ನವದೆಹಲಿ: ವಿಶ್ವಕ್ರಿಕೆಟ್‍ನಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಉತ್ತಮ ಬ್ಯಾಟಿಂಗ್ ತಂತ್ರಗಾರಿಕೆಯನ್ನು ಹೊಂದಿರುವ ಆಟಗಾರರಾಗಿದ್ದು, ವಿಶ್ವ ಕ್ರಿಕೆಟ್ ದಿಗ್ಗಜರ ಸಾಲಿಗೆ ಸೇರಲಿದ್ದಾರೆ ಎಂದು ಆಸೀಸ್ ತಂಡದ ಮಾಜಿ ನಾಯಕ ಸ್ಟೀವ್ ವಾ ಭವಿಷ್ಯ ನುಡಿದ್ದಾರೆ.
ಖಾಸಗಿ ಮಾಧ್ಯಮವೊಂದರ ಸಂದರ್ಶನದಲ್ಲಿ ಮಾತನಾಡಿದ ಅವರು, ಎಬಿ ಡಿವಿಲಿಯರ್ಸ್ ಇಂತಹದ್ದೇ ಉತ್ತಮ ಬ್ಯಾಟಿಂಗ್ ತಂತ್ರಗಾರಿಕೆ ಹೊಂದಿದ್ದರು, ಆದರೆ ಸದ್ಯ ಅವರು ಕ್ರಿಕೆಟ್ ವೃತ್ತಿ ಜೀವನಕ್ಕೆ ವಿದಾಯ ಹೇಳಿದ್ದಾರೆ. ಅದ್ದರಿಂದ ಕೊಹ್ಲಿ ಸದ್ಯ ವಿಶ್ವ ಕ್ರಿಕೆಟ್‍ನ ಉತ್ತಮ ಆಟಗಾರರ ಸಾಲಿನಲ್ಲಿ ಮುನ್ನಡೆಯಲ್ಲಿ ನಿಲ್ಲುತ್ತಾರೆ ಎಂದು ಹೇಳಿದರು.
Advertisement
Advertisement
ವಿಶ್ವ ಕ್ರಿಕೆಟ್ ದಿಗ್ಗಜರಾದ ಕೆರಿಬಿಯನ್ ಆಟಗಾರ ಬ್ರಿಯನ್ ಲಾರಾ, ವಿವ್ ರಿಚರ್ಡ್ ರಂತಹ ದಿಗ್ಗಜರ ಸಾಲಿಗೆ ಕೊಹ್ಲಿ ಬಂದು ನಿಲ್ಲುತ್ತಾರೆ ಎಂದ ಅವರು, ಇಂತಹ ಗುಣಲಕ್ಷಣಗಳನ್ನು ಕೊಹ್ಲಿ ಈಗಾಗಲೇ ತೋರಿಸಿದ್ದಾರೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಅಂಪೈರ್‌ಗಳಿಂದ ಬಾಲನ್ನು ಪಡೆದಿದ್ದು ಯಾಕೆ: ಅಭಿಮಾನಿಗಳಿಗೆ ಧೋನಿ ಸ್ಪಷ್ಟೀಕರಣ
Advertisement
ಇತ್ತೀಚೆಗಷ್ಟೇ ವಿರಾಟ್ ಕೊಹ್ಲಿ ಐಸಿಸಿ ಟೆಸ್ಟ್ ಆಟಗಾರರ ಪಟ್ಟಿಯಲ್ಲಿ ನಂ.1 ಪಟ್ಟ ಪಡೆದ ಹೆಗ್ಗಳಿಕೆ ಪಡೆದಿದ್ದರು. 2011 ಜೂನ್ ನಲ್ಲಿ ಟೀಂ ಇಂಡಿಯಾ ಮಾಜಿ ನಾಯಕ ಸಚಿನ್ ತೆಂಡೂಲ್ಕರ್ ಬಳಿಕ ಈ ಸಾಧನೆ ಮಾಡಿದ ಆಟಗಾರ ಎನಿಸಿಕೊಂಡರು. ಅಲ್ಲದೇ ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ 5 ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯದ 2 ಇನ್ನಿಂಗ್ಸ್ ಗಳಲ್ಲಿ 200 ರನ್ ಸಿಡಿಸಿ ಮಿಂಚಿದ್ದರು. ಆದರೆ ಮೊದಲ ಪಂದ್ಯದಲ್ಲಿ ಟೀಂ ಇಂಡಿಯಾ ಸೋಲುಂಡು ಸರಣಿಯಲ್ಲಿ 0-1 ಅಂತರ ಹಿನ್ನೆಡೆ ಅನುಭವಿಸಿತು.
Advertisement
ಆಗಸ್ಟ್ 9 ರಂದು ಆರಂಭವಾದ ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿಯ 2ನೇ ಪಂದ್ಯದ ಮೊದಲ ದಿನದಾಟ ಟಾಸ್ ಕೂಡ ನಡೆಯದೇ ರದ್ದಾಗಿದ್ದು, ಅಭಿಮಾನಿಗಳಲ್ಲಿ ನಿರಾಸೆ ಮೂಡಿಸಿದೆ. ಇದನ್ನೂ ಓದಿ: ಸಚಿನ್ ಬಳಿಕ ಐಸಿಸಿ ನಂ.1 ಟೆಸ್ಟ್ ಬ್ಯಾಟ್ಸ್ ಮನ್ ಪಟ್ಟಕ್ಕೇರಿದ ವಿರಾಟ್ ಕೊಹ್ಲಿ
Update – Day 1 play has been called off here at @HomeOfCricket.#ENGvIND pic.twitter.com/hCY5Z2dHC6
— BCCI (@BCCI) August 9, 2018
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ: www.instagram.com/publictvnews