ನವದೆಹಲಿ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಇಂಗ್ಲೆಂಡ್ ನಲ್ಲಿ ಕೌಂಟಿ ಕ್ರಿಕೆಟ್ ಆಡುವುದು ಖಚಿತವಾಗಿದ್ದು, ಈ ಕುರಿತು Surrey ತಂಡದ ತನ್ನ ಟ್ವಿಟ್ಟರ್ ಖಾತೆಯಲ್ಲಿ ಕೊಹ್ಲಿಗೆ ಸ್ವಾಗತ ಕೋರಿ ಟ್ವೀಟ್ ಮಾಡಿದೆ.
ಕೌಂಟಿ ಕ್ರಿಕೆಟ್ ನಲ್ಲಿ ಕೊಹ್ಲಿ ಭಾಗವಹಿಸುತ್ತಿರುವ ಕುರಿತು ಹೆಮ್ಮೆ ವ್ಯಕ್ತಪಡಿಸಿರುವ Surrey ಕ್ಲಬ್, ವಿಶ್ವದ ಶ್ರೇಷ್ಠ ಬ್ಯಾಟ್ಸ್ ಮನ್ ನಮ್ಮ ತಂಡದಲ್ಲಿ ಆಡಲಿದ್ದಾರೆ ಎಂಬುದು ಸಂತಸದ ವಿಷಯ. ಜೂನ್ ತಿಂಗಳು ಪೂರ್ತಿ ಕೊಹ್ಲಿ ಅವರು ಕೌಂಟಿ ಕ್ರಿಕೆಟ್ನಲ್ಲಿ ಭಾಗವಹಿಸಲಿದ್ದಾರೆ ಎಂದು ಕ್ಲಬ್ ತಿಳಿಸಿದೆ.
Advertisement
Advertisement
ಕೌಂಟಿ ಕ್ರಿಕೆಟ್ನ ಭವಿಷ್ಯದ ಕುರಿತು ಪ್ರಶ್ನಿಸುತ್ತಿದ್ದ ವೇಳೆ ಕೊಹ್ಲಿಯಂತಹ ಆಟಗಾರರು ತಂಡದ ಪರ ಆಡುತ್ತಿರುವುದು ಉತ್ತಮ ಬೆಳವಣಿಗೆ. ಇದು ದೇಶಿಯ ಕ್ರಿಕೆಟ್ಗೆ ಪ್ರೇರಣೆ ನೀಡಲಿದೆ. ಅಲ್ಲದೇ ನಮ್ಮ ತಂಡದಲ್ಲಿ ಕೊಹ್ಲಿ ಆಡುವುದರಿಂದ ಅವರಿಂದ ಅನೇಕ ಸಲಹೆಗಳನ್ನು ಪಡೆದುಕೊಳ್ಳಲು ಆಟಗಾರರಿಗೆ ಅನುಕೂಲವಾಗುತ್ತದೆ ಎಂದು Surrey ತಂಡದ ನಿರ್ದೇಶಕ ಅಲೆಕ್ಸ್ ಸ್ಟಿವರ್ಟ್ ಹೇಳಿದ್ದಾರೆ.
Advertisement
ಮುಂಬರುವ ಇಂಗ್ಲೆಂಡ್ ನಡುವಿನ ಟೂರ್ನಿಗೆ ಸಿದ್ಧತೆ ನಡೆಸಿಕೊಳ್ಳುವ ಉದ್ದೇಶದಿಂದ ವಿರಾಟ್ ಕೊಹ್ಲಿ ಕೌಟಿ ಕ್ರಿಕೆಟ್ನಲ್ಲಿ ಆಡುತ್ತಿದ್ದು, Surrey ತಂಡದೊಂದಿಗೆ ಒಪ್ಪಂದ ಮಾಡಿಕೊಂಡಿದ್ದಾರೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಕೊಹ್ಲಿ, ಕೌಂಟಿ ಕ್ರಿಕೆಟ್ ನಲ್ಲಿ ಆಡಬೇಕೆನ್ನುವುದು ನನ್ನ ಕನಸಾಗಿತ್ತು. ಇದನ್ನು Surrey ಕ್ಲಬ್ ನನಸಾಗಿಸಿದೆ. ಇದಕ್ಕಾಗಿ ತಂಡದ ನಿರ್ದೇಶಕ ಅಲೆಕ್ ಸ್ಟಿವರ್ಟ್ ಹಾಗೂ ಅದರ ಆಡಳಿತ ಮಂಡಳಿಗೆ ಕೃತಜ್ಞನಾಗಿದ್ದೇನೆ ಎಂದು ವಿರಾಟ್ ಕೊಹ್ಲಿ ಹೇಳಿದ್ದಾರೆ.
Advertisement
#WelcomeKohlihttps://t.co/wP6yVlo240 pic.twitter.com/bNVbVhf5r9
— Surrey Cricket (@surreycricket) May 3, 2018
ಕಳೆದ ಬಾರಿ ಇಂಗ್ಲೆಂಡ್ ವಿರುದ್ಧ ನಡೆದ ಪೂರ್ಣಾವಧಿಯ ಟೂರ್ನಿಯಲ್ಲಿ ಭಾಗವಹಿಸಿದ್ದ ವಿರಾಟ್ ಕೊಹ್ಲಿ ಸರಣಿಯಲ್ಲಿ ಸ್ವಿಂಗ್ ಬೌಲಿಂಗ್ ಎದುರಿಸಲು ಕಷ್ಟಪಟ್ಟಿದ್ದರು. ಅದರಲ್ಲೂ ಟೆಸ್ಟ್ ಮಾದರಿಯಲ್ಲಿ ಅವರ ಪ್ರದರ್ಶನ ಉತ್ತಮವಾಗಿರಲಿಲ್ಲ. ಹೀಗಾಗಿ ಇಂಗ್ಲೆಂಡ್ ವಿರುದ್ಧ ಉತ್ತಮ ಪ್ರದರ್ಶನ ನೀಡಲು ಕೌಂಟಿ ಕ್ರಿಕೆಟ್ ಪರ ಆಡಲು ಕೊಹ್ಲಿ ಸಹಿ ಹಾಕಿದ್ದಾರೆ.
ಕೊಹ್ಲಿ ಕೌಂಟಿ ಕ್ರಿಕೆಟ್ ನಲ್ಲಿ ಭಾಗವಹಿಸುವುದರಿಂದ ಇಂಗ್ಲೆಂಡ್ ಟೂರ್ನಿಗೂ ಮೊದಲು ಅಫ್ಘಾನಿಸ್ತಾನದ ವಿರುದ್ಧ ಬೆಂಗಳೂರಿನಲ್ಲಿ ಜೂನ್ 14 ರಿಂದ 18 ವರೆಗೆ ನಡೆಯುವ ಏಕೈಕ ಟೆಸ್ಟ್ ಪಂದ್ಯಕ್ಕೆ ಅಲಭ್ಯರಾಗಲಿದ್ದಾರೆ.