ಮುಂಬೈ: ಟೀಂ ಇಂಡಿಯಾದ ಮೂರು ಮಾದರಿ ನಾಯಕತ್ವಕ್ಕೂ ವಿರಾಟ್ ಕೊಹ್ಲಿ ಗುಡ್ ಬೈ ಹೇಳಲು ಕಾರಣವಾದ ಅಂಶಗಳು ಈಗಾಗಲೇ ಚರ್ಚೆಯಾಗುತ್ತಿದೆ. ಕ್ರಿಕೆಟ್ ವಲಯದಲ್ಲಿ ಕೊಹ್ಲಿ ನಾಯಕತ್ವ ತ್ಯಜಿಸಲು ಈ ಮೂರು ಕಾರಣಗಳು ಬಲವಾಗಿ ಕೇಳಿಬರುತ್ತಿದೆ.
Advertisement
ಹೌದು ಕೊಹ್ಲಿ ಟಿ20 ನಾಯಕತ್ವವನ್ನು ಸ್ವಇಚ್ಚೆಯಿಂದ ತ್ಯಜಿಸಿದರೆ, ಏಕದಿನ ನಾಯಕತ್ವದಿಂದ ಬಿಸಿಸಿಐ ಕೆಳಗಿಳಿಸಿತ್ತು. ಇದೀಗ ಟೆಸ್ಟ್ ನಾಯಕತ್ವಕ್ಕೆ ಕೊಹ್ಲಿ ಸ್ವಇಚ್ಚೆಯಿಂದ ತ್ಯಜಿಸಿ ತಂಡದಲ್ಲಿ ಆಟಗಾರನಾಗಿ ಮುಂದುವರಿಯಲು ನಿರ್ಧರಿಸಿದ್ದಾರೆ. ಆದರೆ ಕೊಹ್ಲಿ ಟೆಸ್ಟ್ ನಾಯಕತ್ವದಲ್ಲಿ ಮುಂದುವರಿಯುವುದಾಗಿ ಈ ಹಿಂದೆ ಹೇಳಿದ್ದರು. ಆದರೆ ಇದೀಗ ದಿಢೀರ್ ಆಗಿ ಗುಡ್ ಬೈ ಹೇಳಲು ಈ ಮೂರು ಕಾರಣಗಳು ಕೇಳಿಬರುತ್ತಿದೆ. ಇದನ್ನೂ ಓದಿ: ಸರಿಯಾಗಿ ನೆನಪಿದೆ.. ನೀವು ಭಾರತದ ನಾಯಕರಾಗ್ತೀರಿ ಎಂದಿದ್ದು: ಅನುಷ್ಕಾ ಶರ್ಮಾ
Advertisement
Advertisement
ಕೊಹ್ಲಿ ಟಿ20 ವಿಶ್ವಕಪ್ ಸೋತಿದ್ದು ಮೊದಲ ಕಾರಣವಾದರೆ, ಐಸಿಸಿ ಟೆಸ್ಟ್ ಚಾಂಪಿಯನ್ ಶಿಪ್ ಸೋಲು 2ನೇ ಕಾರಣವೆಂದು ಈಗಾಗಲೇ ಕ್ರಿಕೆಟ್ ವಲಯದಲ್ಲಿ ಮಾತುಗಳು ಕೇಳಿಬರುತ್ತಿದೆ. ಇನ್ನೂ ಕೊಹ್ಲಿ ಆಪ್ತ ಮೂಲಗಳ ಪ್ರಕಾರ ಟೀಂ ಇಂಡಿಯಾದಲ್ಲಿ ಮೂರು ಮಾದರಿ ತಂಡಕ್ಕೂ ಒಬ್ಬನೇ ನಾಯಕನಾಗಿದ್ದರೆ ಉತ್ತಮ ಎನ್ನುವ ಅಭಿಪ್ರಾಯ ಇದೆ. ಹಾಗಾಗಿ ತಂಡದ ಶ್ರೇಯಸ್ಸಿಗಾಗಿ ಕೊಹ್ಲಿ ಈ ನಿರ್ಧಾರಕ್ಕೆ ಬಂದಿದ್ದಾರೆ ಎಂದು ವರದಿಗಳಿವೆ. ಇದನ್ನೂ ಓದಿ: ಕ್ಯಾಪ್ಟನ್ ಕಿಂಗ್ ಕೊಹ್ಲಿ ಯುಗಾಂತ್ಯ – ಸಾಮಾಜಿಕ ಜಾಲತಾಣದಲ್ಲಿ ಕಿಚ್ಚು
Advertisement
ಏನೇ ಆದರೂ ಕೊಹ್ಲಿ ಮಾತ್ರ ತಂಡದ ಯಶಸ್ಸಿಗಾಗಿ ಆಟಗಾರನಾಗಿ ತಂಡದಲ್ಲಿ ಮುಂದುವರಿಯುವ ನಿರ್ಧಾರದ ಬಗ್ಗೆ ಅಭಿಮಾನಿಗಳಿಂದ ಮೆಚ್ಚುಗೆ ಕೇಳಿ ಬರುತ್ತಿದೆ. ಅಲ್ಲದೇ ಕೊಹ್ಲಿ ತನ್ನ ಕ್ಯಾಪ್ಟನ್ ಗುರು ಧೋನಿಯಂತೆ ಉತ್ತಮ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ ಎಂಬ ಮಾತು ಮಾರ್ದನಿಸುತ್ತಿದೆ. ಇದನ್ನೂ ಓದಿ: ನಾಯಕತ್ವ ತ್ಯಜಿಸಿ ಧೋನಿಗೆ ವಿಶೇಷ ಧನ್ಯವಾದ ಸಲ್ಲಿಸಿದ ಕೊಹ್ಲಿ!