ಇಂದೋರ್: ಟೀಂ ಇಂಡಿಯಾದ ಬ್ಯಾಟಿಂಗ್ ಕ್ರಮಾಂಕವನ್ನು ಬದಲಾವಣೆ ಮಾಡಿ 4ನೇ ಬ್ಯಾಟ್ಸ್‍ಮನ್ ಆಗಿ ಹಾರ್ದಿಕ್ ಪಾಂಡ್ಯರನ್ನ ಕಣಕ್ಕಿಳಿಸಿ ಪಂದ್ಯವನ್ನು ಗೆಲ್ಲಿಸಿದ ಕೋಚ್ ರವಿಶಾಸ್ತ್ರಿ ಐಡಿಯಾವನ್ನು ನಾಯಕ ವಿರಾಟ್ ಕೊಹ್ಲಿ ಹಾಡಿ ಹೊಗಳಿದ್ದಾರೆ.
ಈ ಬಗ್ಗೆ ಕೊಹ್ಲಿ ಮಾತನಾಡಿ ಭಾರತದ ಗೆಲುವಿಗೆ ಹಾರ್ದಿಕ್ ಪಾಂಡ್ಯ ಶ್ರಮ ದೊಡ್ಡದು. ಬ್ಯಾಟಿಂಗ್, ಬೌಲಿಂಗ್ ಹಾಗೂ ಫೀಲ್ಡಿಂಗ್‍ನಲ್ಲೂ ಭಾರತವನ್ನು ಗೆಲ್ಲಿಸುವ ಸಾಮಥ್ರ್ಯ ಹೊಂದಿದ್ದಾರೆ. ಹೀಗಾಗಿ ಭಾರತ ತಂಡದ ಆಲ್ ರೌಂಡರ್ ವಿಭಾಗದಲ್ಲಿ ದೊಡ್ಡ ಆಸ್ತಿಯಾಗಿ ಹೊರಹೊಮ್ಮಿದ್ದಾರೆ. ಉಪಾಯದಿಂದ ಆಸ್ಟ್ರೇಲಿಯಾವನ್ನು ಮಣಿಸಿ ಸರಣಿ ಪಡೆದು ಏಕದಿನ ಕ್ರಿಕೆಟ್‍ನಲ್ಲಿ ರ್ಯಾಂಕಿಂಗ್ ಪಟ್ಟಿಯಲ್ಲಿ 1ನೇ ಸ್ಥಾನ ಪಡೆದುಕೊಳ್ಳುವಲ್ಲಿ ಸಹಾಯವಾಯಿತು ಇದಕ್ಕೆಲ್ಲ ಕೋಚ್ ರವಿಶಾಸ್ತ್ರೀ ಐಡಿಯಾವೇ ಕಾರಣ ಎಂದು ಹೇಳಿದ್ದಾರೆ.
Advertisement
ಆಸ್ಟ್ರೇಲಿಯಾ ವಿರುದ್ಧ ನಡೆದ ಪಂದ್ಯದಲ್ಲಿ ಭಾರತ ಆಲ್‍ರೌಂಡರ್ ಪ್ರದರ್ಶನ ನೀಡಿತು. 294 ರನ್‍ಗಳ ಗುರಿ ಬೆನ್ನತ್ತಿದ ಭಾರತ ಬ್ಯಾಟಿಂಗ್ ಕ್ರಮಾಂಕದಲ್ಲಿ ಬದಲಾವಣೆ ಮಾಡಿ ಹಾರ್ದಿಕ್ ಪಾಂಡ್ಯನನ್ನು 4ನೇ ಕ್ರಮಾಂಕಕ್ಕೆ ಇಳಿಸಿತ್ತು. ಬಿರುಸಿನ ಆಟವಾಡಿದ ಪಾಂಡ್ಯ 72 ಬಾಲ್‍ಗಳಲ್ಲಿ 78 ರನ್ ಬಾರಿಸಿ ಪಂದ್ಯದ ಗೆಲುವಿಗೆ ಕಾರಣರಾಗಿದ್ದರು. ಬೌಲಿಂಗ್‍ನಲ್ಲಿ ಒಂದು ವಿಕೆಟ್ ಮತ್ತು ಅರ್ಧಶ ಶತಕ ಸಿಡಿಸಿದ್ದ ಪಾಂಡ್ಯಗೆ ಪಂದ್ಯಶ್ರೇಷ್ಠ ಪ್ರಶಸ್ತಿಯೂ ಸಿಕ್ಕಿತ್ತು. ಈ ಮೂಲಕ ಈ ಪಾಂಡ್ಯ ತಂಡದ ಪ್ರಮುಖ ಆಲ್ ರೌಂಡರ್ ಆಗಿ ಹೊರ ಹೊಮ್ಮಿದ್ದಾರೆ.
Advertisement
Advertisement
ಬಿಸಿಸಿಐ ಹಾಗೂ ಆಯ್ಕೆ ಸಮಿತಿ ನೀಡಿದ ಅವಕಾಶವನ್ನು ನಾನು ಸರಿಯಾಗಿ ಬಳಿಸಿಕೊಂಡು ಗುರುತಿಸಿಕೊಂಡಿದ್ದೇನೆ. ನನಗೆ ತುಂಬಾ ಖುಷಿ ತಂದಿದೆ ಎಂದು ಹಾರ್ದಿಕ್ ಪಾಂಡ್ಯ ಹೇಳಿದ್ದಾರೆ.
Advertisement
ಇನ್ನು ಪಂದ್ಯ ಕೈ ತಪ್ಪಿದರ ಬಗ್ಗೆ ಮಾತನಾಡಿದ ಸ್ಟಿವ್ ಸ್ಮಿತ್ 37-38ನೇ ಓವರ್ ವರೆಗೆ ಪಂದ್ಯದಲ್ಲಿ ಹಿಡಿತ ಸಾಧಿಸಿದ್ದೆವು. ನಮ್ಮ ಗುರಿ 330 ರನ್ ಇತ್ತು. ಆದರೆ ಭಾರತದ ಬೌಲರ್‍ಗಳು ನಮ್ಮ ಮೇಲೆ ಹಿಡಿತ ಸಾಧಿಸುವಲ್ಲಿ ಯಶಸ್ವಿಯಾದರು. ಹಾರ್ದಿಕ್ ಪಾಂಡ್ಯ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದರು ಎಂದರು.
ಭವಿಷ್ಯದ ಸ್ಪಿನ್ನರ್‍ಗಳಾದ ಯಾದವ್-ಚಾಹಲ್:
ಹೊಸ ಪ್ರತಿಭೆಯ ಸ್ಪಿನ್ ಬೌಲರ್‍ಗಳನ್ನು ಬೆಂಬಲಿಸಿ ಪಂದ್ಯಗಳಿಗೆ ಹಾಕಿಕೊಳ್ಳಬೇಕು ಎಂಬ ಮಾತು ಕೇಳಿ ಬರುತ್ತಿದ್ದ ಕಾರಣ ಯಜುವೇಂದ್ರ ಚಾಹಲ್, ಮತ್ತು ಕುಲದೀಪ್ ಯಾದವ್‍ಗೆ ಅವಕಾಶ ನೀಡಿತ್ತು. ಅಂತಯೇ ಕಳೆದ ಪಂದ್ಯದಲ್ಲಿ ಕುಲದೀಪ್ ಯಾದವ್ ಹ್ಯಾಟ್ರಿಕ್ ವಿಕೆಟ್ ಪಡೆದು ಮಿಂಚಿದರು. ಜೊತೆಗೆ ಚಾಹಲ್ ಕೂಡ ಉತ್ತಮ ಸ್ಪಿನ್ ದಾಳಿ ನಡೆಸಿ ಗಮನ ಸೆಳೆದಿದ್ದಾರೆ. ಪಂದ್ಯದಲ್ಲಿ ಎಲ್ಲರ ಗಮನ ಸೆಳೆದಿದ್ದು, ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಸ್ಪಿನ್ ಬೌಲಿಂಗ್ ನಡೆಸಿ ಐ ಆಮ್ ಬ್ಯಾಕ್ ಅನ್ನೋ ತರ ಬೌಲ್ ಮಾಡಿದರು.
ಆಟಗಾರರಿಗೆ ಅವಕಾಶ?
ಮೂರು ಪಂದ್ಯಗಳನ್ನು ಗೆದ್ದು ಸರಣಿ ಕೈವಶ ಮಾಡಿಕೊಂಡ ಹಿನ್ನೆಲೆಯಲ್ಲಿ ಈ ಮೂರು ಪಂದ್ಯಗಳನ್ನು ಆಡದೇ ಇರುವ ಆಟಗಾರರನ್ನು ಉಳಿದ ಎರಡು ಪಂದ್ಯಗಳಿಗೆ ಪರಿಗಣಿಸಬಹುದು ಎನ್ನುವ ಮಾತುಗಳು ಕೇಳಿ ಬಂದಿದೆ.