ಲಂಡನ್: ಪಾಕಿಸ್ತಾನ ವಿರುದ್ಧ ನಾಳೆ ನಡೆಯಲಿರುವ ಕ್ರಿಕೆಟ್ ಪಂದ್ಯಕ್ಕೂ ಮುನ್ನ ಸುದ್ದಿಗೋಷ್ಠಿ ನಡೆಸಿ ಮಾತನಾಡಿರುವ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ಪಾಕ್ ವಿರುದ್ಧ ಪಂದ್ಯದ ಬಗ್ಗೆ ಅಭಿಮಾನಿಗಳು ಭಾವುಕರಾಗಬೇಕಿಲ್ಲ. ಎಲ್ಲಾ ವಿಶ್ವಕಪ್ ಪಂದ್ಯಗಳಂತೆ ಇದು ಒಂದು ಪಂದ್ಯ ಅಷ್ಟೇ. ಆಟವನ್ನು ಎಂಜಾಯ್ ಮಾಡಿ ತಂಡಕ್ಕೆ ಜಯ ಸಿಗಲಿದೆ ಎಂದು ಹೇಳಿದ್ದಾರೆ.
ಪಾಕಿಸ್ತಾನ ತಂಡ ಬಲಿಷ್ಠವಾಗಿದ್ದು, ಸಾಕಷ್ಟು ಅನುಭವಿ ಆಟಗಾರನನ್ನು ಹೊಂದಿದೆ. ಯಾರು ಚೆನ್ನಾಗಿ ಆಡುತ್ತಾರೆ ಅವರಿಗೆ ಗೆಲುವು ಖಚಿತ. ಇಂಗ್ಲೆಂಡ್‍ಗೆ ಆಗಮಿಸಿದ ಬಳಿಕ ಪಾಕ್ ವಿರುದ್ಧ ಪಂದ್ಯದ ಬಗ್ಗೆ ಭಿನ್ನವಾಗಿ ಏನು ಚರ್ಚೆ ನಡೆಸಿಲ್ಲ. ಅಲ್ಲದೇ ಪಂದ್ಯಕ್ಕಾಗಿ ತಂಡದ ಡ್ರೇಸಿಂಗ್ ರೂಮ್ ವಾತಾವರಣವೂ ಬದಲಾಗಿಲ್ಲ. ಎಲ್ಲಾ ಪಂದ್ಯಗಳನ್ನು ಸಮನಾಗಿ ಪರಿಗಣಿಸಿ ದೇಶದ ಪರ ಆಡುತ್ತೇವೆ. ನಮ್ಮ ಸಾಮಥ್ರ್ಯವನ್ನು ಅರಿತು ಆಡುತ್ತೇವೆ ಎಂದರು.
Advertisement
Virat Kohli in England: No one game is more special for us than the other. Our responsibility is to treat every game equally, regardless of the opposition. We are a top side in the world because of the cricket that we play. https://t.co/LWXShZV5za
— ANI (@ANI) June 15, 2019
Advertisement
ಧವನ್ ಅಲಭ್ಯವಾಗಿರುವ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕೊಹ್ಲಿ, ತಂಡ ಯಾವುದೇ ಒತ್ತಡ ಸಂದರ್ಭಗಳನ್ನು ಎದುರಿಸುವ ಸಾಮಥ್ರ್ಯವನ್ನು ಹೊಂದಿದೆ ಎಂದಿದ್ದಾರೆ. ಇತ್ತ ಪಾಕಿಸ್ತಾನದ ಪಂದ್ಯಕ್ಕೂ ಮುನ್ನವೇ ಟೀಂ ಇಂಡಿಯಾ ಯುವ ಆಟಗಾರ ರಿಷಬ್ ಪಂತ್ ತಂಡವನ್ನು ಸೇರಿಸಿಕೊಂಡಿದ್ದು, ಬಿಸಿಸಿಐ ರಿಷಬ್‍ರ ಫೋಟೋವನ್ನು ಟ್ವೀಟ್ ಮಾಡಿದೆ.
Advertisement
Captain @imVkohli's focus is right on point irrespective of the opposition ???????????????????????? #TeamIndia #CWC19 #INDvPAK pic.twitter.com/ZnCfphD3EA
— BCCI (@BCCI) June 15, 2019
Advertisement
ತಂಡದಲ್ಲಿ ಬದಲಾವಣೆ: ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಟೀಂ ಇಂಡಿಯಾ ಆಡುವ 11ರ ಬಳಗದಲ್ಲಿ ಬದಲಾಗುವ ಸಾಧ್ಯತೆ ಇದ್ದು, ಕೆಎಲ್ ರಾಹುಲ್ ಆರಂಭಿಕರಾಗಿ ಕಣಕ್ಕೆ ಇಳಿಯುವುದು ಬಹುತೇಕ ಖಚಿತವಾಗಿದೆ.
ಧವನ್ ಗಾಯದ ಸಮಸ್ಯೆಯಿಂದ ತಂಡದಿಂದ ಹೊರಗುಳಿದಿರುವ ಕಾರಣ ಅನುಭವಿ ಆಟಗಾರ ದಿನೇಶ್ ಕಾರ್ತಿಕ್ ಅಥವಾ ವಿಜಯ್ ಶಂಕರ್ ತಂಡದಲ್ಲಿ ಸ್ಥಾನ ಪಡೆಯಲಿದ್ದಾರೆ. ಬಿಸಿಸಿಐ ಕಾರ್ತಿಕ್‍ರ ಅನುಭಕ್ಕೆ ಮಣೆ ಹಾಕಿ ಅವಕಾಶ ನೀಡಲಿದೆ ಎನ್ನಲಾಗಿದೆ. ಉಳಿದಂತೆ ಪಂದ್ಯದಲ್ಲಿ ಕುಲ್ದೀಪ್ ಯಾದವ್ ಬದಲಾಗಿ ಆಲೌಂಡರ್ ರವೀಂದ್ರ ಜಡೇಜಾ ಅವರಿಗೆ ಅವಕಾಶ ನೀಡುವ ಸಾಧ್ಯತೆ ಇದೆ.
Look who's here ????#TeamIndia #CWC19 pic.twitter.com/V4y27pBYOC
— BCCI (@BCCI) June 15, 2019