ಬೆಂಗಳೂರು: ಟೀಂ ಇಂಡಿಯಾದ (Team India) ಮಾಜಿ ನಾಯಕ ವಿರಾಟ್ ಕೊಹ್ಲಿ (Virat Kohli) ಏಕದಿನ ಕ್ರಿಕೆಟ್‌ನಲ್ಲಿ 94 ರನ್ ಸಿಡಿಸಿದರೆ ವೇಗವಾಗಿ 14 ಸಾವಿರ ರನ್ ಗಡಿ ದಾಟಿದ ಮೊದಲ ಆಟಗಾರನೆಂಬ ಹೆಗ್ಗಳಿಕೆಗೆ ಪಾತ್ರವಾಗಲಿದ್ದಾರೆ.
ಸದ್ಯ 295 ಪಂದ್ಯವಾಡಿರುವ ಕೊಹ್ಲಿ 283 ಇನ್ನಿಂಗ್ಸ್‌ಗಳಿಂದ ಒಟ್ಟು 13,906 ರನ್ ಹೊಡೆದಿದ್ದಾರೆ. ಇದನ್ನೂ ಓದಿ: ಭಾರತದ ವಿರುದ್ಧ ಟಿ20 ಸರಣಿಯಲ್ಲಿ ಆರ್‌ಸಿಬಿ ಟಾಪ್ ಪ್ಲೇಯರ್‌ಗಳು ಫ್ಲಾಪ್ – ಫ್ರಾಂಚೈಸಿಗೆ ತಲೆನೋವು
Advertisement
Advertisement
ಏಕದಿನ ಕ್ರಿಕೆಟ್‌ನಲ್ಲಿ 14 ಸಾವಿರ ರನ್‌ಗಳ ಗಡಿಯನ್ನು ಇಬ್ಬರು ಮಾತ್ರ ದಾಟಿದ್ದಾರೆ. ಸಚಿನ್ ತೆಂಡೂಲ್ಕರ್ (Sachin Tendulkar) 350 ಇನ್ನಿಂಗ್ಸ್ ತೆಗೆದುಕೊಂಡರೆ ಶ್ರೀಲಂಕಾದ ಕುಮಾರ ಸಂಗಕ್ಕಾರ (Kumara Sangakkara) 378 ಇನ್ನಿಂಗ್ಸ್ ತೆಗೆದುಕೊಂಡು ಈ ಸಾಧನೆ ಮಾಡಿದ್ದಾರೆ.
Advertisement
ಇಂಗ್ಲೆಂಡ್ ವಿರುದ್ಧ ಸರಣಿಯಲ್ಲಿ ಕೊಹ್ಲಿ ಈ ವಿಶ್ವದಾಖಲೆ (World Record) ನಿರ್ಮಿಸುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ. 3 ಪಂದ್ಯಗಳ ಏಕದಿನ ಸರಣಿ ಫೆ.6 ರಿಂದ ಆರಂಭವಾಗಲಿದ್ದು ನಾಗಪುರದಲ್ಲಿ ಮೊದಲ ಪಂದ್ಯ ನಡೆಯಲಿದೆ.
Advertisement
ಸಚಿನ್ ತೆಂಡೂಲ್ಕರ್ ಒಟ್ಟು 463 ಪಂದ್ಯವಾಡಿ 452 ಇನ್ನಿಂಗ್ಸ್‌ನಿಂದ 18,426 ರನ್ ಹೊಡೆದರೆ ಕುಮಾರ ಸಂಗಕ್ಕಾರ 404 ಪಂದ್ಯವಾಡಿ 380 ಇನ್ನಿಂಗ್ಸ್‌ನಿಂದ 14,234 ರನ್ ಹೊಡೆದಿದ್ದಾರೆ.