ಮುಂಬೈ: ವಿರಾಟ್ ಕೊಹ್ಲಿ ಅತ್ಯುತ್ತಮ ಕ್ಯಾಪ್ಟನ್ ಎಂದು ಸರಣಿ ಗೆಲ್ಲುವ ಮೂಲಕ ಸಾಬೀತು ಮಾಡಿದ್ದಾರೆ. ಕೊಹ್ಲಿ ತಮ್ಮ ಆಕರ್ಷಕ ಬ್ಯಾಟಿಂಗ್ ಮತ್ತು ಲುಕ್ ನಿಂದ ಅನೇಕ ಮಹಿಳಾ ಅಭಿಮಾನಿಗಳನ್ನು ಹೊಂದಿದ್ದಾರೆ. ಆದರೆ ಕೊಹ್ಲಿ ಮಾತ್ರ ಧೋನಿ ಮಗಳು ಝಿವಾ ಅವರ ದೊಡ್ಡ ಫ್ಯಾನ್ ಆಗಿದ್ದಾರೆ.
ಹೌದು. ಕೊಹ್ಲಿ ಬಿಡುವಿದ್ದ ಸಮಯದಲ್ಲಿ ಮಹೇಂದ್ರ ಸಿಂಗ್ ಧೋನಿ ಅವರ ಮಗಳು ಝಿವಾ ಜೊತೆ ಹೆಚ್ಚು ಕಾಲ ಕಳೆಯುತ್ತಾರೆ. ಝಿವಾ ಜೊತೆ ಆಟವಾಡುತ್ತಾ, ಸೆಲ್ಫೀ ಮತ್ತು ವಿಡಿಯೋಗಳನ್ನು ತೆಗೆಸಿಕೊಳ್ಳುತ್ತಾರೆ. ಆ ಫೋಟೋ ಅಥವಾ ವಿಡಿಯೋವನ್ನು ತಮ್ಮ ಇನ್ ಸ್ಟಾಗ್ರಾಂ, ಟ್ವಿಟ್ಟರ್‍ನಲ್ಲಿ ಪೋಸ್ಟ್ ಮಾಡುತ್ತಾರೆ.
ಕೊಹ್ಲಿ ಇತ್ತೀಚಿಗೆ ಝಿವಾ ಜೊತೆ ಕಾಲ ಕಳೆದಿದ್ದು, ಮಗು ಜೊತೆ ಮುದ್ದಾಗಿ ಮಾತನಾಡಿದ ವಿಡಿಯೋವೊಂದನು ತಮ್ಮ ಇನ್ ಸ್ಟಾಗ್ರಾಂ ಹಾಗೂ ಟ್ವಿಟ್ಟರ್‍ನಲ್ಲಿ ಹಾಕಿದ್ದಾರೆ. ತುಂಬಾ ದಿನಗಳ ನಂತರ ಝಿವಾನನ್ನು ಭೇಟಿ ಮಾಡಿದ್ದೇನೆ ಎಂದು ಬರೆದು ತಮ್ಮ ಟ್ವಿಟ್ಟರ್‍ನಲ್ಲಿ ಪೋಸ್ಟ್ ಮಾಡಿದ್ದಾರೆ.
ಈ ಟ್ಟೀಟ್‍ಗೆ 61,000 ಲೈಕ್, 11,000 ರೀ-ಟ್ವೀಟ್‍ಗಳು ಬಂದಿದ್ದೆ.
My reunion with Ziva. What a blessing it is to be around pure innocence ????❤ pic.twitter.com/7IpvTyynoA
— Virat Kohli (@imVkohli) October 8, 2017