ನವದೆಹಲಿ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅರ್ಜೆಂಟೀನಾ ಫುಟ್‍ಬಾಲ್ ಸ್ಟಾರ್ ಆಟಗಾರ ಲಿಯೋನೆಲ್ ಮೆಸ್ಸಿಯನ್ನು ಅವರನ್ನು ಹಿಂದಿಕ್ಕಿದ್ದಾರೆ.
ಫೋರ್ಬ್ಸ್ ನಿಯತಕಾಲಿಕೆ ಬುಧವಾರ ವಿಶ್ವದ ಅತ್ಯಂತ ಮೌಲ್ಯಯುತ ಕ್ರೀಡಾಪಟುಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಈ ಪಟ್ಟಿಯಲ್ಲಿ ಕೊಹ್ಲಿ 7ನೇ ಸ್ಥಾನ ಪಡೆದರೆ, ಮೆಸ್ಸಿ 9ನೇ ಸ್ಥಾನ ಪಡೆದಿದ್ದಾರೆ.
Advertisement
ಆಟಗಾರರ ವೇತನ, ಬೋನಸ್ ಸೇರಿದಂತೆ ಎಲ್ಲ ಹೂಡಿಕೆಗಳಿಂದ ಬರುವ ಆದಾಯವನ್ನು ಲೆಕ್ಕಹಾಕಿ ಈ ಪಟ್ಟಿಯನ್ನು ಫೋರ್ಬ್ಸ್ ಬಿಡುಗಡೆ ಮಾಡಿದೆ. ಟೆನ್ನಿಸ್ ಆಟಗಾರ ಸ್ವಿಜರ್‍ಲ್ಯಾಂಡಿನ ರೋಜರ್ ಫೆಡರರ್ ಮೊದಲ ಸ್ಥಾನ ಪಡೆದಿದ್ದಾರೆ.
Advertisement
ಟಾಪ್ ಆಟಗಾರರು ಯಾರು?
1. ರೋಜರ್ ಫೆಡರರ್ – 37.2 ದಶಲಕ್ಷ ಡಾಲರ್ (ಅಂದಾಜು 241 ಕೋಟಿ ರೂ.)
2. ಲೆಬ್ರೋನ್ ಜೇಮ್ಸ್ – 33.4 ದಶಲಕ್ಷ ಡಾಲರ್ (ಅಂದಾಜು 216 ಕೋಟಿ ರೂ.)
3. ಉಸೇನ್ ಬೋಲ್ಟ್ – 27 ದಶಲಕ್ಷ ಡಾಲರ್ (ಅಂದಾಜು 175 ಕೋಟಿ ರೂ.)
4. ಕ್ರಿಶ್ಚಿಯಾನೋ ರೊನಾಲ್ಡೊ – 21.5 ದಶಲಕ್ಷ ಡಾಲರ್ (ಅಂದಾಜು 139 ಕೋಟಿ ರೂ.)
Advertisement
5. ಫಿಲ್ ಮೈಕ್ಲೆಸನ್ – 19.6 ದಶಲಕ್ಷ ಡಾಲರ್(ಅಂದಾಜು127 ಕೋಟಿ ರೂ.)
6. ಟೈಗರ್ ವುಡ್ಸ್ – 16.6 ದಶಲಕ್ಷ ಡಾಲರ್(ಅಂದಾಜು107 ಕೋಟಿ ರೂ.)
7. ವಿರಾಟ್ ಕೊಹ್ಲಿ – 14.5 ದಶಲಕ್ಷ ಡಾಲರ್(ಅಂದಾಜು 94 ಕೋಟಿ ರೂ.)
8. ರೋರಿ ಮೆಕ್ರಾಯ್ – 13.6 ದಶಲಕ್ಷ ಡಾಲರ್(ಅಂದಾಜು 88 ಕೋಟಿ ರೂ.)
8. ಲಿಯೋನೆಲ್ ಮೆಸ್ಸಿ -13.5 ದಶಲಕ್ಷ ಡಾಲರ್(ಅಂದಾಜು 87 ಕೋಟಿ ರೂ.)
10. ಸ್ಟೆಫ್ ಕರ್ರಿ – 13.4 ದಶಲಕ್ಷ ಡಾಲರ್(ಅಂದಾಜು 86 ಕೋಟಿ ರೂ.)
Advertisement