ಇಸ್ಲಾಮಾಬಾದ್: ಆಸ್ಟ್ರೇಲಿಯಾ (Australia) ವಿರುದ್ಧ ನಡೆದ ಬಾರ್ಡರ್ ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯ 4ನೇ ಪಂದ್ಯದಲ್ಲಿ ಶತಕ ಸಿಡಿಸುವ ಮೂಲಕ ಟೀಂ ಇಂಡಿಯಾ (Team India) ಕ್ರಿಕೆಟಿಗ ವಿರಾಟ್ ಕೊಹ್ಲಿ (Virat Kohli) ಟೆಸ್ಟ್ ಕ್ರಿಕೆಟ್‌ನ 28ನೇ ಶತಕ ಹಾಗೂ ವೃತ್ತಿ ಜೀವನದ 75ನೇ ಶತಕ ಬಾರಿಸಿದರು.
ಈ ಸಂಬಂಧ ಕೊಹ್ಲಿ ಕುರಿತು ಹೇಳಿಕೆ ನೀಡಿರುವ ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ವೇಗಿ ಶೋಯೆಬ್ ಅಖ್ತರ್ (Shoaib Akhtar), ಕೊಹ್ಲಿ ಟಿ20 (T20 Cricket) ಆಡುವುದನ್ನ ನಿಲ್ಲಿಸಬೇಕು ಎಂದು ಹೇಳಿದ್ದಾರೆ. ಇದನ್ನೂ ಓದಿ: ವಿರಾಟ್ ಶತಕಗಳಿಂದಲೇ ಭಾರತ ಗೆಲ್ಲುತ್ತಿತ್ತು – ಕೊಹ್ಲಿಯನ್ನು ಹೊಗಳಿ ಸಚಿನ್ ವಿರುದ್ಧ ಅಖ್ತರ್ ಟೀಕೆ
Advertisement
Advertisement
ಸಂದರ್ಶನವೊಂದರಲ್ಲಿ ಮಾತನಾಡಿರುವ ಅಖ್ತರ್, ಒಬ್ಬ ಕ್ರಿಕೆಟಿಗನಾಗಿ ನನ್ನನ್ನ ಕೇಳಿದ್ರೆ, ಕೊಹ್ಲಿ ಟಿ20 ಆಡೋದನ್ನ ನಿಲ್ಲಿಸಬೇಕು. ಟೆಸ್ಟ್ ಮತ್ತು ಏಕದಿನ ಸ್ವರೂಪದ ಕ್ರಿಕೆಟ್‌ನಲ್ಲಿ ಮಾತ್ರ ಉಳಿಯಬೇಕು. ಏಕೆಂದರೆ ಟಿ20 ಕ್ರಿಕೆಟ್‌ನಲ್ಲಿ ಅವರು ಹೆಚ್ಚಿನ ಶ್ರಮ ಹಾಕಬೇಕು ಎಂದು ಹೇಳಿದ್ದಾರೆ. ಇದನ್ನೂ ಓದಿ: ಕಿಂಗ್ ಕೊಹ್ಲಿ ಶತಕದ ವೈಭವ – ಆಸ್ಟ್ರೇಲಿಯಾ ವಿರುದ್ಧ ಭಾರತಕ್ಕೆ 88 ರನ್ ಮುನ್ನಡೆ
Advertisement
Advertisement
ಸಚಿನ್ ತೆಂಡೂಲ್ಕರ್ 100 ಶತಕಗಳನ್ನ ಪೂರೈಸಿದ್ದಾರೆ. ಈಗ ಕೊಹ್ಲಿಗೆ 34 ವರ್ಷ. ಮುಂದಿನ 6 ರಿಂದ 8 ವರ್ಷಗಳ ವರೆಗೆ ಅವರು ಸುಲಭವಾಗಿ ಆಡಬಹುದು. ಇನ್ನೂ 30-50 ಪಂದ್ಯಗಳನ್ನ ಆಡಿದರೆ, 25 ಶತಕಗಳನ್ನ ಗಳಿಸುವುದು ಅವರಿಗೆ ಕಷ್ಟವಾಗುವುದಿಲ್ಲ. ಇದರೊಂದಿಗೆ ಅವರು ತಮ್ಮ ಫಿಟ್ನೆಸ್ ಹಾಗೂ ಮಾನಸಿಕ ಆರೋಗ್ಯವನ್ನೂ ಕಾಪಾಡಿಕೊಳ್ಳುವುದು ಅವಶ್ಯಕವಾಗಿದೆ ಎಂದು ಸಲಹೆ ನೀಡಿದ್ದಾರೆ.
ಸದ್ಯ ಕೊಹ್ಲಿ ಉತ್ತಮ ಮನಸ್ಥಿತಿಯಲ್ಲಿದ್ದಾರೆ, ಏಕಾಗ್ರತೆ ಹೊಂದಿದ್ದಾರೆ. ಫಾರ್ಮ್‌ನಲ್ಲಿರುವುದರಿಂದ ಅವರು 100 ಶತಕಗಳನ್ನು ಪೂರೈಸುವ ಬಗ್ಗೆ ಗಮನಹರಿಸಬೇಕು. ಹಾಗಾಗಿ ಟಿ20 ಫಾರ್ಮ್ಯಾಟ್ ಕ್ರಿಕೆಟ್‌ನಿಂದ ಹೊರಬರಬೇಕು ಎಂದು ಕಿವಿಮಾತು ಹೇಳಿದ್ದಾರೆ.
ಕ್ರಿಕೆಟ್ ದಂಥಕತೆ ಸಚಿನ್ ತೆಂಡೂಲ್ಕರ್ 100 ಶತಕಗಳನ್ನು ಪೂರೈಸಿದ ವಿಶ್ವದ ನಂ.1 ಆಟಗಾರನಾಗಿದ್ದಾರೆ. 75 ಶತಕಗಳನ್ನು ಪೂರೈಸಿರುವ ಕೊಹ್ಲಿ 2ನೇ ಸ್ಥಾನದಲ್ಲಿದ್ದಾರೆ. ಈಗಾಗಲೇ ಏಕದಿನ ಕ್ರಿಕೆಟ್‌ನಲ್ಲಿ 46 ಶತಕಗಳನ್ನು ಬಾರಿಸಿರುವ ವಿರಾಟ್ ಕೊಹ್ಲಿಗೆ, ಸಚಿನ್ ದಾಖಲೆ ಮುರಿಯಲು 4 ಶತಕಗಳು ಬಾಕಿಯಿದೆ.