ ವರ್ತನೆ ವಿರುದ್ಧ ಕ್ರಮಕೈಗೊಂಡಿದ್ದ ಐಸಿಸಿ, ನಿಯಮ 2.2.7 ರ ಉಲ್ಲಂಘನೆ ಎಂದು ತೀರ್ಮಾನಿಸಿ ಪಂದ್ಯದ ಸಂಭಾವನೆಯ 15% ಮೊತ್ತವನ್ನು ದಂಡವಾಗಿ ವಿಧಿಸಿತ್ತು. ಬ್ರಾಡ್ ವರ್ತನೆ ವಿರುದ್ಧ ಗರಂ ಆಗಿದ್ದ ಟೀಂ ಇಂಡಿಯಾ ಕ್ರಿಕೆಟ್ ಅಭಿಮಾನಿಗಳು ಕೂಡ 2007 ರ ಟಿ20 ವಿಶ್ವಕಪ್ ನಲ್ಲಿ ಯುವರಾಜ್ ಸಿಂಗ್ ಸಿಡಿಸಿದ 6 ಸಿಕ್ಸರ್ ಘಟನೆಯನ್ನು ನೆನಪು ಮಾಡಿ ಟ್ವಿಟ್ಟರ್ ನಲ್ಲಿ ಬ್ರಾಡ್ ಕಾಲೆಳೆದಿದ್ದರು.
Advertisement
BREAKING: England's @StuartBroad8 has been fined 15 percent of his match fee and received one demerit point after being found guilty of using aggressive language towards Rishabh Pant on day two of the third #ENGvIND Test.
➡️ https://t.co/TTgdG0vHTN pic.twitter.com/BWTT8aMine
— ICC (@ICC) August 21, 2018
Advertisement
ಉಳಿದಂತೆ ಪಾದಾರ್ಪಣೆ ಪಂದ್ಯದಲ್ಲೇ ಸಿಕ್ಸರ್ ಸಿಡಿಸುವ ಮೂಲಕ ರನ್ ಖಾತೆ ತೆರೆದಿದ್ದ ಪಂತ್ ದಾಖಲೆ ಬರೆದಿದ್ದರು. ಅಲ್ಲದೇ ಮೊದಲ ಟೆಸ್ಟ್‍ನಲ್ಲೇ ವಿಕೆಟ್ ಕೀಪಿಂಗ್ ನಲ್ಲಿ 7 ಕ್ಯಾಚ್ ಪಡೆಯುವ ಮೂಲಕ ಗಮನ ಸೆಳೆದಿದ್ದರು.
ಇಂಗ್ಲೆಂಡ್ ವಿರುದ್ಧ 5 ಪಂದ್ಯಗಳ ಟೆಸ್ಟ್ ಸರಣಿಯ 3ನೇ ಟೆಸ್ಟ್ ಪಂದ್ಯವನ್ನು ಗೆಲ್ಲುವ ಮೂಲಕ ಟೀಂ ಇಂಡಿಯಾ ಸರಣಿ ಗೆಲುವಿನ ಆಸೆಯನ್ನು ಜೀವಂತವಾಗಿಸಿದ್ದು, ಇನ್ನುಳಿದ 2 ಟೆಸ್ಟ್ ಪಂದ್ಯದಲ್ಲಿ ಗೆಲ್ಲಲೇ ಬೇಕಾದ ಒತ್ತಡದಲ್ಲಿದೆ. ಇಂಗ್ಲೆಂಡ್ ವಿರುದ್ಧ ದ 4ನೇ ಟೆಸ್ಟ್ ಪಂದ್ಯ ಸೌಥಾಂಪ್ಟನ್‍ನ ರೋಸ್ ಬಾಲ್ ಕ್ರೀಡಾಂಗಣದಲ್ಲಿ ಆಗಸ್ಟ್ 30 ರಂದು ಆರಂಭವಾಗಲಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
https://twitter.com/rocktheworld62/status/1032146978619027456?