ಮುಂಬೈ: ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಆರ್ಸಿಬಿ ಅಭಿಮಾನಿಗಳಿಗೆ ಮೋಸ ಮಾಡಿದ್ರಾ ಎನ್ನುವ ಪ್ರಶ್ನೆ ಈಗ ಎದ್ದಿದೆ.
ಗುರುವಾರ ವಿರಾಟ್ ಕೊಹ್ಲಿ ನಾಳೆ ನಿಮ್ಮ ಜೊತೆ ನಾನು ಮಾತನಾಡುತ್ತೇನೆ ಎಂದು ಹೇಳಿ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಅಪ್ಲೋಡ್ ಮಾಡಿದ್ದರು. ಈ ವಿಡಿಯೋ ನೋಡಿ ಆರ್ಸಿಬಿ ಅಭಿಮಾನಿಗಳು ಬೆಂಗಳೂರು ತಂಡದ ಬಗ್ಗೆ ಮಾತನಾಡಲಿದ್ದಾರೆ ಎಂದು ನಿರೀಕ್ಷೆ ಮಾಡಿದ್ದರು. ಆದರೆ ಕೊಹ್ಲಿ ಇಂದು ಖಾಸಗಿ ಕಂಪೆನಿಯ ಉತ್ಪನ್ನವನ್ನು ಪ್ರಚಾರ ಮಾಡಿದ್ದು ಆರ್ಸಿಬಿ ಅಭಿಮಾನಿಗಳಿಗೆ ನಿರಾಸೆ ಮಾಡಿದ್ದಾರೆ ಎನ್ನುವ ಮಾತು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
Advertisement
ಇಂದು ಸಾಮಾಜಿಕ ಜಾಲತಾಣದಲ್ಲಿ ಲೈವ್ ಬಂದ ಕೊಹ್ಲಿ ಪ್ರತಿಷ್ಟಿತ ಶೂ ಕಂಪನಿಯೊಂದರ ಪ್ರಮೋಷನ್ ಮಾಡಿದ್ದಾರೆ. ವಿರಾಟ್ ಶೂ ಕಂಪನಿಯ ರಾಯಭಾರಿ ಆಗಿದ್ದು, ಅದರ ಪ್ರಮೋಶನ್ಗಾಗಿ ಲೈವ್ ಬಂದಿದ್ದರು.
Advertisement
I'm going live on my Facebook and Instagram tomorrow at 1:30pm. Join me. We've got a lot of important things to discuss. pic.twitter.com/d6ndhYw34u
— Virat Kohli (@imVkohli) May 10, 2018
Advertisement
ಎಲ್ಲರಿಗೂ ನಮಸ್ಕಾರ. ನಾನು ನಿಮ್ಮ ಜೊತೆ ಮುಖ್ಯವಾಗಿ ಮಾತನಾಡಬೇಕು. ನಾಳೆ ನಾನು 1.30ಕ್ಕೆ ಲೈವ್ ಬರುತ್ತಿದ್ದೇನೆ. ಯಾರೂ ಈ ಲೈವ್ ಮರೆಯಬೇಡಿ. ಏಕೆಂದರೆ ಇದು ಬಹಳ ಮುಖ್ಯವಾದದ್ದು ಎಂದು ವಿಡಿಯೋದಲ್ಲಿ ಗುರುವಾರ ಕೊಹ್ಲಿ ಹೇಳಿಕೊಂಡಿದ್ದರು.
Advertisement
ಕೊಹ್ಲಿ ಈ ಹಿಂದೆ ಯಾವುದೇ ಈ ರೀತಿಯ ಹೇಳಿಕೆಯನ್ನು ಕೊಟ್ಟಿರಲಿಲ್ಲ. ಆದರೆ ಈಗ ಆರ್ಸಿಬಿ ಕಳಪೆ ಪ್ರದರ್ಶನ ನೀಡುತ್ತಿರುವ ಹಿನ್ನೆಲೆಯಲ್ಲಿ ತಂಡದ ಬಗ್ಗೆಯೇ ಹೆಚ್ಚಿನ ಮಾಹಿತಿ ನೀಡಬಹುದು ಎನ್ನುವ ನಿರೀಕ್ಷೆಯನ್ನ ಅಭಿಮಾನಿಗಳು ಹೊಂದಿದ್ದರು.
ಲೈವ್ನಲ್ಲಿ ವಿರಾಟ್ ಐಪಿಎಲ್ನಲ್ಲಿ ಆರ್ಸಿಬಿ ಕಳಪೆ ಪ್ರದರ್ಶನದ ಬಗ್ಗೆ ಮಾತನಾಡಲಿದ್ದಾರಾ ಅಥವಾ ವಿರಾಟ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕನ ಸ್ಥಾನದಿಂದ ಕೆಳಗಿಳಿಯುತ್ತಾರಾ? ಈ ಕಾರಣಕ್ಕೆ ದಿನಾಂಕ ಫಿಕ್ಸ್ ಮಾಡಿದ್ದಾರಾ ಎನ್ನುವ ಪ್ರಶ್ನೆಯನ್ನು ಅಭಿಮಾನಿಗಳು ಕೇಳಿದ್ದರು. ಇದನ್ನೂ ಓದಿ: ನಾಳೆ ಮಧ್ಯಾಹ್ನ ವಿಶೇಷ ಪ್ರಕಟಣೆಯನ್ನು ಪ್ರಕಟಿಸಲಿದ್ದಾರೆ ಕೊಹ್ಲಿ!