ಆಸ್ಟ್ರೇಲಿಯಾಗೆ ಹೊರಟ ಟೀಂ ಇಂಡಿಯಾ ಮಾಡುತ್ತಾ ಕಮಾಲ್?

Public TV
2 Min Read
team india

ಮುಂಬೈ: ಮುಂಬರುವ ಆಸೀಸ್ ಪ್ರವಾಸದ ಸಿದ್ಧತೆಯಲ್ಲಿದ್ದ ಕೊಹ್ಲಿ ನಾಯಕತ್ವದ ಟೀಂ ಇಂಡಿಯಾ ಆಟಗಾರರು ಇಂದು ಆಸ್ಟ್ರೇಲಿಯಾದತ್ತ ಪ್ರಯಾಣ ಬೆಳೆಸಿದರು. ಪ್ರಯಾಣದ ಆರಂಭಕ್ಕೂ ಮುನ್ನ ಹಲವು ಆಟಗಾರರು ಸಾಮಾಜಿಕ ಜಾಲತಾಣದಲ್ಲಿ ಫೋಟೋ ಪೋಸ್ಟ್ ಮಾಡಿದ್ದಾರೆ.

ಆಸೀಸ್ ಪ್ರವಾಸದಲ್ಲಿ ಟೀಂ ಇಂಡಿಯಾ ತಲಾ ಮೂರು ಟಿ20, ಏಕದಿನ ಹಾಗೂ 4 ಟೆಸ್ಟ್ ಪಂದ್ಯಗಳನ್ನು ಆಡಲಿದೆ. ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದ ಟೀಂ ಇಂಡಿಯಾ ಮುಖ್ಯ ಕೋಚ್ ರವಿಶಾಸ್ತ್ರಿ, ಮುಂದಿನ ವಿಶ್ವಕಪ್ ಟೂರ್ನಿಗೆ ಕೇವಲ 13 ಪಂದ್ಯಗಳು ಮಾತ್ರ ಉಳಿದಿದೆ. ಆದ್ದರಿಂದ ಏಕದಿನ ತಂಡದಲ್ಲಿ ಹೆಚ್ಚಿನ ಬದಲಾವಣೆ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದರು.

ಆಸೀಸ್ ನೆಲದಲ್ಲಿ ಇದುವರೆಗೂ ಒಮ್ಮೆಯೂ ಟೆಸ್ಟ್ ಸರಣಿಯಲ್ಲಿ ಗೆಲುವು ಪಡೆಯದ ಟೀಂ ಇಂಡಿಯಾ ಈ ಬಾರಿ ಆತ್ಮವಿಶ್ವಾಸದಿಂದಿದೆ. ಆಸೀಸ್ ಸರಣಿಗೂ ಮುನ್ನ ಟೀಂ ಇಂಡಿಯಾ ತವರು ನೆಲದಲ್ಲಿ ವೆಸ್ಟ್ ಇಂಡೀಸ್ ತಂಡವನ್ನು ಎದುರಿಸಿತ್ತು. ಅಲ್ಲದೇ ಟೆಸ್ಟ್ ಸರಣಿಯನ್ನು 2-0, ಏಕದಿನ ಸರಣಿಯನ್ನು 3-1 ಹಾಗೂ ಟಿ20 ಸರಣಿಯನ್ನು 3-0 ಅಂತದಲ್ಲಿ ಗೆದ್ದು ಸಂಭ್ರಮಿಸಿತ್ತು. ಆದರೆ ಇದಕ್ಕೂ ಮುನ್ನ ದಕ್ಷಿಣ ಆಫ್ರಿಕಾ ಹಾಗೂ ಇಂಗ್ಲೆಂಡ್ ಪ್ರವಾಸ ಕೈಗೊಂಡಿದ್ದ ಟೀಂ ಇಂಡಿಯಾ ಟೆಸ್ಟ್ ಸರಣಿಯಲ್ಲಿ ಕ್ರಮವಾಗಿ 2-1, 4-1 ಅಂತರದಲ್ಲಿ ಸೋಲುಂಡಿತ್ತು.

ಆಸೀಸ್ ಸರಣಿಯಲ್ಲಿ ಮೊದಲು ಟಿ20 ಪಂದ್ಯಗಳು ಆರಂಭವಾಗಲಿದ್ದು, ನ.21ರಂದು ಮೊದಲ ಪಂದ್ಯ ನಡೆಯಲಿದೆ. ಬಳಿಕ ಟೆಸ್ಟ್ ಹಾಗೂ ಏಕದಿನ ಪಂದ್ಯಗಳು ನಿಗದಿಯಾಗಿದೆ. ಆಸೀಸ್ ತಂಡದ ಪ್ರಮುಖ ಆಟಗಾರರಾದ ಡೇವಿಡ್ ವಾರ್ನರ್ ಹಾಗೂ ಸ್ಟೀವ್ ಸ್ಮಿತ್ ತಂಡದಿಂದ ಹೊರಗುಳಿದಿರುವುದು ಟೀಂ ಇಂಡಿಯಾಗೆ ಆಸೀಸ್ ನೆಲದಲ್ಲಿ ಟೆಸ್ಟ್ ಸರಣಿ ಜಯಗಳಿಸುವ ಉತ್ತಮ ಅವಕಾಶ ಎಂದು ಹಲವು ಕ್ರಿಕೆಟ್ ವಿಶ್ಲೇಷಕರು ಹಾಗೂ ಹಿರಿಯ ಆಟಗಾರರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

 

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

Share This Article
Leave a Comment

Leave a Reply

Your email address will not be published. Required fields are marked *