ಮುಂಬೈ: ಟೀಂ ಇಂಡಿಯಾದ ಎಲ್ಲಾ ಮಾದರಿ ನಾಯಕತ್ವಕ್ಕೆ ವಿರಾಟ್ ಕೊಹ್ಲಿ ಗುಡ್ ಬೈ ಹೇಳಿದ್ದು, ಕ್ರಿಕೆಟ್ ಅಭಿಮಾನಿಗಳಲ್ಲಿ ಬೇಸರ ತರಿಸಿದೆ. ಸಾಮಾಜಿಕ ಜಾಲತಾಣದಲ್ಲಿ ಕೊಹ್ಲಿ ನಾಯಕತ್ವ ಅಂತ್ಯದ ಬಗ್ಗೆ ಕಿಚ್ಚು ಹೆಚ್ಚಿದೆ.
Advertisement
ಟಿ20 ಮತ್ತು ಏಕದಿನ ತಂಡದ ನಾಯಕತ್ವದಿಂದ ಕೆಳಗಿಳಿದಿದ್ದ ಕೊಹ್ಲಿ ನಿನ್ನೆ ಟೆಸ್ಟ್ ತಂಡದ ನಾಯಕತ್ವವನ್ನು ತ್ಯಜಿಸಿದ್ದರು. 7 ವರ್ಷಗಳ ಕಾಲ ಟೀಂ ಇಂಡಿಯಾವನ್ನು ಮುನ್ನಡೆಸಿದ ಕೊಹ್ಲಿ ಹಲವು ಸಾಧನೆಗಳನ್ನು ಮಾಡಿದ್ದು, ತಮ್ಮ ಅಗ್ರೆಸ್ಸಿವ್ ನಾಯಕತ್ವದಿಂದ ಟೀಂ ಇಂಡಿಯಾವನ್ನು ಯಶಸ್ಸಿನ ಮೆಟ್ಟಿಲಿಗೆ ಏರಿಸಿದ್ದರು. ಇದೀಗ ದಕ್ಷಿಣ ಆಫ್ರಿಕಾದಲ್ಲಿ ಟಸ್ಟ್ ಸರಣಿ ಸೋತ ಬೆನ್ನಲ್ಲೇ ನಾಯಕತ್ವ ತ್ಯಜಿಸಿ ಆಟಗಾರನಾಗಿ ತಂಡದಲ್ಲಿ ಮುನ್ನಡೆಯಲು ನಿರ್ಧರಿಸಿದ್ದಾರೆ. ಇದನ್ನೂ ಓದಿ: ನಾಯಕತ್ವ ತ್ಯಜಿಸಿ ಧೋನಿಗೆ ವಿಶೇಷ ಧನ್ಯವಾದ ಸಲ್ಲಿಸಿದ ಕೊಹ್ಲಿ!
Advertisement
???????? pic.twitter.com/huBL6zZ7fZ
— Virat Kohli (@imVkohli) January 15, 2022
Advertisement
ಕೊಹ್ಲಿ ಟೀಂ ಇಂಡಿಯಾದ ನಾಯಕತ್ವದಿಂದ ಕೆಳಗಿಳಿಯುತ್ತಿದ್ದಂತೆ ಅಭಿಮಾನಿಗಳು ಬಿಸಿಸಿಐ ವಿರುದ್ಧ ಕಿಡಿಕಾರಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಹಲವು ಬಗೆಯ ಚರ್ಚೆ ನಡೆಯುತ್ತಿದ್ದು, ಟೀಂ ಇಂಡಿಯಾದ ಲಯ ಬದಲಿಸಿದ ಶ್ರೇಷ್ಠ ನಾಯಕನ ಯುಗ ಅಂತ್ಯವಾಗಿದೆ. ಎಂಬ ಮಾತು ಕೇಳಿಬರುತ್ತಿದೆ. ಇದನ್ನೂ ಓದಿ: ರಾಜೀನಾಮೆ ಕೊಹ್ಲಿ ವೈಯಕ್ತಿಕ ವಿಚಾರ: ಸೌರವ್ ಗಂಗೂಲಿ
Advertisement
You're forever gonna be my captain
King Kohli Forever ❤????????
Thank you ???? Respect GOAT!
The End of an Era..
#TeamIndia's Test captain! ????#ViratKohli | #Kohli | #KingKohli | #BCCI | #BCCIPolitics | #Captain | #Viratvsbcci | #shameonbcci | #India | #Dhoni pic.twitter.com/HUVRGHUAxa
— Karthi Kohli (@KohliKarthi) January 15, 2022
ನಾಯಕನಾಗಿ ನೀವು ಅಭಿಮಾನಿಗಳ ಮನಗೆದ್ದಿದ್ದೀರಿ ಮುಂದೆ ಬ್ಯಾಟಿಂಗ್ ಕಡೆ ಗಮನ ಹರಿಸಿ ಎಂದು ಅಭಿಮಾನಿಗಳು ಸಲಹೆ ನೀಡಿದ್ದಾರೆ. ಕೊಹ್ಲಿಗೆ ಸಚಿನ್ ತೆಂಡೂಲ್ಕರ್, ವೀರೇಂದ್ರ ಸೆಹ್ವಾಗ್, ವಾಸಿಂ ಜಾಫರ್, ಸುನೀಲ್ ಗವಾಸ್ಕರ್ ಸೇರಿದಂತೆ ಹಲವು ದಿಗ್ಗಜ ಆಟಗಾರರು ಶುಭಕೋರಿದ್ದಾರೆ. ಇದನ್ನೂ ಓದಿ: ಟೀಂ ಇಂಡಿಯಾದ ಟೆಸ್ಟ್ ನಾಯಕತ್ವ ತೊರೆದ ವಿರಾಟ್ ಕೊಹ್ಲಿ
Congratulations on a successful stint as a captain, @imVkohli.
You always gave 100% for the team and you always will. Wishing you all the very best for the future. pic.twitter.com/CqOWtx2mQ7
— Sachin Tendulkar (@sachin_rt) January 15, 2022
ವಿರಾಟ್ ಕೊಹ್ಲಿ ಟೀಂ ಇಂಡಿಯಾದ ಯಶಸ್ವಿ ನಾಯಕರಲ್ಲಿ ಒಬ್ಬರು. ಒಟ್ಟು 68 ಟೆಸ್ಟ್‌ಗಳಲ್ಲಿ ನಾಯಕನಾಗಿ ಮುನ್ನಡೆಸಿರುವ ಕೊಹ್ಲಿ 40 ಜಯ, 17 ಸೋಲು ಕಂಡು, 58.52% ಗೆಲುವಿನ ಸರಾಸರಿಯೊಂದಿಗೆ ಯಶಸ್ವಿ ಕ್ಯಾಪ್ಟನ್ ಎನಿಸಿಕೊಂಡಿದ್ದಾರೆ. ಧೋನಿ 60 ಪಂದ್ಯಗಳಲ್ಲಿ ನಾಯಕನಾಗಿ 27 ಪಂದ್ಯ ಜಯ ಗಳಿಸಿ ಕೊಹ್ಲಿ ಬಳಿಕದ ಸ್ಥಾನದಲ್ಲಿದ್ದಾರೆ.
Many Congratulations #ViratKohli on an outstanding career as India's Test Captain. Stats don't lie & he was not only the most successful Indian Test Captain but one of the most successful in the world. Can be very proud @imVkohli & looking forward to watch u dominate with the bat
— Virender Sehwag (@virendersehwag) January 15, 2022
ಟೀಂ ಇಂಡಿಯಾವನ್ನು ಟೆಸ್ಟ್ ರ್‍ಯಾಕಿಂಗ್‍ನಲ್ಲಿ ನಂಬರ್ 1 ಸ್ಥಾನಕ್ಕೆ ಕೊಂಡೊಯ್ದಿದ್ದ ಕೊಹ್ಲಿ, ಐಸಿಸಿ ಟ್ರೋಫಿ ಜಯಿಸಲು ಮಾತ್ರ ವಿಫಲವಾಗಿದ್ದರು. ಇದನ್ನು ಹೊರತು ಪಡಿಸಿ ಕೊಹ್ಲಿ ಉತ್ತಮವಾಗಿ ನಾಯಕತ್ವವನ್ನು ನಿರ್ವಹಿಸಿ ಇದೀಗ ಮೂರು ಮಾದರಿ ನಾಯಕತ್ವವನ್ನು ತ್ಯಜಿಸಿದ್ದಾರೆ.