ನವದೆಹಲಿ: ಟೀಂ ಇಂಡಿಯಾ ನಾಯಕರ ವಿರಾಟ್ ಕೊಹ್ಲಿ ಮಾನವನಲ್ಲ, ಮಷಿನ್ ಎಂದು ವೆಸ್ಟ್ ಇಂಡೀಸ್ ಮಾಜಿ ಆಟಗಾರ ಬ್ರಿಯಾನ್ ಲಾರಾ ಅವರು ಪ್ರಶಂಸಿದ್ದಾರೆ.
ವಿರಾಟ್ ಕೊಹ್ಲಿ ಅವರು ಪಂದ್ಯದ ದಿಕ್ಕನ್ನೂ ಬದಲಿಸಬಲ್ಲ ಆಟಗಾರ. ಅವರು ಭಾರತ ತಂಡಕ್ಕೆ ವರದಾನವಾಗಲಿದ್ದಾರೆ. ಭಾರತ ತಂಡ ವಿಶ್ವಕಪ್ ಗೆಲ್ಲುವಲ್ಲಿ ಕೊಹ್ಲಿ ಪ್ರಮುಖ ಪಾತ್ರವಹಿಸಲಿದ್ದಾರೆ ಎಂದು ಹೇಳಿದ್ದಾರೆ.
Advertisement
ಕೊಹ್ಲಿ ಭಾರತ ತಂಡದ ರನ್ ಮಷಿನ್. ಅವರು ಕ್ರಿಕೆಟ್ ಆಟದ ರೀತಿಯನ್ನೇ ಬದಲಾವಣೆ ಮಾಡಿದ್ದಾರೆ ಮತ್ತು ಹೊಸ ಅಯಾಮವನ್ನು ಸೃಷ್ಟಿಮಾಡಿದ್ದಾರೆ. ಇದು ಪ್ರಸ್ತುತ ಆಟಗಾರರಿಗೂ ಮತ್ತು ಭವಿಷ್ಯದ ಆಟಗಾರರಿಗೂ ಉತ್ತಮವಾದ ಪಾಠ. 80 ಮತ್ತು 90 ದಶಕ ನಾವು ಆಡಿದ ಕ್ರಿಕೆಟ್‍ಗಿಂತ ವಿಭಿನ್ನ ಕ್ರಿಕೆಟ್ ಆಟವನ್ನು ಅವರು ಪರಿಚಯ ಮಾಡಿದ್ದಾರೆ ಎಂದು ಹೊಗಳಿದ್ದಾರೆ.
Advertisement
Advertisement
ಆಟದಲ್ಲಿ ಫಿಟ್ನೆಸ್ ತುಂಬ ಮುಖ್ಯವಾದದ್ದು. ಆದರೆ ಈಗ ಪ್ರಸ್ತುತ ಕಾಲದಲ್ಲಿ ಆಟದಲ್ಲಿ ಅದನ್ನು ಕಾಪಡಿಕೊಳ್ಳಲು ಆಗುತ್ತಿಲ್ಲ. ಏಕದಿನ ಪಂದ್ಯಗಳಲ್ಲೂ 11,000 ರನ್ ಹೊಡೆದಿರುವ ಕೊಹ್ಲಿ ಇಷ್ಟು ವರ್ಷದಲ್ಲಿ ಒಂದು ಬಾರಿಯೂ ಅವರು ತಮ್ಮ ದೈಹಿಕ ಸಾಮರ್ಥ್ಯ ವನ್ನು ಕಳೆದುಕೊಂಡಿಲ್ಲ. ಈ ಕಾರಣಕ್ಕೆ ಅವರನ್ನು ರನ್ ಮಷಿನ್ ಎಂದು ಕರೆದಿದ್ದೇನೆ ಎಂದು ಹೇಳಿದರು.
Advertisement
ವಿರಾಟ್ ಕೊಹ್ಲಿ ಆಡಿದ ಪ್ರತಿ ಪಂದ್ಯದಲ್ಲೂ ಬಹುತೇಕ ರನ್ ಹೊಡೆಯುತ್ತಾರೆ. ನನಗೆ ಪ್ರಕಾರ ಸಚಿನ್ ತೆಂಡೂಲ್ಕರ್ ಅವರು ಒಬ್ಬ ಶ್ರೇಷ್ಠವಾದ ಆಟಗಾರ ಅವರು ಕೂಡ ಉತ್ತಮವಾಗಿ ಆಡಿದ್ದಾರೆ ಆದರೆ ನಾನು ಅವರನ್ನು ಮತ್ತು ಕೊಹ್ಲಿಯನ್ನು ಹೋಲಿಕೆ ಮಾಡಲು ಇಷ್ಟವಿಲ್ಲ. ಇಬ್ಬರು ಉತ್ತನ ಆಟಗಾರರು ಅವರ ಅವರ ಕಾಲದಲ್ಲಿ ಉತ್ತಮ ಪರಂಪರೆಯ ಆಟವಾನ್ನು ಆಡಿದ್ದಾರೆ ಎಂದು ಹೇಳಿದ್ದಾರೆ.
ಕೊಹ್ಲಿ ತನ್ನ ವೃತ್ತಿ ಜೀವನದ ಮೂರನೇ ವಿಶ್ವಕಪ್ ಆಡುತ್ತಿದ್ದು ಪ್ರಥಮ ಬಾರಿಗೆ ನಾಯಕನಾಗಿ ಭಾರತ ತಂಡವನ್ನು ಮುನ್ನಡೆಸುತ್ತಿದ್ದಾರೆ. ಭಾರತದ ಎಲ್ಲಾ ಆಟಗಾರರು ಉತ್ತಮ ಲಯದಲ್ಲಿದ್ದು 2019ರ ವಿಶ್ವಕಪ್ ಗೆಲ್ಲಲು ಇದು ಒಳ್ಳೆಯ ಅವಕಾಶ ಎಂದು ಬ್ರಿಯಾನ್ ಲಾರಾ ಅವರು ಹೇಳಿದ್ದಾರೆ.