ಆ್ಯಂಟಿಗುವಾ: ವೆಸ್ಟ್ ಇಂಡೀಸ್ ವಿರುದ್ಧ ನಡೆಯುತ್ತಿರುವ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ ನಲ್ಲಿ ವಿರಾಟ್ ಕೊಹ್ಲಿ ಕೇವಲ 9 ರನ್‍ಗಳಿಗೆ ವಿಕೆಟ್ ಒಪ್ಪಿಸಿ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದ್ದರು. ಔಟಾದ ಬಳಿಕ ಡ್ರೆಸ್ಸಿಂಗ್ ಕೋಣೆಯ ಬಾಲ್ಕನಿಯಲ್ಲಿ ಕುಳಿತ ಕೊಹ್ಲಿ, ವಿಶೇಷ ಪುಸ್ತಕ ಒಂದನ್ನು ಓದುತ್ತಿದ್ದ ದೃಶ್ಯವು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.
‘ಅಹಂಕಾರವನ್ನು ನಿವಾರಿಸಿ: ಸ್ವಾತಂತ್ರ್ಯ, ಸಂತೋಷ ಮತ್ತು ಜೀವನದಲ್ಲಿ ಯಶಸ್ಸನ್ನು ಪಡೆಯಲು ಏಳು ಸುಲಭ ಮಾರ್ಗಗಳು’ ಎಂಬ ಪುಸ್ತಕವನ್ನು ಕೊಹ್ಲಿ ಓದಿದ್ದಾರೆ. ಈ ಪುಸ್ತಕದ ಲೇಖಕರು ಸ್ಟೀವನ್ ಸೆಲ್ವೆಸ್ಟರ್. ಈ ಪುಸ್ತಕವನ್ನು ಓದುತ್ತಿರುವ ದೃಶ್ಯವು ಟಿವಿಯಲ್ಲಿ ಪ್ರಸಾರವಾಗಿದ್ದು, ಇದನ್ನು ನೋಡಿದ ನೆಟ್ಟಿಗರು ಕೊಹ್ಲಿ ಅವರನ್ನು ಟ್ರೋಲ್ ಮಾಡಿದ್ದಾರೆ.
Advertisement
https://twitter.com/ixSUPERBOYxi/status/1164914668395094016
Advertisement
ಸೋಶಿಯಲ್ ಮೀಡಿಯಾದಲ್ಲಿ ಕೊಹ್ಲಿ ಅವರ ಬಗ್ಗೆ ಆಸಕ್ತಿದಾಯಕ ಪ್ರತಿಕ್ರಿಯೆಗಳು ಬಂದಿವೆ. ಇದಕ್ಕೆ ಮುಖ್ಯ ಕಾರಣವೆಂದರೆ ಮೈದಾನದಲ್ಲಿ ಆಕ್ರಮಣಕಾರಿ ಸ್ವಭಾವಕ್ಕೆ ಕೊಹ್ಲಿ ಹೆಸರುವಾಸಿಯಾಗಿದ್ದಾರೆ.
Advertisement
ಯಾರೋ ಪರಿಪೂರ್ಣ ಪುಸ್ತಕವನ್ನು ವಿರಾಟ್ ಕೊಹ್ಲಿಗೆ ಉಡುಗೊರೆಯಾಗಿ ನೀಡಿದ್ದಾರೆ ಎಂದು ನಾನು ಭಾವಿಸುತ್ತೇನೆ. ವಿರಾಟ್ ತಮಗಾಗಿ ಅತ್ಯುತ್ತಮ ಪುಸ್ತಕವನ್ನು ಓದುತ್ತಿದ್ದಾರೆ ಎಂದು ನೆಟ್ಟಿಗರು ಟ್ರೋಲ್ ಮಾಡಿದ್ದಾರೆ.
Advertisement
https://twitter.com/ixSUPERBOYxi/status/1164914668395094016
ಅಂತಹ ವ್ಯಕ್ತಿಗೆ ಅಂತಹ ಪುಸ್ತಕವು ಹೆಚ್ಚು ಅಗತ್ಯವಾಗಿತ್ತು ಎಂದು ಅನುರಾಗ್ ಟ್ವೀಟ್ ಮಾಡಿದ್ದಾರೆ. ಪುಸ್ತಕದ ಶೀರ್ಷಿಕೆ ಬರೆದು ರಿಯಾ ಸ್ಮೈಲಿ ಎಮೋಜಿ ಹಾಕಿದ್ದಾರೆ.
ವಿರಾಟ್ ನೀವು ಅದ್ಭುತ. ಆದರೆ ನಿಮಗೆ ನಿಜವಾಗಿಯೂ ಈ ಪುಸ್ತಕದ ಅಗತ್ಯವಿದೆ ಎಂದು ಪ್ರಣಬ್ ರಿಟ್ವೀಟ್ ಮಾಡಿದ್ದಾರೆ.
Detox Your Ego..
Book Sponsored by Rohit Sharma? #WIvIND pic.twitter.com/lkmr3LIuKH
— Hariharan Durairaj ????????️ (@hariharan_draj) August 23, 2019
ಈ ಪುಸ್ತಕವನ್ನು ರೋಹಿತ್ ಶರ್ಮಾ ಪ್ರಾಯೋಜಿಸಿದ್ದಾರೆ ಎಂದು ಹರಿಹರನ್ ದುರೈರಾಜ್ ಕಮೆಂಟ್ ಮಾಡಿದ್ದಾರೆ. ರೋಹಿತ್ ಶರ್ಮಾರನ್ನು ಕಡೆಗಣಿಸುತ್ತಿರುವ ವಿರಾಟ್ ಕೊಹ್ಲಿ ಅವರನ್ನು ಕುಟುಕಿದ್ದಾರೆ.
‘ಇಗೋ ನಿವಾರಿಸಿ’ ಪುಸ್ತಕವನ್ನು ಇಂಗ್ಲೆಂಡ್‍ನ ಮಾಜಿ ಕ್ರಿಕೆಟಿಗ ಸ್ಟೀವನ್ ಸಿಲ್ವೆಸ್ಟರ್ ಬರೆದಿದ್ದಾರೆ. ಸ್ಟೀವನ್ ಸಿಲ್ವೆಸ್ಟರ್ ಮಿಡಲ್ಸೆಕ್ಸ್ ಕೌಂಟಿಗೆ ಕ್ರಿಕೆಟ್ ಆಡಿದ್ದಾರೆ. ಜೊತೆಗೆ ಫುಟ್ಬಾಲ್ ಆಟಗಾರರೂ ಆಗಿದ್ದಾರೆ. ಲಂಡನ್‍ನ ಗೋಲ್ಡ್ ಸ್ಮಿತ್ ವಿಶ್ವವಿದ್ಯಾಲಯದಿಂದ ಮನೋವೈದ್ಯಶಾಸ್ತ್ರದಲ್ಲಿ ಪದವಿ ಪಡೆದಿದ್ದಾರೆ. ಇಗೋ ನಿವಾರಿಸಿ ಪುಸ್ತಕದಲ್ಲಿ 256 ಪುಟಗಳಿವೆ.