ಪೋರ್ಟ್ ಆಫ್ ಸ್ಪೇನ್: ಟೀಂ ಇಂಡಿಯಾದ ಡ್ರೆಸ್ಸಿಂಗ್ ರೂಂ ಗೌಪ್ಯತೆಯನ್ನು ನಾನು ಬಹಿರಂಗ ಮಾಡುವುದಿಲ್ಲ ಎಂದು ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ.
ವೆಸ್ಟ್ ಇಂಡೀಸ್ ವಿರುದ್ಧ 5 ಪಂದ್ಯಗಳ ಏಕದಿನ ಸರಣಿ ಶುಕ್ರವಾರದಿಂದ ಆರಂಭಗೊಳ್ಳುವ ಹಿನ್ನೆಲೆಯಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಪತ್ರಕರ್ತರು ಕುಂಬ್ಳೆ ರಾಜೀನಾಮೆ ನೀಡಿದ್ದು ಯಾಕೆ? ಡ್ರೆಸ್ಸಿಂಗ್ ರೂಂನಲ್ಲಿ ನಡೆದಿದೆ ಎನ್ನಲಾದ ಸುದ್ದಿಗಳು ನಿಜವೇ ಎಂದು ಪ್ರಶ್ನೆ ಮಾಡಿದರು.
Advertisement
ನಿರೀಕ್ಷಿತ ಪ್ರಶ್ನೆಗೆ ಕೊಹ್ಲಿ, ಅನಿಲ್ ಕುಂಬ್ಳೆ ಅವರು ಕೋಚ್ ಹುದ್ದೆಗೆ ರಾಜೀನಾಮೆ ನೀಡಿದ ನಿರ್ಧಾರವನ್ನು ಗೌರವಿಸುತ್ತೇನೆ. ಯಾವುದೇ ಕಾರಣಕ್ಕೂ ಡ್ರೆಸಿಂಗ್ ರೂಂ ಪಾವಿತ್ರ್ಯತೆಯನ್ನು ನಾವು ಕಾಪಾಡಿಕೊಂಡು ಬಂದಿದ್ದೆವೆ. ಮುಂದೆಯೂ ಅದನ್ನು ಹಾಗೆ ಕಾಪಾಡಿಕೊಂಡು ಬರುತ್ತೇವೆ. ಹೀಗಾಗಿ ನಾನು ಡ್ರೆಸಿಂಗ್ ರೂಂ ವಿಚಾರವನ್ನು ಬಹಿರಂಗ ಪಡಿಸುವುದಿಲ್ಲ ಎಂದು ಹೇಳಿದರು.
Advertisement
ಇಂಗ್ಲೆಂಡ್ ನಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿ ಟೂರ್ನಿಯ ಸಂದರ್ಭದಲ್ಲಿ 11 ಪತ್ರಿಕಾಗೋಷ್ಠಿಯಲ್ಲಿ ನಡೆಸಿದ್ದೆ. ಆದ್ರೆ ಡ್ರೆಸ್ಸಿಂಗ್ ರೂಂನಲ್ಲಿ ಏನು ನಡೆಯುತ್ತೆ ಎನ್ನುವುದನ್ನು ಆ ಗುಟ್ಟು ನಾನು ಯಾವತ್ತು ಬಿಟ್ಟುಕೊಟ್ಟಿರಲಿಲ್ಲ. ನಾವು ಮೂರ್ನಾಲ್ಕು ವರ್ಷಗಳಿಂದ ಡ್ರೆಸ್ಸಿಂಗ್ ರೂಂ ಗೌಪ್ಯತೆಯನ್ನು ಬಹಿರಂಗಪಡಿಸದ ಸಂಸ್ಕೃತಿಯನ್ನು ಬೆಳೆಸಿಕೊಂಡು ಬಂದಿದ್ದೇವೆ. ತಂಡದ ಎಲ್ಲ ಸದಸ್ಯರು ಇದಕ್ಕೆ ಬದ್ಧರಾಗಿದ್ದಾರೆ ಎಂದು ಕೊಹ್ಲಿ ತಿಳಿಸಿದರು.
Advertisement
ಡ್ರೆಸಿಂಗ್ ರೂಂನಲ್ಲಿ ನಡೆಯುವ ಪ್ರತಿಯೊಂದು ಘಟನೆ ಕೂಡ ಆಟಗಾರರ ಖಾಸಗಿ ವಿಚಾರವಾಗಿರುತ್ತದೆ. ಹೀಗಾಗಿ ನಾವು ಅದರ ಗುಟ್ಟನ್ನು ನಿರ್ವಹಣೆ ಮಾಡಲೇಬೇಕು ಎಂದರು.
Advertisement
ಒಬ್ಬ ಕ್ರಿಕೆಟಿಗನಾಗಿ ಅನಿಲ್ ಕುಂಬ್ಳೆ ಅವರನ್ನು ನಾನು ತುಂಬಾ ಗೌರವಿಸುತ್ತೇನೆ. ಅವರು ಹಲವು ವರ್ಷಗಳ ಕಾಲ ಆಡಿ ದೇಶದ ಕ್ರಿಕೆಟಿಗೆ ನೀಡಿರುವ ಕೊಡುಗೆಯನ್ನು ನಾನು ಗೌರವಿಸುತ್ತೆನೆ ಎಂದು ತಿಳಿಸಿದರು.
ಇದನ್ನೂ ಓದಿ: ಕುಂಬ್ಳೆ ರಾಜೀನಾಮೆ ನೀಡಿದ್ದು ಯಾಕೆ? ಡ್ರೆಸ್ಸಿಂಗ್ ರೂಂ ಸೀಕ್ರೆಟ್ ಬಹಿರಂಗ