Connect with us

31 ರನ್‍ಗಳಿಸಿದ್ರೆ ಸೆಹ್ವಾಗ್ ದಾಖಲೆ ಮುರಿಯಲಿದ್ದಾರೆ ಕೊಹ್ಲಿ

31 ರನ್‍ಗಳಿಸಿದ್ರೆ ಸೆಹ್ವಾಗ್ ದಾಖಲೆ ಮುರಿಯಲಿದ್ದಾರೆ ಕೊಹ್ಲಿ

ಹೈದರಾಬಾದ್: ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಇನ್ನು 31 ರನ್ ಗಳಿಸಿದರೆ ವಿರೇಂದ್ರ ಸೆಹ್ವಾಗ್ ಹೆಸರಿನಲ್ಲಿದ್ದ ದಾಖಲೆಯನ್ನು ಮುರಿಯಲಿದ್ದಾರೆ.

ಇದೂವರೆಗೆ ವೀರೇಂದ್ರ ಸೆಹ್ವಾಗ್ 2004-05ರ ಅವಧಿಯಲ್ಲಿ 9 ಪಂದ್ಯಗಳಿಂದ 1105 ರನ್‍ಗಳಿಸಿದ್ದರು. ಈಗ ಕೊಹ್ಲಿ ಅಷ್ಟೇ ಪಂದ್ಯಗಳಿಂದ 1075 ರನ್‍ಗಳಿಸಿದ್ದಾರೆ.

ಸೆಹ್ವಾಗ್ 4 ಶತಕ, ಮೂರು ಅರ್ಧ ಶತಕ ಹೊಡೆಯುವ ಮೂಲಕ ಈ ಸಾಧನೆ ಮಾಡಿದರೆ ಕೊಹ್ಲಿ 4 ಶತಕ 2 ಅರ್ಧಶತಕ ಹೊಡೆದಿದ್ದಾರೆ. 2016ರಲ್ಲಿ ಕೊಹ್ಲಿ ನ್ಯೂಜಿಲೆಂಡ್ ವಿರುದ್ಧ 3 ಪಂದ್ಯಗಳಿಂದ 309 ರನ್ ಬಾರಿಸಿದ್ದರೆ, ಇಂಗ್ಲೆಂಡ್ ವಿರುದ್ಧ 5 ಪಂದ್ಯಗಳಿಂದ 655 ರನ್ ಹೊಡೆದಿದ್ದರು.

ಈಗ ಬಾಂಗ್ಲಾ ವಿರುದ್ಧ ನಡೆಯುತ್ತಿರುವ ಮೊದಲ ಟೆಸ್ಟ್ ನಲ್ಲಿ ಅಜೇಯ 111 ರನ್(141 ಎಸೆತ, 12ಬೌಂಡರಿ) ಗಳಿಸಿದ್ದಾರೆ.

ಉತ್ತಮ ಸ್ಥಿತಿಯಲ್ಲಿ ಭಾರತ:
ಟಾಸ್ ಗೆದ್ದು ಬ್ಯಾಟಿಂಗ್ ಆರಂಭಿಸಿದ ಆರಂಭದಲ್ಲೇ ಕೆಎಲ್ ರಾಹುಲ್ ವಿಕೆಟ್ ಕಳೆದುಕೊಂಡರೂ ಮೊದಲ ದಿನದ ಅಂತ್ಯಕ್ಕೆ 90 ಓವರ್‍ಗಳಲ್ಲಿ ಮೂರು ವಿಕೆಟ್ ನಷ್ಟಕ್ಕೆ 356 ರನ್‍ಗಳಿಸಿದೆ.

ಮುರಳಿ ವಿಜಯ್ ಮತ್ತು ಚೇತೇಶ್ವರ ಪೂಜಾರ ಎರಡನೇ ವಿಕೆಟಿಗೆ 178 ರನ್‍ಗಳ ಜೊತೆಯಾಟವಾಡಿದರು. ಪೂಜಾರ 83 ರನ್( 177 ಎಸೆತ, 9 ಬೌಂಡರಿ) ಬಾರಿಸಿದರೆ ಮುರಳಿ ವಿಜಯ್ 108 ರನ್(160 ಎಸೆತ 12 ಬೌಂಡರಿ 1 ಸಿಕ್ಸರ್) ಹೊಡೆದು ಔಟಾದರು.

130 ಎಸೆತದಲ್ಲಿ 16ನೇ ಶತಕ ಹೊಡೆದ ಕೊಹಿಗ್ಲೆ ರಹಾನೆ 45 ರನ್( 60 ಎಸೆತ, 7 ಬೌಂಡರಿ) ಹೊಡೆದು ಸಾಥ್ ನೀಡಿದ್ದಾರೆ.

 

Advertisement
Advertisement