ವಿರಾಟ್‌ ಕೊಹ್ಲಿ ನನ್ನ ನಾಯಕತ್ವದಡಿಯಲ್ಲಿ ಆಡಿದ್ದಾರೆ: ತೇಜಸ್ವಿ ಯಾದವ್‌

Public TV
2 Min Read
virat kohli tejashwi yadav

– ಟೀಂ ಇಂಡಿಯಾದ ಅನೇಕ ಆಟಗಾರರು ನನ್ನ ಬ್ಯಾಚ್‌ಮೇಟ್‌ಗಳು

ನವದೆಹಲಿ: ನನ್ನ ನಾಯಕತ್ವದಡಿಯಲ್ಲಿ ವಿರಾಟ್‌ ಕೊಹ್ಲಿ (Virat Kohli) ಆಡಿದ್ದಾರೆ. ಅನೇಕ ಟೀಂ ಇಂಡಿಯಾ ಆಟಗಾರರು ನನ್ನ ಬ್ಯಾಚ್‌ಮೇಟ್‌ಗಳು ಎಂದು ಆರ್‌ಜೆಡಿ ನಾಯಕ ತೇಜಸ್ವಿ ಯಾದವ್‌ (Tejashwi Yadav) ಹೇಳಿಕೆ ನೀಡಿದ್ದಾರೆ.

ತೇಜಶ್ವಿ ಯಾದವ್ ಅವರು ತಮ್ಮ ಕ್ರಿಕೆಟ್ ಪಯಣದ ಕುರಿತು ಹೇಳಿಕೆ ನೀಡಿರುವುದು ಸೋಷಿಯಲ್‌ ಮೀಡಿಯಾದಲ್ಲಿ ಚರ್ಚೆ ಹುಟ್ಟುಹಾಕಿದೆ. ಇದನ್ನೂ ಓದಿ: ಟೀಂ ಇಂಡಿಯಾ ಜೊತೆ ಸೇರಿದ ಹೊಸ ಬೌಲಿಂಗ್ ಕೋಚ್ ಮಾರ್ಕೆಲ್

ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್ ಯಾದವ್ ಅವರ ಪುತ್ರ ಮತ್ತು ಆರ್‌ಜೆಡಿ ನಾಯಕ ತೇಜಸ್ವಿ, ಭಾರತೀಯ ಕ್ರಿಕೆಟ್ ದಿಗ್ಗಜ ವಿರಾಟ್ ಕೊಹ್ಲಿ ದೇಶೀಯ ಕ್ರಿಕೆಟ್‌ನಲ್ಲಿ ತಮ್ಮ ನಾಯಕತ್ವದಲ್ಲಿ ಆಡಿದ್ದಾರೆ ಎಂದು ಹೇಳಿಕೊಂಡಿದ್ದಾರೆ.

ನಾನು ಕ್ರಿಕೆಟಿಗನಾಗಿದ್ದೆ. ಅದರ ಬಗ್ಗೆ ಯಾರೂ ಮಾತನಾಡುವುದಿಲ್ಲ. ವಿರಾಟ್ ಕೊಹ್ಲಿ ನನ್ನ ನಾಯಕತ್ವದಲ್ಲಿ ಆಡಿದ್ದಾರೆ. ಯಾರಾದರೂ ಅದರ ಬಗ್ಗೆ ಮಾತನಾಡಿದ್ದಾರೆಯೇ? ವೃತ್ತಿಪರನಾಗಿ ನಾನು ಉತ್ತಮ ಕ್ರಿಕೆಟ್ ಆಡಿದ್ದೇನೆ. ಅನೇಕ ಟೀಂ ಇಂಡಿಯಾ ಆಟಗಾರರು ನನ್ನ ಬ್ಯಾಚ್‌ಮೇಟ್‌ಗಳು ಎಂದು ತಿಳಿಸಿದ್ದಾರೆ.

Virat Kohli 1

ನನ್ನ ಎರಡೂ ಅಸ್ಥಿರಜ್ಜುಗಳು ಮುರಿದಿದ್ದರಿಂದ ನಾನು ಕ್ರಿಕೆಟ್‌ ತ್ಯಜಿಸಬೇಕಾಯಿತು. ಅದು ಹಾಗಿರಲಿ ಎಂದು ಖಾಸಗಿ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ತೇಜಸ್ವಿ ಮಾತನಾಡಿದ್ದಾರೆ.

ತೇಜಶ್ವಿಯವರ ಹೇಳಿಕೆಯು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಕ್ರಿಕೆಟ್ ಅಭಿಮಾನಿಗಳಿಂದ ವಿಭಿನ್ನ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇದನ್ನೂ ಓದಿ: ವಿರಾಟ್ ಕೊಹ್ಲಿ ಭೇಟಿಯಾದ ತಮಿಳು ನಟಿ ರಾಧಿಕಾ ಶರತ್ ಕುಮಾರ್

ತೇಜಸ್ವಿ ಅವರು ತಮ್ಮ ವೃತ್ತಿಜೀವನದಲ್ಲಿ ಒಟ್ಟು 1 ಪ್ರಥಮ ದರ್ಜೆ, 2 ಲಿಸ್ಟ್ ಎ ಮತ್ತು 4 ಟಿ20 ಪಂದ್ಯಗಳನ್ನು ಆಡಿದ್ದಾರೆ. ಅವರು ದೇಶೀಯ ಸ್ಪೆಕ್ಟ್ರಮ್‌ನಲ್ಲಿ ಜಾರ್ಖಂಡ್ ಅನ್ನು ಪ್ರತಿನಿಧಿಸಿದ್ದರು. 2009 ನವೆಂಬರ್‌ನಲ್ಲಿ ವಿದರ್ಭ ವಿರುದ್ಧ ಪ್ರಥಮ ದರ್ಜೆಗೆ ಪಾದಾರ್ಪಣೆ ಮಾಡಿದ್ದರು.

Share This Article