ನವದೆಹಲಿ: ಆರ್‌ಸಿಬಿ (RCB) ಆಟಗಾರ ವಿರಾಟ್ ಕೊಹ್ಲಿ ಭಾನುವಾರ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ (Chinaswammy Stadium) ನಡೆದ ರಾಜಸ್ಥಾನ್ ರಾಯಲ್ಸ್ (Rajasthan Royals) ವಿರುದ್ಧದ ಪಂದ್ಯದಲ್ಲಿ ಹೊಸ ಸಾಧನೆ ಗೈದಿದ್ದಾರೆ.
ಐಪಿಎಲ್ (IPL) ಪಂದ್ಯಗಳ ಫೀಲ್ಡರ್ ಆಗಿ 100 ಕ್ಯಾಚ್‍ಗಳನ್ನು ಪೂರ್ಣಗೊಳಿಸಿದ ಕೊಹ್ಲಿ, ಒಟ್ಟಾರೆ ನೂರು ಕ್ಯಾಚ್ ಹಿಡಿದ ಮೂರನೇ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಭಾನುವಾರ ನಡೆದ ಪಂದ್ಯದಲ್ಲಿ ಕೊಹ್ಲಿ ಪಡೆದ ಎರಡು ಕ್ಯಾಚ್ ಆರ್‌ಸಿಬಿ ಪಾಲಿಗೆ ವರವಾದವು. ಇದನ್ನೂ ಓದಿ: ಜೈಸ್ವಾಲ್ ಕ್ಯಾಚ್ ಹಿಡಿದು ಅನುಷ್ಕಾಗೆ ಫ್ಲೈಯಿಂಗ್ ಕಿಸ್ ಕೊಟ್ಟ ಕೊಹ್ಲಿ
Advertisement
Advertisement
ಈಗ ವಿರಾಟ್ 228 ಪಂದ್ಯಗಳಲ್ಲಿ ಒಟ್ಟು 101 ಕ್ಯಾಚ್‍ಗಳನ್ನು ಪಡೆದಿದ್ದು, ಆಲ್‍ರೌಂಡರ್ ಕೀರಾನ್ ಪೊಲಾರ್ಡ್ (Kieron Pollard) 103 ಕ್ಯಾಚ್‍ಗಳು ಮತ್ತು ಬ್ಯಾಟರ್ ಸುರೇಶ್ ರೈನಾ (Suresh Raina) 204 ಪಂದ್ಯಗಳಲ್ಲಿ 109 ಕ್ಯಾಚ್‍ಗಳನ್ನು ಪಡೆದಿದ್ದಾರೆ. ನಂತರದ ಸ್ಥಾನಕ್ಕೆ ಕೊಹ್ಲಿ ಎಂಟ್ರಿ ಕೊಟ್ಟಿದ್ದಾರೆ.
Advertisement
Advertisement
ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆರ್‍ಸಿಬಿ 20 ಓವರ್‍ಗಳಲ್ಲಿ 9 ವಿಕೆಟ್ ನಷ್ಟಕ್ಕೆ 189 ರನ್ ಗಳಿಸಿತ್ತು. 190 ರನ್‍ಗಳ ಬೃಹತ್ ಮೊತ್ತದ ಗುರಿ ಬೆನ್ನತ್ತಿದ್ದ ರಾಜಸ್ಥಾನ್ ರಾಯಲ್ಸ್ ತಂಡ ನಿಗದಿತ ಓವರ್‍ಗಳಲ್ಲಿ 6 ವಿಕೆಟ್ ನಷ್ಟಕ್ಕೆ 182 ರನ್ ಗಳಿಸಿ ಸೋಲೊಪ್ಪಿಕೊಂಡಿತು. ಇದನ್ನೂ ಓದಿ: ಟಿ20 – 6000 ರನ್ ಗಡಿ ದಾಟಿದ ಸೂರ್ಯಕುಮಾರ್