– ಕನ್ನಡಿಗ ಸಿಎ ಕುಟ್ಟಪ್ಪ ದ್ರೋಣಚಾರ್ಯ, ರೋಹನ್ ಬೋಪಣ್ಣಗೆ ಅರ್ಜುನ ಪ್ರಶಸ್ತಿ
ನವದೆಹಲಿ: ಟೀಂ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿ ಮತ್ತು ವೇಟ್ ಲಿಫ್ಟಿಂಗ್ ಮೀರಾಬಾಯಿ ಚಾನುಗೆ ಪ್ರತಿಷ್ಠಿತ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ ಘೋಷಣೆ ಮಾಡಲಾಗಿದೆ.
ಬಾಕ್ಸಿಂಗ್ ಕೋಚ್ ಕನ್ನಡಿಗ ಸಿಎ ಕುಟ್ಟಪ್ಪ ಸೇರಿದಂತೆ ಎಂಟು ಮಂದಿ ದ್ರೋಣಾಚಾರ್ಯ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಏಷ್ಯನ್ ಗೇಮ್ಸ್ ನಲ್ಲಿ ಚಿನ್ನ ಗೆದ್ದಿದ್ದ ಶೂಟರ್ ರಾಹಿ ಸರ್ನೋಬತ್, ಅಥ್ಲೆಟ್ ಹಿಮಾದಾಸ್, ಟೆನ್ನಿಸ್ ಆಟಗಾರ ಕನ್ನಡಿಗ ರೋಹನ್ ಬೋಪಣ್ಣ, ಜಾವೆಲಿನ್ ಥ್ರೋ ಆಟಗಾರ ನೀರಜ್ ಚೋಪ್ರಾ ಸೇರಿದಂತೆ 20 ಮಂದಿ ಅರ್ಜುನ ಪ್ರಶಸ್ತಿ ಘೋಷಣೆಯಾಗಿದೆ. ಈ ಪ್ರಶಸ್ತಿಗಳನ್ನ ಸೆಪ್ಟೆಂಬರ್ 25ರಂದು ರಾಷ್ಟ್ರಪತಿ ಭವನದಲ್ಲಿ ವಿತರಿಸಲಾಗುತ್ತದೆ.
Advertisement
https://twitter.com/IndiaSports/status/1042745314510163968
Advertisement
ಐಸಿಸಿ ಟೆಸ್ಟ್ ಶ್ರೇಯಾಂಕ ಪಟ್ಟಿಯಲ್ಲಿ ನಂ.1 ಸ್ಥಾನದಲ್ಲಿರುವ ಕೊಹ್ಲಿ ಹೆಸರು ಈ ಹಿಂದೆ 2016 ಹಾಗೂ 2017 ರಲ್ಲೂ ಪ್ರಶಸ್ತಿಗೆ ಶಿಫಾರಸ್ಸು ಮಾಡಲಾಗಿತ್ತು. 2017 ರಲ್ಲಿ ಕೊಹ್ಲಿ ಪದ್ಮಶ್ರೀ ಪ್ರಶಸ್ತಿ ಪಡೆದಿದ್ದರು. ಉಳಿದಂತೆ ಖೇಲ್ ರತ್ನ ಪ್ರಶಸ್ತಿ ಪಡೆದ 3ನೇ ಕ್ರಿಕೆಟಿಗ ಎಂಬ ಹೆಗ್ಗಳಿಕೆಯನ್ನು ಕೊಹ್ಲಿ ಪಡೆದಿದ್ದಾರೆ. ಈ ಹಿಂದೆ 1997 ರಲ್ಲಿ ಸಚಿನ್ ತೆಂಡೂಲ್ಕರ್, 2007 ರಲ್ಲಿ ಎಂಎಸ್ ಧೋನಿ ಖೇಲ್ ರತ್ನ ಪ್ರಶಸ್ತಿ ಪಡೆದಿದ್ದರು. ಮಹಿಳಾ ಕ್ರಿಕೆಟ್ ತಂಡದ ಸ್ಮೃತಿ ಮಂದಾನ ಅರ್ಜುನ ಪ್ರಶಸ್ತಿ, ಕ್ರಿಕೆಟ್ ಕೋಚ್ ತಾರಕ್ ಸಿನ್ಹಾ ಜೀವಮಾನ ಸಾಧನೆಗಾಗಿ ದ್ರೋಣಾಚಾರ್ಯ ಪ್ರಶಸ್ತಿಗೆ ಆಯ್ಕೆ ಆಗಿದ್ದಾರೆ.
Advertisement
https://twitter.com/PIB_India/status/1042713412621357056
Advertisement
ರಾಜೀವ್ ಗಾಂಧಿ ಖೇಲ್‍ರತ್ನ ಪ್ರಶಸ್ತಿ: ವಿರಾಟ್ ಕೊಹ್ಲಿ (ಕ್ರಿಕೆಟ್), ಮೀರಾಬಾಯಿ ಚಾನು (ವೇಟ್‍ಲಿಫ್ಟಿಂಗ್).
ದ್ರೋಣಾಚಾರ್ಯ ಪ್ರಶಸ್ತಿ: ಕುಟ್ಟಪ್ಪ (ಬಾಕ್ಸಿಂಗ್), ವಿಜಯ್ ಶರ್ಮಾ (ವೇಟ್‍ಲಿಫ್ಟಿಂಗ್), ಸಿ.ಎ. ಶ್ರೀನಿವಾಸ್ ರಾವ್ (ಟೇಬಲ್ ಟೆನ್ನಿಸ್), ಎಸ್.ಎಸ್. ಪನ್ನು (ಅಥ್ಲೆಟಿಕ್ಸ್), ಕ್ಲಾರೆನ್ಸ್ ಲೋಬೊ (ಹಾಕಿ), ತಾರಕ್ ಸಿನ್ಹಾ (ಕ್ರಿಕೆಟ್), ಜೀವನ್ ಕುಮಾರ್ ಶರ್ಮ (ಜೂಡೋ), ವಿ.ಆರ್. ಬೀಡು (ಅಥ್ಲೆಟಿಕ್ಸ್).
CONGRATS to Para Shuttler Raj Kumar for the prestigious Arjuna Award!
Raj Kumar made us proud with a Gold in the 2015 BWF Para Badminton World C'ships in England.
Best of luck for the future, young man! pic.twitter.com/MDRREMT66N
— RajyavardhanRathore (@Ra_THORe) September 19, 2018
ಧ್ಯಾನ್‍ಚಂದ್ ಪ್ರಶಸ್ತಿ : ಸತ್ಯದೇವ್ ಪ್ರಸಾದ್ (ಆರ್ಚರಿ), ಭರತ್ ಚೆಟ್ರಿ (ಹಾಕಿ), ಬಾಬ್ಬಿ ಅಲೋಶಿಯಸ್ (ಅಥ್ಲೆಟಿಕ್ಸ್), ದಾದು ಚೌಗುಲೆ (ಕುಸ್ತಿ).
ಅರ್ಜುನ ಪ್ರಶಸ್ತಿ : ನೀರಜ್ ಚೋಪ್ರಾ (ಅಥ್ಲೆಟಿಕ್ಸ್), ಎನ್. ಸಿಕ್ಕಿ ರೆಡ್ಡಿ (ಬ್ಯಾಡ್ಮಿಂಟನ್), ಪೂಜಾ ಕಾದಿಯನ್ (ವುಶು), ಜಿನ್ಸನ್ ಜಾನ್ಸನ್ (ಅಥ್ಲೆಟಿಕ್ಸ್), ಹಿಮಾ ದಾಸ್ (ಅಥ್ಲೆಟಿಕ್ಸ್), ಸತೀಶ್ ಕುಮಾರ್ (ಬಾಕ್ಸಿಂಗ್), ಸ್ಮತಿ ಮಂಧನಾ (ಕ್ರಿಕೆಟ್), ಶುಭಂಕರ್ ಶರ್ಮ (ಗಾಲ್ಫ್), ಮನ್‍ಪ್ರೀತ್ ಸಿಂಗ್ (ಹಾಕಿ), ಸವಿತಾ ಪೂನಿಯ (ಹಾಕಿ), ರವಿ ರಾಥೋರ್ (ಪೋಲೊ), ರಾಹಿ ಸರನೋಬತ್ (ಶೂಟಿಂಗ್), ಅಂಕುರ್ ಮಿತ್ತಲ್ (ಶೂಟಿಂಗ್), ಶ್ರೇಯಸಿ ಸಿಂಗ್ (ಶೂಟಿಂಗ್), ಮಣಿಕಾ ಬಾತ್ರಾ (ಟೇಬಲ್ ಟೆನ್ನಿಸ್), ಜಿ. ಸಥಿಯನ್ (ಟೇಬಲ್ ಟೆನ್ನಿಸ್), ರೋಹನ್ ಬೋಪಣ್ಣ (ಟೆನ್ನಿಸ್), ಸುಮಿತ್ (ಕುಸ್ತಿ), ಅಂಕುರ್ ಧಾಮ (ಪ್ಯಾರಾ ಅಥ್ಲೆಟಿಕ್ಸ್), ಮನೋಜ್ ಸರ್ಕಾರ್ (ಪ್ಯಾರಾ ಅಥ್ಲೆಟಿಕ್ಸ್).
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
Meet the #AdventureAwardee for the year 2017.
Congratulations everyone! Your stories of valour are an inspiration for all. ????@Ra_THORe @indiannavy @adgpi @AkashvaniAIR @MIB_India @PIB_India @IndiaSports @DDNational pic.twitter.com/dlD3OEl0qS
— YAS Ministry (@YASMinistry) September 20, 2018