ಮುಂಬೈ: ಟೀಂ ಇಂಡಿಯಾದ ನಾಯಕತ್ವ ರೋಹಿತ್ ಶರ್ಮಾಗೆ ಅವರಿಗೆ ಸಿಗಬಾರದು ಎಂಬ ಕಾರಣಕ್ಕೆ ವಿರಾಟ್ ಕೊಹ್ಲಿ ನಾಯಕತ್ವ ಪಟ್ಟದಿಂದ ಕೆಳಗಡೆ ಇಳಿದ್ರಾ ಎಂಬ ಪ್ರಶ್ನೆ ಈಗ ಎದ್ದಿದೆ.
Advertisement
ಈ ಬಾರಿಯ ಟಿ20 ವಿಶ್ವಕಪ್ ಬಳಿಕ ನಾಯಕತ್ವದಿಂದ ಕೆಳಗಿಳಿಯುದಾಗಿ ವಿರಾಟ್ ಕೊಹ್ಲಿ ಘೋಷಿಸಿದ್ದು, ಇದು ತಂಡದಲ್ಲಿರುವ ಯುವಕರಿಗೆ ಪ್ರಾಶಸ್ತ್ಯ ಸಿಗಲು ಮತ್ತು ರೋಹಿತ್ ಶರ್ಮಾರನ್ನು ಏಕದಿನ ತಂಡದ ಉಪನಾಯಕನ ಪಟ್ಟದಿಂದ ಕೆಳಗಡೆ ಇಳಿಸಲು ಮಾಡಿದ ತಂತ್ರ ಎಂಬ ಚರ್ಚೆ ಈಗ ಕ್ರಿಕೆಟ್ ವಲಯದಲ್ಲಿ ಹರಿದಾಡುತ್ತಿದೆ. ಇದನ್ನೂ ಓದಿ:ಟಿ20 ವಿಶ್ವಕಪ್ ಬಳಿಕ ಟಿ20 ನಾಯಕತ್ವ ತ್ಯಜಿಸುತ್ತೇನೆಂದ ವಿರಾಟ್ ಕೊಹ್ಲಿ
Advertisement
Advertisement
ಭಾರತ ಏಕದಿನ ತಂಡದ ನಾಯಕ ಹಾಗೂ ಉಪನಾಯಕರಾಗಿರುವ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾರ ನಡುವೆ ಎಲ್ಲವೂ ಸರಿಯಿಲ್ಲ ಭಿನ್ನಭಿಪ್ರಾಯವಿದೆ ಎಂಬ ಸುದ್ದಿ ಕ್ರಿಕೆಟ್ ಲೋಕದಲ್ಲಿ ಪದೇ, ಪದೇ ಕೇಳಿಸುತ್ತಿತ್ತು. ಇಬ್ಬರು ಭಾರತದ ದಿಗ್ಗಜ ಕ್ರಿಕೆಟಿಗರು. ಆದರೂ ಕೆಲ ವಿಷಯದಲ್ಲಿ ಇಬ್ಬರಿಗೂ ಹೊಂದಾಣಿಕೆಯ ಕೊರತೆ ಇದೆ ಎಂಬ ಸುದ್ದಿ ಕ್ರಿಕೆಟ್ ಅಂಗಳದಲ್ಲಿ ಹರಿದಾಡುತಿತ್ತು. ನಿನ್ನೆ ಟಿ20 ವಿಶ್ವಕಪ್ ಬಳಿಕ ನಾಯಕನ ಪಟ್ಟ ತ್ಯಜಿಸುವ ಕುರಿತು ಹೇಳಿರುವ ವಿರಾಟ್, ಮುಂದಿನ ನಾಯಕನಾಗಿ ರೋಹಿತ್ ಹೆಸರು ಸೂಚಿಸಿದ್ದಾರೆ ಎನ್ನಲಾಗಿದೆ. ಈ ಪ್ರಮುಖ ಅಂಶ ಇದೀಗ ಎಲ್ಲೆಡೆ ಚರ್ಚೆಗೆ ಗ್ರಾಸವಾಗಿದೆ. ಇದನ್ನೂ ಓದಿ:ಡೆಲ್ಲಿ ನಾಯಕನಾಗಿ ಪಂತ್ ಮುಂದುವರಿಕೆ
Advertisement
ಕೊಹ್ಲಿ ಕೋಚ್ ಹಾಗೂ ಭಾರತ ಕ್ರಿಕೆಟ್ ಸಮಿತಿಯೊಂದಿಗೆ ಚರ್ಚೆ ನಡೆಸಿ ಯುವ ಕ್ರಿಕೆಟಿಗರನ್ನು ತಂಡದಲ್ಲಿ ಬೆಳೆಸುವ ನಿಟ್ಟಿನಲ್ಲಿ, ಈಗಾಗಲೇ ತಂಡದಲ್ಲಿರುವ ಸಾಕಷ್ಟು ಯುವ ಕ್ರಿಕೆಟಿಗರಲ್ಲಿ ಒಬ್ಬರಿಗೆ ತಂಡದ ಉಪನಾಯಕನ ಪಟ್ಟ ಕಟ್ಟಿ ಮುಂದಿನ ನಾಯಕನನ್ನು ಬೆಳೆಸುವ ಇರಾದೆಯಲ್ಲಿದ್ದಾರೆ. ಈಗಾಗಲೇ ರೋಹಿತ್ ಶರ್ಮಾಗೆ 34 ವರ್ಷ. ಏಕದಿನ ತಂಡದ ಭವಿಷ್ಯದ ಹಿತ ದೃಷ್ಟಿಯಿಂದ ಉಪನಾಯಕನ ಪಟ್ಟಕ್ಕೆ ಕಡಿಮೆ ವಯಸ್ಸಿನ ಬೇರೆ ಆಟಗಾರನಿಗೆ ಅವಕಾಶ ನೀಡಬೇಕು ಎಂಬ ಮಹತ್ತರವಾದ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂದು ಬಿಸಿಸಿಐ ಮೂಲಗಳನ್ನು ಆಧಾರಿಸಿ ಮಾಧ್ಯಮವೊಂದು ವರದಿ ಮಾಡಿದೆ.
ಮುಂದಿನ ಏಕದಿನ ವಿಶ್ವಕಪ್ ವೇಳೆಗೆ ಕೊಹ್ಲಿ ಭಾರತ ತಂಡದ ನಾಯಕರಾಗಿರುವ ಬಗ್ಗೆ ಅವರಿಗೆ ಅನುಮಾನವಿದೆ. ಒಂದು ವೇಳೆ ನಾಯಕನ ಬದಲಾವಣೆ ಬಯಸಿದರೆ ಆ ಸ್ಥಾನಕ್ಕೆ ರೋಹಿತ್ ಶರ್ಮಾ ಉತ್ತಮ ಆಯ್ಕೆಯಾಗಲಿದ್ದಾರೆ. ಹೀಗಾಗಿ ಅವರನ್ನು ಟಿ20 ನಾಯಕನಾಗಿಸಿ, ಕೆಎಲ್.ರಾಹುಲ್ ರನ್ನು ಉಪನಾಯಕನ ಪಟ್ಟಕ್ಕೆ ಕೂರಿಸಿದರೆ ತಮ್ಮ ಸ್ಥಾನಕ್ಕೆ ಕುತ್ತು ಬರುವುದಿಲ್ಲ ಜೊತೆಗೆ ಇನ್ನೊಬ್ಬ ನಾಯಕನನ್ನು ಬೆಳೆಸಿದಂತಾಗುತ್ತದೆ ಎನ್ನುವುದು ಕೊಹ್ಲಿಯ ಆಲೋಚನೆ ಎನ್ನುವುದು ಈ ವರದಿಯ ತಿರುಳು.
ಈ ಸುದ್ದಿ ನಿಜವೋ ಸತ್ಯ ಎನ್ನುವುದು ತಿಳಿದು ಬಂದಿಲ್ಲ. ಮುಂದಿನ ದಿನಗಳಲ್ಲಿ ಸತ್ಯ ಹೊರ ಬರುವ ಸಾಧ್ಯತೆಯಿದೆ. ಈ ಹಿಂದೆ ವಿರಾಟ್ ಕೊಹ್ಲಿ ನಾಯಕ ಸ್ಥಾನದಿಂದ ಕೆಳಗೆ ಇಳಿಯುತ್ತಾರೆ ಎಂಬ ಸುದ್ದಿ ಪ್ರಕಟವಾದಗಲೂ ಬಿಸಿಸಿಐ ವರದಿಯನ್ನು ತಿರಸ್ಕರಿಸಿತ್ತು. ಆದರೆ ಗುರುವಾರ ಕೊಹ್ಲಿಯೇ ಎಲ್ಲ ಅಂತೆ ಕಂತೆ ಸುದ್ದಿಗಳಿಗೆ ತೆರೆ ಎಳೆದಿದ್ದರು.
ಟೀಂ ಇಂಡಿಯಾದ ಡ್ರೆಸ್ಸಿಂಗ್ ರೂಮ್ ವಾತಾವರಣ ಸರಿ ಇಲ್ಲ ಎಂಬ ಮಾತು ಈ ಹಿಂದಿನಿಂದಲೇ ಕೇಳಿ ಬರುತ್ತಿದೆ. ಇದಕ್ಕೆ ಪೂರಕ ಎಂಬಂತೆ ಕೆಲ ಬದಲಾವಣೆಗಳು ಆಗುತ್ತಿದ್ದು ಅಚ್ಚರಿಯ ಬೆಳವಣಿಗೆಯಲ್ಲಿ ಧೋನಿ ಟೀಂ ಇಂಡಿಯಾದ ಮೆಂಟರ್ ಆಗಿ ನೇಮಕವಾಗಿದ್ದಾರೆ. ಧೋನಿ ಬಗ್ಗೆ ಎಲ್ಲ ಆಟಗಾರರ ಬಗ್ಗೆ ಗೌರವವಿದೆ. ಆಟಗಾರರ ನಡುವೆ ಭಿನ್ನಾಭಿಪ್ರಾಯಗಳಿದ್ದರೂ ಧೋನಿ ಎಲ್ಲವನ್ನೂ ಸರಿ ಮಾಡಬಹುದು. ಈ ಕಾರಣಕ್ಕೆ ಬಿಸಿಸಿಐ ಧೋನಿಯನ್ನು ಮೆಂಟರ್ ಆಗಿ ನೇಮಕ ಮಾಡಿದೆ ಎಂಬ ವಿಶ್ಲೇಷಣೆ ಈಗ ಕೇಳಿ ಬಂದಿದೆ.