– ಟೆಸ್ಟ್‌ನಲ್ಲಿ 30ನೇ ಶತಕ ಸಿಡಿಸಿದ ಕಿಂಗ್
ಪರ್ತ್: ಇಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್‌ನ 3ನೇ ದಿನದಾಟದಲ್ಲಿ ಸ್ಟಾರ್ ಇಂಡಿಯಾ ಬ್ಯಾಟರ್ ವಿರಾಟ್ ಕೊಹ್ಲಿ ತಮ್ಮ 30 ನೇ ಟೆಸ್ಟ್ ಶತಕ ಸಿಡಿಸಿ ದಾಖಲೆ ಬರೆದಿದ್ದಾರೆ.
ಸತತ 16 ತಿಂಗಳ ಬಳಿಕ ಕೊಹ್ಲಿ ಶತಕ ಸಿಡಿಸಿದ್ದಾರೆ. ಸುದೀರ್ಘ ಸ್ವರೂಪದಲ್ಲಿ ಹೆಚ್ಚು ಶತಕಗಳನ್ನು ಗಳಿಸಿದ ಆಟಗಾರರ ಪಟ್ಟಿಯಲ್ಲಿ ಆಸ್ಟ್ರೇಲಿಯಾದ ಸರ್ ಡೊನಾಲ್ಡ್ ಬ್ರಾಡ್ಮನ್ ಅವರನ್ನು ಹಿಂದಿಕ್ಕಿದ್ದಾರೆ. ಪರ್ತ್ ಟೆಸ್ಟ್‌ಗೆ ಮೊದಲು 29 ಶತಕಗಳೊಂದಿಗೆ ಕೊಹ್ಲಿ, ಬ್ರಾಡ್‌ಮನ್ ಜೊತೆ ಸಮಬಲ ಹೊಂದಿದ್ದರು.
ಕಿಂಗ್ ಕೊಹ್ಲಿ 143 ಎಸೆತಗಳಿಗೆ ಶತಕ ಸಿಡಿಸಿದರು. ಭಾರತ ತನ್ನ ಎರಡನೇ ಇನ್ನಿಂಗ್ಸ್ ಅನ್ನು 487/6 ಕ್ಕೆ ಡಿಕ್ಲೇರ್ ಘೋಷಿಸಿದೆ. ಆಸ್ಟ್ರೇಲಿಯಾಕ್ಕೆ ಗೆಲ್ಲಲು 534 ರನ್‌ಗಳ ಗುರಿ ನೀಡಿದೆ.