ನವದೆಹಲಿ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ತಮ್ಮ ಒಂದು ಇನ್‍ಸ್ಟಾಗ್ರಾಮ್ ಪೋಸ್ಟ್ ಗೆ 82,43,400 ರೂ. ಪಡೆಯುತ್ತಿದ್ದಾರೆ. ಈ ಮೂಲಕ ಭಾರತದ ಪರ ಅತ್ಯಧಿಕ ಮೊತ್ತ ಪಡೆಯುವ ಕ್ರೀಡಾಪಟು ಎನಿಸಿಕೊಂಡಿದ್ದಾರೆ.
ಹಾವರ್ ಎಚ್ ಕ್ಯೂ ಡಾಟ್ ಕಾಮ್ ಎಂಬ ಜಾಗತಿಕ ಸಂಸ್ಥೆ ಸಮೀಕ್ಷೆ ನಡೆಸಿ ಈ ಪಟ್ಟಿಯನ್ನ ಬಿಡುಗಡೆಗೊಳಿಸಿದ್ದು, ಫೇಸ್‍ಬುಕ್ ಮಾಲೀಕತ್ವದ ಇನ್‍ಸ್ಟಾಗ್ರಾಮ್ ಸಿರಿವಂತ ಆಟಗಾರರ ಪಟ್ಟಿಯನ್ನು ಹೊಂದಿದೆ. ಈ ಸಮೀಕ್ಷಾ ವರದಿಯಲ್ಲಿ ವಿಶ್ವದ ವಿವಿಧ ಕ್ರೀಡಾಪಟುಗಳ ಹೆಸರು ಹೊಂದಿದ್ದು, ಕೊಹ್ಲಿ 17ನೇ ಸ್ಥಾನ ಪಡೆದಿದ್ದಾರೆ.
Advertisement
Advertisement
ಪಟ್ಟಿಯಲ್ಲಿರುವ ಕ್ರೀಡಾಪಟುಗಳಲ್ಲಿ ಪೋರ್ಚುಗಲ್ ಫುಟ್ಬಾಲ್ ತಂಡದ ನಾಯಕ ಕ್ರಿಸ್ಟಿಯನೊ ರೊನಾಲ್ಡೊ ಒಂದು ಪೋಸ್ಟ್ ಗೆ 5 ಕೋಟಿ ರೂ. ಪಡೆಯುತ್ತಾರೆ. ಇವರನ್ನು 13.6 ಕೋಟಿ ಮಂದಿ ಹಿಂಬಾಲಿಸುತ್ತಿದ್ದಾರೆ. ಬಳಿಕ ಬ್ರೆಜಿಲ್ ಸ್ಟಾರ್ ಆಟಗಾರ ನೇಮರ್ ಹಾಗೂ ಅರ್ಜೆಂಟೆನಾ ತಂಡದ ಮೆಸ್ಸಿ ಕ್ರಮವಾಗಿ 4,12,23,000 ಕೋಟಿ ರೂ. ಹಾಗೂ 3,43,52,500 ಕೋಟಿ ರೂ. ಗಳನ್ನು ಪ್ರತಿ ಪೋಸ್ಟ್ ಒಂದಕ್ಕೆ ಪಡೆಯುತ್ತಾರೆ.
Advertisement
ಹಣ ಹೇಗೆ ಲಭಿಸುತ್ತದೆ: ಯಾವುದೇ ಸ್ಟಾರ್ ಆಟಗಾರ ಅತೀ ಹೆಚ್ಚು ಹಿಂಬಾಲಕರನ್ನು ಹೊಂದಿದ್ದರೆ ಅವರಿಗೆ ವಿವಿಧ ಕಂಪೆನಿಗಳು ತಮ್ಮ ಸಂಸ್ಥೆಯ ಪರ ರಾಯಭಾರಿಯಾಗಿ ನೇಮಿಸಿಕೊಳ್ಳುತ್ತದೆ. ಇದರಂತೆ ಆ ಬ್ರಾಂಡ್ ಗೆ ಸಂಬಂಧಿಸಿದ ವಸ್ತುಗಳ ಪ್ರಚಾರ ಮಾಡಲು ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಮಾಡಲಾಗುತ್ತದೆ. ಈ ವೇಳೆ ಸಂಸ್ಥೆಯ ಉತ್ಪನ್ನಗಳು ಬಹುಬೇಗ ಹೆಚ್ಚಿನ ಮಂದಿಯನ್ನು ತಲುಪುತ್ತದೆ. ಸದ್ಯ ಕೊಹ್ಲಿ ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ 2.32 ಕೋಟಿ ಮಂದಿ ಹಿಂಬಾಲಕರನ್ನು ಹೊಂದಿದ್ದು, ಒಂದು ಪೋಸ್ಟ್ ಗೆ 82 ಲಕ್ಷ ರೂ. ಪಡೆಯುತ್ತಾರೆ.
Advertisement
https://www.instagram.com/p/Bg-9XrZA54d/?hl=en&taken-by=virat.kohli
ಸಂಭಾವನೆ ನಿರ್ಧಾರ ಹೇಗೆ?
ಪ್ರತಿಯೊಬ್ಬ ಸ್ಟಾರ್ ಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಅಭಿಮಾನಿಗಳು ಹಿಂಬಾಲಿಸುತ್ತಾರೆ. ಇದರಂತೆ ಸ್ಟಾರ್ ಆಟಗಾರರು ಎಷ್ಟು ಹಿಂಬಾಲಕರನ್ನು ಹೊಂದಿದ್ದಾರೆ ಹಾಗೂ ಅವರು ಎಷ್ಟು ದಿನಕ್ಕೊಮ್ಮೆ ಪೋಸ್ಟ್ ಮಾಡುತ್ತಾರೆ ಎನ್ನುವುದನ್ನು ಸಂಭಾವನೆ ನಿರ್ಧಾರಿಸುವ ವೇಳೆ ಪರಿಗಣಿಸಲಾಗುತ್ತದೆ. ಅಷ್ಟೇ ಅಲ್ಲದೇ ಸ್ಟಾರ್ ಗಳು ಪೋಸ್ಟ್ ಮಾಡಿದ ಬಳಿಕ ಈ ಪೋಸ್ಟ್ ಎಷ್ಟು ಲೈಕ್, ಕಾಮೆಂಟ್ ಹಾಗೂ ಸ್ಟಾರ್ ಗಳಿಗೆ ಜನರನ್ನು ಆಕರ್ಷಿಸುವ ಸಾಮರ್ಥ್ಯ ಎಷ್ಟಿದೆ ಎಂಬುವುದನ್ನು ಸಹ ಪರಿಗಣಿಸಲಾಗುತ್ತದೆ.
ಸದ್ಯ ಸ್ಟಾರ್ ಆಟಗಾರರನ್ನು ವಿವಿಧ ಸಂಸ್ಥೆಗಳು ತಮ್ಮ ಬ್ರಾಂಡ್ ನ ಪ್ರಚಾರ ರಾಯಭಾರಿಗಳಾಗಿ ಆಯ್ಕೆ ಮಾಡಿಕೊಳ್ಳುವ ಮೂಲಕ ಸುಲಭವಾಗಿ ಜನರನ್ನು ತಲುಪುತ್ತಾರೆ. ಜಾಗತಿಕ ಮಟ್ಟದಲ್ಲಿ ಫುಟ್ಬಾಲ್ ಆಟಗಾರರು ಹೆಚ್ಚು ಪ್ರಾಬಲ್ಯ ಹೊಂದಿದ್ದು, ಹೆಚ್ಚಿನ ಅಭಿಮಾನಿಗಳನ್ನು ತಮ್ಮ ಸಾಮಾಜಿಕ ತಾಲತಾಣದಲ್ಲಿ ಹಿಂಬಾಲಕರನ್ನಾಗಿ ಹೊಂದಿದ್ದಾರೆ.
2012 ರಲ್ಲಿ ಫೇಸ್‍ಬುಕ್ ಸಂಸ್ಥೆ ಇನ್‍ಸ್ಟಾಗ್ರಾಮ್ ಅನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿತ್ತು, ಸದ್ಯ ಇನ್‍ಸ್ಟಾಗ್ರಾಮ್ 100 ಕೋಟಿ ಬಳಕೆದಾರರನ್ನು ಹೊಂದಿದೆ. ಫೇಸ್‍ಬುಕ್ ಇನ್‍ಸ್ಟಾಗ್ರಾಮ್ ಸಂಸ್ಥೆಯ ಒಡೆತನ ಪಡೆದ ಬಳಿಕ ನಿರಂತರವಾಗಿ ಇನ್‍ಸ್ಟಾಗ್ರಾಮ್ ಬಳಕೆದಾರರು ಹೆಚ್ಚಾಗಿದ್ದಾರೆ.
https://www.instagram.com/p/BlDqNtuA6Jq/?hl=en&taken-by=virat.kohli