ಮುಂಬೈ: ಐಪಿಎಲ್ 2025ರ ಋತುವಿನಲ್ಲಿ ವಿರಾಟ್ ಕೊಹ್ಲಿ ಆರ್‌ಸಿಬಿಗೆ ಕ್ಯಾಪ್ಟನ್ ಆಗಿ ಮರಳಲು ಸಜ್ಜಾಗಿದ್ದಾರೆಂದು ವರದಿಯಾಗಿದೆ.
ಕೊಹ್ಲಿ ಮತ್ತು ತಂಡದ ಮ್ಯಾನೇಜ್‌ಮೆಂಟ್ ನಾಯಕತ್ವದ ಬದಲಾವಣೆಯ ಬಗ್ಗೆ ಈಗಾಗಲೇ ಚರ್ಚಿಸಿದ್ದಾರೆ. ನಾಯಕತ್ವದ ಸ್ಥಾನ ಅಲಂಕರಿಸಲು ಕೊಹ್ಲಿ ಉತ್ಸುಕರಾಗಿದ್ದಾರೆ ಎಂದು ತಿಳಿದುಬಂದಿದೆ.
ಈಗ 40ರ ಹರೆಯದ ಮಾಜಿ ನಾಯಕ ಫಾಫ್ ಡು ಪ್ಲೆಸಿಸ್ ಅವರು 2022ರಿಂದ 2024ರವರೆಗೆ ಆರ್‌ಸಿಬಿಯನ್ನು ಮುನ್ನಡೆಸಿದರು. ಆದರೆ ಅವರ ವಯಸ್ಸಿನ ಕಾರಣದಿಂದ ಅವರು ಮುಂದುವರಿಯುವ ಸಾಧ್ಯತೆ ಕಡಿಮೆ. ಫ್ರಾಂಚೈಸಿ ಈಗ ಕೊಹ್ಲಿಯನ್ನು ಮತ್ತೆ ನಾಯಕನನ್ನಾಗಿ ಮಾಡಲು ಸಿದ್ಧತೆ ನಡೆಸಿದೆ ಎನ್ನಲಾಗಿದೆ.
ಇದುವರೆಗೂ ಐಪಿಎಲ್ ಪ್ರಶಸ್ತಿ ಗೆಲ್ಲದ ಆರ್‌ಸಿಬಿ ಮುಂಬರುವ ಮೆಗಾ ಹರಾಜಿನ ಮುನ್ನ ಕೊಹ್ಲಿ ನಾಯಕತ್ವವನ್ನು ತನ್ನ ಕಾರ್ಯತಂತ್ರದ ಕೇಂದ್ರವನ್ನಾಗಿ ಮಾಡಿದೆ. ಕೊಹ್ಲಿ ಈ ಹಿಂದೆ 2013 ರಿಂದ 2021 ರವರೆಗೆ ಆರ್‌ಸಿಬಿ ನಾಯಕತ್ವ ವಹಿಸಿದ್ದರು. ತಂಡವನ್ನು ನಾಲ್ಕು ಬಾರಿ ಪ್ಲೇ ಆಫ್‌ಗೆ ತಲುಪಿಸುವಲ್ಲಿ ಶ್ರಮಿಸಿದ್ದರು.