ನವದೆಹಲಿ: ಭಾರತದ ಕ್ರಿಕೆಟಿಗ ವಿರಾಟ್ ಕೊಹ್ಲಿ ಭಾರತದ ಟೆಸ್ಟ್ ನಾಯಕತ್ವದಿಂದ ಕೆಳಗಿಳಿದು ಕೇವಲ ಎರಡು ದಿನಗಳಷ್ಟೇ ಕಳೆದಿದೆ. ಅಮೇರಿಕಾ ಮೂಲದ ಹಣಕಾಸು ಸಲಹಾ ಸಂಸ್ಥೆ ಡಫ್ ಹಾಗೂ ಫೆಲ್ಪ್ಸ್ ಕೊಹ್ಲಿಯ ಹಠಾತ್ ನಿರ್ಧಾರದಿಂದ ಅನುಮೋದನೆಗಳಿಗೆ ಸಹಿ ಹಾಕಿರುವ ಕಂಪನಿಗಳ ಮೇಲೆ ಪರಿಣಾಮ ಬೀರಬಹುದು ಎಂದಿದೆ.
ಇದೀಗ ಕೊಹ್ಲಿ ಟೆಸ್ಟ್ ನಾಯಕತ್ವದಿಂದ ಕೆಳಗಿಳಿದಿರುವುದರಿಂದ ಅವರನ್ನು ಯಶಸ್ವಿ ನಾಯಕನನ್ನಾಗಿ ಗುರುತಿಸಿರುವ ಕಂಪನಿಗಳು ತಮ್ಮ ಮಾರ್ಕೆಟಿಂಗ್ ತಂತ್ರಗಳನ್ನು ಮರು ಪರಿಶೀಲಿಸಬಹುದು ಎಂದು ಅಂದಾಜಿಸಿದೆ. ಇದನ್ನೂ ಓದಿ: ಕ್ಯಾಪ್ಟನ್ ಕಿಂಗ್ ಕೊಹ್ಲಿ ಯುಗಾಂತ್ಯ – ಸಾಮಾಜಿಕ ಜಾಲತಾಣದಲ್ಲಿ ಕಿಚ್ಚು
Advertisement
Advertisement
ಕೊಹ್ಲಿಯವರ ಸಾಮಾಜಿಕ ಮಾಧ್ಯಮಗಳಲ್ಲಿ ಫಾಲೋವರ್‌ಗಳ ಸಂಖ್ಯೆ ಬಹು ದೊಡ್ಡದಾಗಿದ್ದರೂ ಅವರ ಬ್ಯಾಟಿಂಗ್ ಹಾಗೂ ಅವರ ಕ್ರಿಕೆಟ್‌ನ ದಾಖಲೆಗಳೇ ದೊಡ್ಡ ಬ್ರ್ಯಾಂಡ್ ಆಗಿ ಮಾರ್ಪಟ್ಟಿದೆ ಎಂದು ಡಫ್ ಹಾಗೂ ಫೆಲ್ಪ್ಸ್ ಸಂಸ್ಥೆಯ ಮುಖ್ಯಸ್ಥ ಅವಿರಲ್ ಜೈನ್ ತಿಳಿಸಿದ್ದಾರೆ. ಇದನ್ನೂ ಓದಿ: ಟೀಂ ಇಂಡಿಯಾದ ಟೆಸ್ಟ್ ನಾಯಕತ್ವ ತೊರೆದ ವಿರಾಟ್ ಕೊಹ್ಲಿ
Advertisement
2020ರಲ್ಲಿ ಕೊಹ್ಲಿಯ ಬ್ರಾಂಡ್ ಮೌಲ್ಯ 237.7 ಮಿಲಿಯನ್ ಡಾಲರ್(1.7 ಸಾವಿರ ಕೋಟಿ ರೂ.) ಇತ್ತು ಎಂದು ಸೆಲೆಬ್ರಿಟಿ ಬ್ರಾಂಡ್ ಮೌಲ್ಯಮಾಪನ ವರದಿಯಲ್ಲಿ ತಿಳಿಸಿತ್ತು. ಇದಕ್ಕೆ ಮೂಲ ಕಾರಣ ಸಾಮಾಜಿಕ ಮಾಧ್ಯಮಗಳಲ್ಲಿ ಕೊಹ್ಲಿ ಹೊಂದಿರುವ ಪ್ರಭಾವ. ಕೊಹ್ಲಿಗೆ ಇನ್ಸ್ಟಾಗ್ರಾಮ್‌ನಲ್ಲಿ 17.9 ಕೋಟಿ ಫಾಲವರ್‌ಗಳಿದ್ದು, ಟ್ವಿಟ್ಟರ್‌ನಲ್ಲಿ 4.6 ಕೋಟಿ ಫಾಲೋವರ್ ಹೊಂದಿದ್ದಾರೆ.
Advertisement
ಕೊಹ್ಲಿ ಸುಮಾರು 30 ಬ್ರ್ಯಾಂಡ್‌ಗಳಿಗೆ ಅಂಬಾಸಿಡರ್ ಆಗಿದ್ದಾರೆ. ಅವುಗಳಲ್ಲಿ ಮುಖ್ಯವಾದವು ಪೂಮಾ ಕ್ರೀಡಾ ಉಡುಪುಗಳು, ಹೀರೋ ದ್ವಿ-ಚಕ್ರ ವಾಹನಗಳು, ಎಮ್‌ಆರ್‌ಎಫ್ ಟೈರ್‌ಗಳು, ಆಡಿ ಕಾರ್, ಫ್ಯಾಶನ್ ಪ್ಲಾಟ್‌ಫಾರ್ಮ್ ಮಿಂತ್ರಾ, ಅಮೇರಿಕನ್ ಟೂರಿಸ್ಟರ್ ಲಗೇಜ್, ವಿವೋ ಸ್ಮಾರ್ಟ್ ಫೋನ್‌ಗಳು ಸೇರಿವೆ. ಇವುಗಳಿಂದ ಕೊಹ್ಲಿ ವರ್ಷಕ್ಕೆ 178.77 ಕೋಟಿ ರೂ. ಗಳಿಸುತ್ತಾರೆ ಎಂಬುದು ತಿಳಿದುಬಂದಿದೆ. ಇದನ್ನೂ ಓದಿ: ಕೊಹ್ಲಿ ನಾಯಕತ್ವ ತ್ಯಜಿಸಲು ಇದೇ ಕಾರಣ!
ಸೋಮವಾರ ಕೊಹ್ಲಿ ವಿವೋ ಸ್ಮಾರ್ಟ್ಫೋನ್‌ನ ಹೊಸ ಜಾಹಿರಾತನ್ನು ಟ್ವೀಟ್ ಮಾಡಿದ್ದರು. ಒಂದು ದಿನದ ಉತ್ಪನ್ನದ ಪ್ರಚಾರಕ್ಕೆ ಕೊಹ್ಲಿ 7.5 ರಿಂದ 10 ಕೋಟಿ ರೂ. ಹಣವನ್ನು ಪಡೆಯುತ್ತಾರೆ. ಆದರೆ ಕೊಹ್ಲಿಯ 2021ರ ಡೇಟಾಗೆ ಅನುಗುಣವಾಗಿ ಇನ್ಸ್ಟಾಗ್ರಾಮ್‌ನ ಒಂದು ಪೋಸ್ಟ್‌ಗೆ ಕೊಹ್ಲಿ 5 ಕೋಟಿ ರೂ. ಹಣವನ್ನು ಪಡೆಯತ್ತಿದ್ದಾರೆ.