ಬೆಂಗಳೂರು: ತನ್ನ ವೇಗವನ್ನು ಮೀರಿಸುವಂತೆ ಆರ್ಸಿಬಿ ನಾಯಕ ವಿರಾಟ್ ಕೊಹ್ಲಿ ತಮ್ಮದೇ ತಂಡದ ಆಟಗಾರ ಮಂದೀಪ್ ಸಿಂಗ್ಗೆ ಚಾಲೆಂಜ್ ಮಾಡಿದ್ದಾರೆ.
ವಿರಾಟ್ ಕೊಹ್ಲಿ ಸದಾ ಮೈದಾನದಲ್ಲಿ ತಮ್ಮ ಆಕ್ರಮಣಕಾರಿ ಆಟದಿಂದಲೇ ಗುರುತಿಸಿಕೊಂಡಿದ್ದಾರೆ. ಅಲ್ಲದೇ ತಮ್ಮ ತಂಡದ ಆಟಗಾರರಿಗೂ ಇದೇ ರೀತಿ ತಮ್ಮ ಈ ಆಕ್ರಮಣಕಾರಿ ಪ್ರವೃತ್ತಿಯನ್ನು ಹುರಿದುಂಬಿಸುತ್ತಾರೆ. ಸದ್ಯ ಕೊಹ್ಲಿ ತಮ್ಮ ತಂಡದ ಯುವ ಆಟಗಾರ ಮಂದೀಪ್ ಸಿಂಗ್ಗೆ ಚಾಲೆಂಜ್ ಮಾಡಿ ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.
Advertisement
Advertisement
ಕೊಹ್ಲಿ ಪೋಸ್ಟ್ ಮಾಡಿರುವ ವಿಡಿಯೋದಲ್ಲಿ ಕೇವಲ 8.90 ಸೆಕೆಂಡ್ ನಲ್ಲಿ 3 ರನ್ ಓಡಿದ್ದಾರೆ. ಮೊದಲ ರನ್ 3.9 ಸೆಕೆಂಡ್, 2ನೇ ರನ್ 2.39 ಸೆಕೆಂಡ್ ಹಾಗೂ ಮೂರನೇ ರನ್ 2.61 ಸೆಕೆಂಡ್ ನಲ್ಲಿ ಓಡಿ ಪೂರ್ಣಗೊಳಿಸಿದ್ದಾರೆ. ಈ ವಿಡಿಯೋ ಮೂಲಕ ಮಂದೀಪ್ ಸಿಂಗ್ಗೆ ಚಾಲೆಂಜ್ ಮಾಡಿರುವ ಕೊಹ್ಲಿ, ನೀವು ನನಗಿಂತಲೂ ವೇಗವಾಗಿ ಓಡುತ್ತಿರಾ? ಇಲ್ಲಿ ನನ್ನ ವೇಗದ 3 ರನ್ ಗಳ ವಿಡಿಯೋ ನೀಡಿದ್ದೇನೆ. ಪ್ಯಾಡ್ ಧರಿಸಿ ನಿಮ್ಮ ವೇಗದ 3 ರನ್ ವಿಡಿಯೋ ಕಳುಹಿಸಿ. ನೀವು ನನ್ನ 8.90 ಸೆಕೆಂಡ್ ವೇಗವನ್ನು ಮೀರಿಸುತ್ತೀರಾ ನೋಡೋಣ ಎಂದು ಬರೆದುಕೊಂಡಿದ್ದಾರೆ.
Advertisement
Think you can run faster than me? ???? Here’s my fastest time for 3 runs. Pad up and send a video of your fastest 3 runs mentioning #NewLevels and @PUMACricket . @mandeeps12 let’s see if you can beat 8.90 sec mundeya! ???? pic.twitter.com/UOdl64NZs6
— Virat Kohli (@imVkohli) April 28, 2018
Advertisement
ವಿಶ್ವ ಕ್ರಿಕೆಟ್ನ ಶ್ರೇಷ್ಠ ಬ್ಯಾಟ್ಸ್ ಮನ್ಗಳಾದ ವಿರಾಟ್ ಮತ್ತು ಎಬಿ ಡಿವಿಲಿಯರ್ಸ್ ರಂತಹ ಆಟಗಾರರನ್ನು ಆರ್ಸಿಬಿ ಹೊಂದಿದ್ದರೂ ಈ ಬಾರಿಯ ಐಪಿಎಲ್ ನಲ್ಲಿ ತಂಡ ಕೇವಲ 2 ಗೆಲುವುಗಳನ್ನು ಮಾತ್ರ ಪಡೆದುಕೊಂಡಿದೆ. ಆದ್ರೆ, ವಯಕ್ತಿಕವಾಗಿ ಆರ್ಸಿಬಿ ನಾಯಕ ತಂಡದ ಗೆಲುವಿಗೆ ಶ್ರಮಿಸುತ್ತಿದ್ದಾರೆ ಎಂಬುವುದು ಅವರು ಮಾಡಿರುವ ಟ್ವೀಟ್ ನಿಂದ ಬಹಿರಂಗಗೊಂಡಿದೆ. ಇದನ್ನು ಓದಿ: ಲಗಾನ್ ಫಿಲ್ಮ್ ಆಟಗಾರನಾದ ಮಂದೀಪ್: ಒಂದು ಫೋಟೋಗೆ ಸಿಕ್ತು ಭರ್ಜರಿ ಲೈಕ್ಸ್