ಅಂತಿಮ ಎಸೆತದಲ್ಲಿ ಬುಮ್ರಾ ಸಿಕ್ಸರ್ – ಕೊಹ್ಲಿ ರಿಯಾಕ್ಷನ್ ಹೀಗಿತ್ತು – ವಿಡಿಯೋ

Public TV
1 Min Read
kohli 2 1

ಮೊಹಾಲಿ: ಆಸ್ಟ್ರೇಲಿಯಾ ವಿರುದ್ಧ 4ನೇ ಏಕದಿನ ಕ್ರಿಕೆಟ್ ಪಂದ್ಯದ ಟೀಂ ಇಂಡಿಯಾ ಇನ್ನಿಂಗ್ಸ್ ನ ಅಂತಿಮ ಎಸೆತವನ್ನು ಜಸ್ಪ್ರೀತ್ ಬುಮ್ರಾ ಸಿಕ್ಸರ್ ಗೆ ಅಟ್ಟಿದ್ದು, ಆ ಕ್ಷಣದಲ್ಲಿ ನಾಯಕ ಕೊಹ್ಲಿ ಪೆವಿಲಿಯನಲ್ಲೇ ಸಂತಸ ವ್ಯಕ್ತಪಡಿಸಿದ್ದಾರೆ.

ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಟೀಂ ಇಂಡಿಯಾ ಧವನ್ ಭರ್ಜರಿ ಬ್ಯಾಟಿಂಗ್ ನೆರವಿನಿಂದ 358 ರನ್‍ಗಳ ಬೃಹತ್ ಮೊತ್ತ ಗಳಿಸಿದೆ. ಪಂದ್ಯದಲ್ಲಿ ನಾಯಕ ಕೊಹ್ಲಿ ಬಹುಬೇಗ ಔಟಾದರೂ ತಂಡದ ಬ್ಯಾಟಿಂಗ್ ಪ್ರದರ್ಶನಕ್ಕೆ ಫುಲ್ ಖುಷಿಯಾಗಿದ್ದಾರೆ. ಇತ್ತ ತಂಡದ ಪರ ಇನ್ನಿಂಗ್ಸ್ ಅಂತಿಮ ಎದುರಿಸಿದ ಬುಮ್ರಾ ಭರ್ಜರಿ ಸಿಕ್ಸರ್ ಸಿಡಿಸಿ ಅಚ್ಚರಿ ಮೂಡಿಸಿದರು. ಬುಮ್ರಾ ಸಿಕ್ಸ್ ಗೆ ಕೊಹ್ಲಿ ಅವರ ಪ್ರತಿಕ್ರಿಯೆ ಕಂಡ ಹಲವು ಅಭಿಮಾನಿಗಳು ಅವರನ್ನು ತಮ್ಮದೇ ಅಭಿಪ್ರಾಯ ವ್ಯಕ್ತಪಡಿಸಿ ಕಾಲೆಳೆದಿದ್ದರೆ, ಬುಮ್ರಾರನ್ನ ಮೆಚ್ಚಿಕೊಂಡಿದ್ದಾರೆ.

ಅಂದಹಾಗೇ ಬುಮ್ರಾ ಭಾರತ ಪರ ಸಿಡಿಸಿದ ಮೊದಲ ಸಿಕ್ಸರ್ ಇದಾಗಿದ್ದು, ಲಿಸ್ಟ್ ಎ ಕ್ರಿಕೆಟ್ ನಲ್ಲಿ ಪರಿಗಣಿಸಿದರೆ 4ನೇ ಸಿಕ್ಸರ್ ಆಗಿದೆ. ಉಳಿದಂತೆ ಟಿ20 ಮಾದರಿಯಲ್ಲಿ 3 ಸಿಕ್ಸರ್ ಸಿಡಿಸಿದ್ದಾರೆ. ಈ ಹಿಂದೆ ಟೀಂ ಇಂಡಿಯಾ ಪರ 9 ವರ್ಷಗಳ ಆಸೀಸ್ ವಿರುದ್ಧ ಆಡಿದ್ದ ಪಂದ್ಯದಲ್ಲೇ 11ನೇ ಬ್ಯಾಟ್ಸ್ ಮನ್ ವೆಂಕಟೇಶ್ ಪ್ರಸಾದ್ ಇನ್ನಿಂಗ್ಸ್ ಅಂತಿಮ ಎಸೆತದಲ್ಲಿ ಸಿಕ್ಸರ್ ಸಿಡಿಸಿದ್ದರು.

ಈ ಹಿಂದೆ ಆಸ್ಟ್ರೇಲಿಯಾ ನೀಡಿದ್ದ ಸವಾಲಿನ ಮೊತ್ತವನ್ನು ಭಾರತದ ನೆಲದಲ್ಲೇ ಟೀಂ ಇಂಟಿಯಾ ಚೇಸ್ ಮಾಡಿತ್ತು. 2013ರ ಜೈಪುರ ಪಂದ್ಯದಲ್ಲಿ ಟೀಂ ಇಂಡಿಯಾ 1 ವಿಕೆಟ್ ಕಳೆದುಕೊಂಡು 362 ರನ್ ಗಳಿಸಿದ್ದರೆ, 2013 ರಲ್ಲಿ ನಾಗ್ಪುರದಲ್ಲಿ ನಡೆದ ಪಂದ್ಯದಲ್ಲಿ 4 ವಿಕೆಟ್ ಕಳೆದುಕೊಂಡು 351 ರನ್ ಹೊಡೆದು ಭಾರತ ಜಯಶಾಲಿಯಾಗಿತ್ತು. ಇಂದು ಆಸೀಸ್ 359 ರನ್ ಗುರಿ ಪಡೆದಿದೆ.

https://twitter.com/ashishkrpoddar/status/1104711609421688833

https://twitter.com/Imanantht/status/1104711121720827905

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *