ಭದ್ರತೆ ಲೆಕ್ಕಿಸದೇ ವೀಲ್ ಚೇರ್‍ನಲ್ಲಿ ಕುಳಿತ್ತಿದ್ದ ಮಕ್ಕಳ ಜೊತೆ ಕೊಹ್ಲಿ ಸೆಲ್ಫಿ

Public TV
1 Min Read
kohli

ಮುಂಬೈ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಆಟದ ವೇಳೆ ಗಂಭೀರವಾಗಿ ಇರುವುದು ನಿಮಗೆ ಗೊತ್ತೆ ಇದೆ. ಆದರೆ ಹೊರಗಡೆ ಹೇಗೆ ಇರುತ್ತಾರೆ ಎನ್ನುವುದನ್ನು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವನ್ನು ವೈರಲ್ ಆಗಿದೆ.

ಅಭಿಮಾನಿಗಳೊಂದಿಗೆ ಸೆಲ್ಫಿ ತೆಗೆದುಕೊಳ್ಳುವ ವೇಳೆ ಕೋಪದಿಂದ ಇರುವುದು ಸಾಮಾನ್ಯ. ಆದರೆ ಟೀಂ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿ ಅವರು, ವೀಲ್ ಕುರ್ಚಿ ಮೇಲೆ ಕುಳಿತ್ತಿದ್ದ ಬಾಲಕನೊಂದಿಗೆ ಸೆಲ್ಫಿ ತೆಗೆದುಕೊಳ್ಳುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

kohli 2

ನ್ಯೂಜಿಲೆಂಡ್ ವಿರುದ್ಧದ ಸರಣಿ ಮುಗಿದ ಬಳಿಕ ಬಿಸಿಸಿಐ ಬಸ್ ನಲ್ಲಿ ವಿಮಾನ ನಿಲ್ದಾಣಕ್ಕೆ ಕೊಹ್ಲಿ ಆಗಮಿಸಿದ್ದಾರೆ. ಈ ವೇಳೆ ಗಾಲಿಕುರ್ಚಿ ಮೇಲೆ ಕುಳಿತು ಆಟೋಗ್ರಾಫ್‍ಗಾಗಿ ಕಾಯುತ್ತಿದ್ದ ಬಾಲಕನೊಬ್ಬ ಕೊಹ್ಲಿಗೆ ಕಣ್ಣಿಗೆ ಬಿದ್ದಿದ್ದಾನೆ. ಬಿಗಿ ಭದ್ರತೆ ಇದ್ದರೂ ಕೂಡ ಲೆಕ್ಕಿಸದೇ ಕೊಹ್ಲಿ ಕೂಡಲೇ ಬಾಲಕನ ಬಳಿ ಧಾವಿಸಿ ಆತನಿಗೆ ಆಟೋಗ್ರಾಫ್ ನೀಡಿದ್ದಾರೆ. ಬಳಿಕ ಆತನೊಂದಿಗೆ ಸೆಲ್ಫಿ ಕೂಡಾ ತೆಗೆದುಕೊಂಡಿದ್ದಾರೆ.

 ಸುತ್ತಲೂ ಮಕ್ಕಳು ನಿಂತು ಕೊಹ್ಲಿಗೆ ಶುಭ ಹಾರೈಸುತ್ತಿದ್ದರು. ಕೂಡಲೇ ಎಲ್ಲರೊಂದಿಗೂ ಸೆಲ್ಫಿ ಕ್ಲಿಕ್ಕಿಸಿಕೊಂಡು ಎಲ್ಲರಿಗೂ ಕೊಹ್ಲಿ ಆಟೋಗ್ರಾಫ್ ನೀಡಿದ್ದಾರೆ. ಈ ಎಲ್ಲಾ ದೃಶ್ಯಗಳನ್ನು ಮೊಬೈಲ್ ನಲ್ಲಿ ಸೆರೆ ಹಿಡಿದು ನವೀನ್ ಸಾಮಿ ಎಂಬುವರು ಟ್ವಿಟ್ಟರ್ ನಲ್ಲಿ ವಿಡಿಯೋ ಹಾಕಿದ್ದಾರೆ.

vlcsnap 2017 11 11 13h11m42s082

vlcsnap 2017 11 11 13h11m49s628

vlcsnap 2017 11 11 13h12m24s212

vlcsnap 2017 11 11 13h12m45s319

vlcsnap 2017 11 11 13h13m00s769

vlcsnap 2017 11 11 13h13m11s812

Share This Article
Leave a Comment

Leave a Reply

Your email address will not be published. Required fields are marked *