ಲಂಡನ್: ಕ್ರಿಕೆಟ್ ಕಾಶಿ ಲಾರ್ಡ್ಸ್ ಅಂಗಳದಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ 2ನೇ ಟೆಸ್ಟ್ ಪಂದ್ಯದಲ್ಲಿ ಚೇತೇಶ್ವರ ಪೂಜಾರ ರನೌಟ್ ಆದ ಬಳಿಕ ಅಭಿಮಾನಿಗಳು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅವರನ್ನು ಟ್ರೋಲ್ ಮಾಡಿದ್ದಾರೆ.
ಟಾಸ್ ಸೋತು ಬ್ಯಾಟಿಂಗ್ ಆಹ್ವಾನ ಪಡೆದ ಟೀಂ ಇಂಡಿಯಾ ಆರಂಭಿಕರ ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿ ಸಿಲುಕಿತ್ತು. ಆ್ಯಂಡರ್ ಸನ್ 9ನೇ ಓವರ್ ಬೌಲಿಂಗ್ ವೇಳೆ ಸ್ಟ್ರೈಕ್ ನಲ್ಲಿದ್ದ ಚೇತೇಶ್ವರ ಪೂಜಾರ ಬ್ಯಾಟ್ ನಡೆಸಿದ್ದರು. ಆದರೆ ಈ ವೇಳೆ ಬಾಲ್ ವಿಕೆಟ್ ಪಕ್ಕದಲ್ಲೇ ಇದ್ದರು ಕೊಹ್ಲಿ ರನ್ ಓಡಲು ಕರೆ ನೀಡಿ ಪೂಜಾರ ಅರ್ಧ ಕ್ರೀಸ್ ಗೆ ಬಂದ ಮೇಲೆ ಹಿಂದಕ್ಕೆ ಹೋಗಲು ಸೂಚಿಸಿದರು. ಈ ವೇಳೆಗಾಗಲೇ ಇಂಗ್ಲೆಂಡ್ ನ ಒಲಿವರ್ ಪೋಪ್ ವಿಕೆಟ್ ಬೆಲ್ಸ್ ಎಗರಿಸಿದ್ದ ಪರಿಣಾಮ ಪೂಜಾರ ನಿರಾಸೆಯಿಂದ ಮೈದಾನದಿಂದ ಹೊರ ನಡೆದಿದ್ದರು. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಅಭಿಮಾನಿಗಳು ಕೊಹ್ಲಿ ಪರ ವಿರೋಧ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
Advertisement
"NOOOOOOO!" – Every Indian fan after this terrible mix-up between @imVkohli and @cheteshwar1! ????♂#KyaHogaIssBaar #ENGvIND #SPNsports pic.twitter.com/ostmnz28TT
— Sony Sports Network (@SonySportsNetwk) August 10, 2018
Advertisement
ಪೂಜಾರರನ್ನು ಮೊದಲ ಟೆಸ್ಟ್ ನಿಂದ ಕೈಬಿಟ್ಟ ಬಳಿಕ 2ನೇ ಟೆಸ್ಟ್ ಗೆ ಆಯ್ಕೆ ಮಾಡಲಾಗಿತ್ತು. ಮೊದಲ ಇನ್ನಿಂಗ್ಸ್ ನಲ್ಲಿ 25 ಬಾಲ್ ಎದುರಿಸಿದ್ದ ಪೂಜಾರ ಕೇವಲ 1 ರನ್ ಗಳಿಸಿ ಔಟಾದರು. ವಿಶೇಷವೆಂದರೆ ಈ ವರ್ಷದಲ್ಲಿ ಪೂಜಾರ ಮೂರನೇ ಬಾರಿ ರನೌಟ್ ಆಗಿದ್ದು, ದಕ್ಷಿಣ ಆಫ್ರಿಕಾ ವಿರುದ್ಧ ಸೆಂಚೂರಿಯನ್ ನಲ್ಲಿ ನಡೆದ 2ನೇ ಟೆಸ್ಟ್ ಪಂದ್ಯದಲ್ಲಿ ಪೂಜಾರ 2 ಇನ್ನಿಂಗ್ಸ್‍ಗಳಲ್ಲೂ ರನೌಟ್ ಆಗಿದ್ದರು. ಇದುವರೆಗೂ ಪೂಜಾರ ತಮ್ಮ ವೃತ್ತಿ ಬದುಕಿನಲ್ಲಿ 7 ಬಾರಿ ರನೌಟ್ ಆಗಿದ್ದಾರೆ.
Advertisement
ಇಂಗ್ಲೆಂಡ್ ಪರ ಮಾರಕ ಬೌಲಿಂಗ್ ದಾಳಿ ನಡೆಸಿದ ಆ್ಯಂಡರ್ ಸನ್ ಇನ್ನಿಂಗ್ಸ್ ನಲ್ಲಿ 5 ವಿಕೆಟ್ ಪಡೆದು ಟೀಂ ಇಂಡಿಯಾ ಪತನಕ್ಕೆ ಕಾರಣರಾಗಿದ್ದರು. ಅಲ್ಲದೇ 35.2 ಓವರ್ ಗಳಲ್ಲಿ ಟೀಂ ಇಂಡಿಯಾ 107 ರನ್ ಗೆ ಸರ್ವಪತನ ಕಂಡು 2ನೇ ದಿನದಾಟ ಅಂತ್ಯವಾಗಿತ್ತು. 5 ಪಂದ್ಯಗಳ ಟೆಸ್ಟ್ ಟೂರ್ನಿಯಲ್ಲಿ ಇಂಗ್ಲೆಂಡ್ ಮೊದಲ ಪಂದ್ಯವನ್ನು ಗೆಲ್ಲುವ ಮೂಲಕ ಸರಣಿಯಲ್ಲಿ ಮುನ್ನಡೆ ಸಾಧಿಸಿದ್ದು, ಸದ್ಯ 2ನೇ ಟೆಸ್ಟ್ ನಲ್ಲೂ ಜಯದ ನಿರೀಕ್ಷೆಯಲ್ಲಿದೆ.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ: www.instagram.com/publictvnews
Its nothing new as the man who is interested only in making centuries @imVkohli not in team bonding this type of scenes are going to repeat again n again. The whole scenario would be totally different if #CaptainCool @msdhoni was at the other end.#ENGvIND #LordsTest
— Jeel Shiroya (@ShiroyaJeel) August 11, 2018
#ViratKohli gives another example of how bizzare decisions he takes. #Pujara #Runout #LordsTest #ENGvIND
— Anubhav Kumar (@iam_anubhav) August 10, 2018