ರಾಜ್ ಕೋಟ್: ಇಲ್ಲಿನ ಸೌರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ವೆಸ್ಟ್ ಇಂಡೀಸ್ ವಿರುದ್ಧ ಮೊದಲ ಟೆಸ್ಟ್ ಪಂದ್ಯದಲ್ಲಿ ಶತಕ ಸಿಡಿಸಿ ಭಾರತದ ಪರ ಕೊಹ್ಲಿ ದಾಖಲೆ ನಿರ್ಮಿಸಿದ್ದಾರೆ.
ವಿರಾಟ್ ಕೊಹ್ಲಿ 123 ಇನ್ನಿಂಗ್ಸ್ ಗಳಲ್ಲಿ 24ನೇ ಶತಕ ಸಿಡಿಸುವ ಮೂಲಕ ಅತಿ ಕಡಿಮೆ ಇನ್ನಿಂಗ್ಸ್ ಈ ಸಾಧನೆ ನಿರ್ಮಿಸಿದ ಮೊದಲ ಭಾರತೀಯ ಆಟಗಾರ ಮತ್ತು ವಿಶ್ವದ ಎರಡನೇ ಆಟಗಾರ ಎನ್ನುವ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
Advertisement
#KingKohli ????#TeamIndia pic.twitter.com/vfPnZxxh47
— BCCI (@BCCI) October 5, 2018
Advertisement
ವಿಶ್ವ ಕ್ರಿಕೆಟ್‍ನಲ್ಲಿ ಆಸೀಸ್ ಆಟಗಾರ ಡೊನಾಲ್ಡ್ ಬ್ರಾಡ್‍ಮನ್ 66 ಇನ್ನಿಂಗ್ಸ್ ಗಳಲ್ಲಿ 24 ಶತಕ ಪೂರೈಸಿ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದಿದ್ದಾರೆ. ಉಳಿದಂತೆ ಸಚಿನ್ ತೆಂಡೂಲ್ಕರ್ ಅವರು 125 ಇನ್ನಿಂಗ್ಸ್, ಸುನಿಲ್ ಗವಾಸ್ಕರ್ 128 ಇನ್ನಿಂಗ್ಸ್ ಈ ಸಾಧನೆ ಮಾಡಿದ್ದರು. ಇದರೊಂದಿಗೆ ವೆಸ್ಟ್ ಇಂಡೀಸ್ ವಿವಿ ರಿಚರ್ಡ್ ಸನ್, ಪಾಕ್ ಮೊಹಮ್ಮದ್ ಯೂಸಫ್, ಆಸೀಸ್ ಗ್ರೇಕ್ ಚಾಪೆಲ್ ಅವರ 24 ಶತಕಗಳ ಸಾಧನೆಯನ್ನು ಕೊಹ್ಲಿ ಸರಿಗಟ್ಟಿದ್ದಾರೆ.
Advertisement
???? VIRAT KOHLI HUNDRED ????
The India captain is leading from the front as he brings up his 24th Test ????! pic.twitter.com/ACPYWrTFwn
— ICC (@ICC) October 5, 2018
Advertisement
ಕೊಹ್ಲಿ ತವರು ನೆಲದಲ್ಲಿ ಸಿಡಿಸಿದ 11ನೇ ಹಾಗೂ ನಾಯಕನಾಗಿ ಗಳಿಸಿದ 17ನೇ ಶತಕ ಇದಾಗಿದೆ. 2018ರ 4ನೇ ಶತಕ ಇದಾಗಿದ್ದು, ಟೆಸ್ಟ್ ಕ್ರಿಕೆಟ್‍ನಲ್ಲಿ 1,000 ರನ್ ಗಳಿಸಿದ ಆಟಗಾರ ಎಂಬ ಹೆಗ್ಗಳಿಕೆಯನ್ನು ಪಡೆದಿದ್ದಾರೆ. ಈ ಮೂಲಕ 2016 ರಿಂದ 2018 ಅವಧಿಯಲ್ಲಿ ಸತತ ಮೂರು ವರ್ಷ 1 ಸಾವಿರ ರನ್ ಪೂರ್ಣಗೊಳಿಸಿದ್ದಾರೆ. ಈ ಪಂದ್ಯದಲ್ಲಿ 230 ಎಸೆತಗಳನ್ನು ಎದುರಿಸಿದ ವಿರಾಟ್ ಕೊಹ್ಲಿ 10 ಬೌಂಡರಿಗಳ ಸಮೇತ 139 ರನ್ ಸಿಡಿಸಿದ್ದಾರೆ.
2ನೇ ದಿನದಾಟದ ವೇಳೆ ಟೀಂ ಇಂಡಿಯಾ ಪರ ಕೊಹ್ಲಿ ಜೊತೆಗೂಡಿದ ರಿಷಭ್ ಪಂತ್ 8 ಬೌಂಡರಿಗಳ ನೆರವಿನಿಂದ 92 ರನ್ ಸಿಡಿಸಿ ಔಟಾದರು. ಕೊಹ್ಲಿ, ಪಂತ್ ಜೋಡಿ 5ನೇ ವಿಕೆಟ್‍ಗೆ 133 ರನ್ ಜೊತೆಯಾಟ ನೀಡಿದರು. ಇದಕ್ಕೂ ಮುನ್ನ 41 ರನ್ ಗಳಿಸಿದ್ದ ರಹಾನೆ ಅರ್ಧ ಶತಕದಿಂದ ವಂಚಿತರಾಗಿ ಔಟಾದರು.
Virat Kohli at home…
from Feb-Nov 2017 (Aus series)
0, 13, 12, 15, 6, 0 – 46 runs @ 7.66
Since Nov 2017
104*, 213, 243, 50, 139 – 749 runs @ 187.25#IndvWI
— Mohandas Menon (@mohanstatsman) October 5, 2018
ಟೀಂ ಇಂಡಿಯಾ ರನ್:
10.3 ಓವರ್ 50 ರನ್
19.5 ಓವರ್ 100 ರನ್
40.3 ಓವರ್ 200 ರನ್
72.4 ಓವರ್ 300 ರನ್
95.6 ಓವರ್ 400 ರನ್
116.4 ಓವರ್ 500 ರನ್
129.2 ಓವರ್ 550 ರನ್
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
Virat Kohli's centuries in International cricket:
As captain – 30 100s in 134 inns
As non-captain – 29 100s in 250 inns#IndvWI
— Bharath Seervi (@SeerviBharath) October 5, 2018