ಗುವಾಹಟಿ: ಕೆಲ ತಿಂಗಳ ಹಿಂದೆಯಷ್ಟೇ ಕಳಪೆ ಬ್ಯಾಟಿಂಗ್‌ನಿಂದ ಟೀಕೆಗಳಿಗೆ ಗುರಿಯಾಗಿದ್ದ ರನ್ ಮಿಷಿನ್ ವಿರಾಟ್ ಕೊಹ್ಲಿ (Virat Kohli) ಏಷ್ಯಾಕಪ್ (AisaCup 2022) ಮೂಲಕ ಫಾರ್ಮ್‌ಗೆ ಮರಳಿದ್ದು, ಒಂದಿಲ್ಲೊಂದು ದಾಖಲೆ ಬರೆಯುತ್ತಲೇ ಇದ್ದಾರೆ.
ಭಾನುವಾರ ದಕ್ಷಿಣ ಆಫ್ರಿಕಾ (South Africa) ವಿರುದ್ಧ ಗುವಾಹಟಿಯಲ್ಲಿ ನಡೆದ ಪಂದ್ಯದಲ್ಲಿ ಅರ್ಧಶತಕ ವಂಚಿತರಾದರೂ 49 ರನ್ ಸಿಡಿಸಿದ ಟೀಂ ಇಂಡಿಯಾ (Team India) ಆಟಗಾರ ವಿರಾಟ್ ಕೊಹ್ಲಿ T20 ಕ್ರಿಕೆಟ್‌ನಲ್ಲಿ (Cricket) 11 ಸಾವಿರ ರನ್‌ಗಳನ್ನು ಪೂರೈಸಿದ ಮೊದಲ ಭಾರತೀಯ ಆಟಗಾರನೆಂಬ ಸಾಧನೆ ಮಾಡಿದ್ದಾರೆ.
Advertisement
Records are made for #KingKohli to break them! ????
Virat Kohli now becomes the first Indian to reach 11K runs in T20 games!#ViratKohli #INDvSA #PunjabKings pic.twitter.com/BcmvvvgjQX
— Punjab Kings (@PunjabKingsIPL) October 2, 2022
Advertisement
ಈವರೆಗೆ 102 ಟೆಸ್ಟ್ (Test Cricket), 262 ಏಕದಿನ ಮತ್ತು 109 T20 ಪಂದ್ಯಗಳಲ್ಲಿ ಘರ್ಜಿಸಿರುವ ವಿರಾಟ್ 71 ಶತಕಗಳನ್ನ ಬಾರಿಸಿದ್ದಾರೆ. ಅದರಲ್ಲಿ 354 T20 ಪಂದ್ಯಗಳನ್ನಾಡಿದ್ದು, ಅತಿ ವೇಗವಾಗಿ 11 ಸಾವಿರ ರನ್‌ಗಳನ್ನು ಸಿಡಿಸಿದ್ದಾರೆ. ಭಾನುವಾರ ವೇಯ್ನ್ ಪಾರ್ನೆಲ್ ಬೌಲಿಂಗ್‌ನಲ್ಲಿ ಭರ್ಜರಿ ಸಿಕ್ಸರ್‌ನೊಂದಿಗೆ 11 ಸಾವಿರ ರನ್ ಪೂರೈಸಿದ ಮೊದಲ ಭಾರತೀಯನೆಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು.
Advertisement
Advertisement
ದಕ್ಷಿಣ ಆಫ್ರಿಕಾ ವಿರುದ್ಧ ನಡೆದ 2ನೇ ಟಿ20 ಪಂದ್ಯದಲ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದ ವಿರಾಟ್ ಕೊಹ್ಲಿ 28 ಎಸೆತಗಳಲ್ಲಿ 49 ರನ್ (1 ಸಿಕ್ಸರ್, 7 ಬೌಂಡರಿ) ಚಚ್ಚಿದರು. ಕೊನೆಯಲ್ಲಿ ಅರ್ಧ ಶತಕ ಗಳಿಸುವ ಅವಕಾಶವಿದ್ದರೂ ದಿನೇಶ್ ಕಾರ್ತಿಕ್ (Dinesh Karthik) ಕ್ರೀಸ್ ಬಿಟ್ಟುಕೊಟ್ಟರು.