ಮುಂಬೈ: ಮೋಸ್ಟ್ ವ್ಯಾಲ್ಯುಬಲ್ ಭಾರತೀಯ ಸೆಲೆಬ್ರಿಟಿಗಳ ಲಿಸ್ಟ್ ಬಿಡುಗಡೆಯಾಗಿದೆ. ಈ ಲಿಸ್ಟ್‌ನಲ್ಲಿ ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ಬ್ರಾಂಡ್ ವ್ಯಾಲ್ಯೂ ಕಡಿಮೆಯಾಗಿದ್ದರೂ ನಂಬರ್ ಒನ್ ಸ್ಥಾನದಲ್ಲಿ ಮುಂದುವರಿದಿದ್ದಾರೆ.
Advertisement
ಡಫ್ ಮತ್ತು ಫೆಲ್ಪ್ಸ್‌ನ ಮೋಸ್ಟ್ ವ್ಯಾಲ್ಯೂಬಲ್ ಭಾರತೀಯ ಸೆಲೆಬ್ರಿಟಿಗಳ ಹೊಸ ಸಮೀಕ್ಷೆಯಲ್ಲಿ ಬಿಡುಗಡೆಯಾಗಿದೆ. ವಿರಾಟ್ ಕೊಹ್ಲಿ ಬ್ರಾಂಡ್ ವ್ಯಾಲ್ಯೂ 2021ರಲ್ಲಿ 237.7 ಡಾಲರ್(1,800 ಕೋಟಿ ರೂ.) ಇತ್ತು. ಆದರೆ ಈಗ ಈ ಮೌಲ್ಯ 185.7 ಮಿಲಿಯನ್ ಡಾಲರ್‍ಗೆ(1,400 ಕೋಟಿ ರೂ.) ಇಳಿಕೆಯಾಗಿದೆ. ಕಳೆದ ಬಾರಿಗಿಂತ ಈ ಬಾರಿ 21% ರಷ್ಟು ಬ್ರಾಂಡ್ ವ್ಯಾಲ್ಯೂ ಕಡಿಮೆಯಾಗಿದೆ. ಆದರೂ ಕೊಹ್ಲಿಗೆ ಮೊದಲ ಸ್ಥಾನ ಸಿಕ್ಕಿದೆ. ಇದನ್ನೂ ಓದಿ: ವಿಜಯ್ ಸೇತುಪತಿ ಜತೆ ಕುಣಿದ ಸಮಂತಾ, ನಯನಾ : ಕುಚಿಕು ಗೆಳೆತಿಯರ ಡಾನ್ಸ್ ಕಹಾನಿ
Advertisement
Advertisement
ಈ ಲಿಸ್ಟ್‌ನಲ್ಲಿ, ಕ್ರಮವಾಗಿ ರಣವೀರ್ ಸಿಂಗ್ 158.3 ಮಿಲಿಯನ್ ಡಾಲರ್(1200 ಕೋಟಿ ರೂ.), ಅಕ್ಷಯ್ ಕುಮಾರ್ 139.6 ಮಿಲಿಯನ್ ಡಾಲರ್(1058 ಕೋಟಿ ರೂ.), ಆಲಿಯಾ ಭಟ್ 68.1 ಮಿಲಿಯನ್ ಡಾಲರ್(516 ಕೋಟಿ ರೂ), ಎಂ.ಎಸ್.ಧೋನಿ 61.2 ಮಿಲಿಯನ್ ಡಾಲರ್(463 ಕೋಟಿ ರೂ.) ಇದ್ದು ಟಾಪ್ 5 ಸ್ಥಾನಗಳಲ್ಲಿ ಇದ್ದಾರೆ.
Advertisement
ಸಚಿನ್ ತೆಂಡೂಲ್ಕರ್ 47.4 ಮಿಲಿಯನ್ ಡಾಲರ್(359 ಕೋಟಿ ರೂ.) ಪಡೆದು 11ನೇ ಸ್ಥಾನದಲ್ಲಿದ್ದು, ರೋಹಿತ್ ಶರ್ಮಾ 32.2 ಡಾಲರ್(244 ಕೋಟಿ ರೂ.) ಪಡೆದು 13ನೇ ಸ್ಥಾನದಲ್ಲಿದ್ದಾರೆ. ಪಿ.ವಿ.ಸಿಂಧೂ 22 ಮಿಲಿಯನ್ ಡಾಲರ್(166 ಕೋಟಿ ರೂ.) ಪಡೆದು 20ನೇ ಸ್ಥಾನದಲ್ಲಿದ್ದಾರೆ. ಇದನ್ನೂ ಓದಿ: ‘ದಿ ಕಾಶ್ಮೀರ್ ಫೈಲ್ಸ್’ ಈವರೆಗೂ ಗಳಿಸಿದ್ದು 234.03 ಕೋಟಿ : ಹೇಗೆಲ್ಲ ಲೆಕ್ಕಾಚಾರ