Connect with us

Cinema

ಅನುಷ್ಕಾಳ ಈ ಒಂದು ಗುಣ ಕೊಹ್ಲಿಗೆ ಇಷ್ಟ ಆಗಲ್ವಂತೆ!

Published

on

ನವದೆಹಲಿ: ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಮತ್ತು ಬಾಲಿವುಡ್ ಬೆಡಗಿ ಅನುಷ್ಕಾ ಶರ್ಮಾ ಪ್ರಸ್ತುತ ಹಾಟ್ ಜೋಡಿ ಎಂದು ಕರೆಸಿಕೊಳ್ಳುತ್ತಿದ್ದು ಈ ಜೋಡಿ ತಮ್ಮ ಪ್ರೀತಿಯ ಕುರಿತು ಹಲವು ಬಾರಿ ಮಾತನಾಡಿದ್ದರು. ಆದರೆ ಈಗ ವಿರಾಟ್ ತಮ್ಮ ಗೆಳತಿಯ ಒಂದು ಗುಣ ಇಷ್ಟವಿಲ್ಲ ಎಂದು ಹೇಳುವುದರ ಮೂಲಕ ಹೆಚ್ಚು ಸುದ್ದಿಯಾಗಿದ್ದಾರೆ.

ದೀಪಾಳಿಯ ವಿಶೇಷ ಸಂಚಿಕೆಗಾಗಿ ಬಾಲಿವುಡ್‍ನ ಮಿಸ್ಟರ್ ಪರ್ಫೆಕ್ಟ್ ಅಮೀರ್ ಖಾನ್‍ರ ಜೊತೆ ನಡೆದ ಮಾತುಕತೆ ಕಾರ್ಯಕ್ರಮದಲ್ಲಿ ಕೇಳಿದ ಪ್ರಶ್ನೆಗೆ ಉತ್ತರಿಸುವ ಸಮಯದಲ್ಲಿ ಕೊಹ್ಲಿ ಅನುಷ್ಕಾ ಗುಣದ ಬಗ್ಗೆ ಮಾತನಾಡಿದ್ದಾರೆ.

ಕೆಲವು ಸುದ್ದಿ ಮಾಧ್ಯಮಗಳು ಅನುಷ್ಕಾ ಶರ್ಮಾರ ಕುರಿತು ಪ್ರಶ್ನಿಸಿದಾಗ ಅನುಷ್ಕಾ ಯಾವಾಗಲು ಪ್ರಾಮಾಣಿಕ ಮತ್ತು ಕಾಳಜಿ ವಹಿಸುತ್ತಾರೆ, ಆದರೆ ಪ್ರತಿ ಬಾರಿ ಭೇಟಿ ಮಾಡುವ ಸಂದರ್ಭದಲ್ಲೂ 5-7 ನಿಮಿಷ ತಡವಾಗಿ ಆಗಮಿಸುತ್ತಾರೆ ಈ ಗುಣ ತನಗೆ ಇಷ್ಟವಿಲ್ಲ ಎಂದರು. ನಮ್ಮಿಬ್ಬರ ನಡುವೆ ಉತ್ತಮ ಬಾಂಧವ್ಯ ಇದ್ದು, ನನ್ನೊಂದಿಗೆ ಪ್ರತಿ ಕ್ಷಣ ಇರುತ್ತಾರೆ. ನಮ್ಮಿಬ್ಬರ ನಡುವಿನ 3-4 ವರ್ಷದ ಭೇಟಿಯಲ್ಲಿ ಆಕೆ ನನ್ನನ್ನು ಉತ್ತಮ ವ್ಯಕ್ತಿಯಾಗಿ ರೂಪಿಸಿದ್ದಾರೆ ಎಂದು ಹೇಳಿದ್ದಾರೆ.

ಇದೇ ಸಂದರ್ಭದಲ್ಲಿ ಅಮೀರ್ ಖಾನ್‍ರ ಇಷ್ಟದ ಸಿನಿಮಾಗಳ ಕುರಿತು ತಿಳಿಸಿದ ಕೊಹ್ಲಿ 3 ಇಡಿಯಟ್ಸ್, ಪಿಕೆ, ಜೊ ಜೀತಾ ವೊಹಿ ಸಿಕಂದರ್ ಸಿನಿಮಾಗಳು ಇಷ್ಟವಾಗಿವೆ ಎಂದು ತಿಳಿಸಿದರು.

`

Click to comment

Leave a Reply

Your email address will not be published. Required fields are marked *

www.publictv.in