ನವದೆಹಲಿ: ಏಷ್ಯಾ ಕಪ್ (Asia Cup 2023) ಅಭ್ಯಾಸದ ವೇಳೆ ಟೀಂ ಇಂಡಿಯಾ (Team India) ಮಾಜಿ ನಾಯಕ ವಿರಾಟ್ ಕೊಹ್ಲಿ (Virat Kohli) ಮೈದಾನದಲ್ಲಿ ನಾಯಿಮರಿಯೊಂದನ್ನು ಮುದ್ದಾಡಿ ಸುದ್ದಿಯಾಗಿದ್ದಾರೆ.
ಹಂಚಿಕೊಂಡ ಚಿತ್ರದಲ್ಲಿ ನಾಯಿಮರಿಯೊಂದಿಗೆ ನಗುತ್ತಾ ಮಾತನಾಡುತ್ತಿರುವುದನ್ನು ನೋಡಬಹುದಾಗಿದೆ. ಕೆಲವೇ ಗಂಟೆಗಳ ಹಿಂದೆ ಹಂಚಿಕೊಳ್ಳಲಾದ ಈ ಚಿತ್ರವು 20 ಲಕ್ಷಕ್ಕೂ ಹೆಚ್ಚು ಲೈಕ್‍ಗಳನ್ನು ಗಳಿಸಿದೆ. ಅಲ್ಲದೇ ಅಭಿಮಾನಿಗಳಿಂದ ಮೆಚ್ಚುಗೆಯ ಕಾಮೆಂಟ್‍ಗಳು ಬಂದಿವೆ. ಇದನ್ನೂ ಓದಿ: ಡೊನಾಲ್ಡ್ ಟ್ರಂಪ್ ಜೊತೆ ಗಾಲ್ಫ್ ಆಡಿದ ಧೋನಿ!
Advertisement
King Kohli playing with a puppy in the practice session.
Video of the day! pic.twitter.com/tSR0oyBYYT
— Mufaddal Vohra (@mufaddal_vohra) September 8, 2023
Advertisement
ಕೊಹ್ಲಿಯವರು ಶ್ವಾನ ಪ್ರಿಯರಾಗಿದ್ದಾರೆ. ಈ ವಿಚಾರ ಗುಟ್ಟಾಗಿ ಉಳಿದಿಲ್ಲ. ಅವರ ಸಾಮಾಜಿಕ ಜಾಲತಾಣಗಳಲ್ಲಿ ಮುದ್ದಾದ ನಾಯಿಗಳೊಂದಿಗೆ ಆಟವಾಡುವ ಚಿತ್ರಗಳು ಮತ್ತು ವೀಡಿಯೋಗಳಿಂದ ತುಂಬಿವೆ. ಈ ಹಿಂದೆ ಅವರು ಭೂತಾನ್ ಪ್ರವಾಸದಲ್ಲಿದ್ದಾಗ ಹೃದಯಸ್ಪರ್ಶಿ ಚಿತ್ರವೊಂದನ್ನು ಹಂಚಿಕೊಂಡಿದ್ದರು. ಚಿತ್ರದಲ್ಲಿ ಅವರು ಮುದ್ದಾದ ನಾಯಿಮರಿಯೊಂದನ್ನು ತಬ್ಬಿಕೊಂಡು ಪೊಲೀಸ್ ನೀಡಿದ್ದರು.
Advertisement
Advertisement
ಟೀಂ ಇಂಡಿಯಾ ಏಷ್ಯಾ ಕಪ್ 2023ರ ಪಂದ್ಯದಲ್ಲಿ ಬಹು ನಿರೀಕ್ಷಿತ ಸೂಪರ್ 4 ಹಂತವನ್ನು ತಲುಪಿದೆ. ಈ ಮೂಲಕ ಸೆ. 10 ರಂದು ಸೂಪರ್ 4 ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಎದುರಿಸಲಿದೆ. ಈ ಹಂತದಲ್ಲಿ ಬಾಂಗ್ಲಾದೇಶವನ್ನು ಮಣಿಸುವ ಮೂಲಕ ಪಾಕಿಸ್ತಾನವು (Pakistan) ಈಗಾಗಲೇ ಪ್ರಬಲ ಆರಂಭವನ್ನು ಮಾಡಿದೆ.
ಪಂದ್ಯಕ್ಕೆ ಈಗ ಮಳೆ ಸವಾಲಾಗಿದೆ. ಕಳೆದ ವಾರದಿಂದ ಶ್ರೀಲಂಕಾದಲ್ಲಿ ಭಾರೀ ಮಳೆಯಾಗುತ್ತಿದ್ದು, ರಸ್ತೆಗಳು ಜಲಾವೃತವಾಗಿವೆ. ಮಳೆಯ ಕಾರಣದಿಂದ ರಿಸರ್ವ್ ದಿನವನ್ನು ನಿಗದಿಪಡಿಸಲಾಗಿದ್ದು, ಸೆ.10 ರಂದು ಮಳೆಯಿಂದ ಪಂದ್ಯ ರದ್ದಾದರೆ ಸೆ.11 ರಂದು ಪಂದ್ಯ ನಡೆಯಲಿದೆ. ಆದರೆ ರಿಸರ್ವ್ ದಿನ ಕೂಡ ಮಳೆಯಾಗುವ ಸಾಧ್ಯತೆ ಎದ್ದು ಕಾಣುತ್ತಿದೆ. ಇದನ್ನೂ ಓದಿ: ಭಾರತ ಪಾಕ್ ಪಂದ್ಯಕ್ಕೆ ವರುಣನ ಅಡ್ಡಗಾಲು: ಮ್ಯಾಚ್ ರದ್ದಾದರೆ ಗತಿ ಏನು?
Web Stories