ಲಕ್ನೋ: ಈಚೆಗಷ್ಟೇ ಟೆಸ್ಟ್ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದ ವಿರಾಟ್ ಕೊಹ್ಲಿಗೆ ಲಕ್ನೋದಲ್ಲಿ ಆರ್‌ಸಿಬಿ ಅಭಿಮಾನಿಗಳು ಫೇರ್‌ವೆಲ್ ಹೇಳಿದ್ದಾರೆ.
ಆರ್‌ಸಿಬಿ ಆಟಗಾರನಿಗೆ ತವರಲ್ಲೇ ಅದ್ಧೂರಿಯಾಗಿ ಬೀಳ್ಕೊಡುಗೆ ನೀಡುವ ಪ್ಲ್ಯಾನ್ ನಡೆದಿತ್ತು. ಪಂಜಾಬ್ ವಿರುದ್ಧದ ಪಂದ್ಯದಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್‌ಸಿಬಿ ಅಭಿಮಾನಿಗಳು ಬಿಳಿ ವಸ್ತ್ರವನ್ನು ಧರಿಸಿ ಕಿಂಗ್ ಕೊಹ್ಲಿಗೆ ಸ್ಮರಣೀಯ ಬೀಳ್ಕೊಡುಗೆ ನೀಡಲು ಮುಂದಾಗಿದ್ದರು. ಆದರೆ, ಮಳೆಗೆ ಪಂದ್ಯ ರದ್ದಾಗಿದ್ದರಿಂದ ಅದು ಸಾಧ್ಯವಾಗಲಿಲ್ಲ. ಆ ದಿನ ಪಂದ್ಯ ರದ್ದಾಗಿದ್ದಕ್ಕೆ ಕೊಹ್ಲಿ ಬೇಸರಗೊಂಡಿದ್ದರು. ಇದನ್ನೂ ಓದಿ: ಸನ್ ರೈಸರ್ಸ್ ಆರ್ಭಟಕ್ಕೆ ಆರ್‌ಸಿಬಿ ಬರ್ನ್ – ಹೈದರಾಬಾದ್‌ಗೆ 42 ರನ್‌ಗಳ ಜಯ, 3ನೇ ಸ್ಥಾನಕ್ಕೆ ಕುಸಿದ ಬೆಂಗಳೂರು
ಶುಕ್ರವಾರ ಲಕ್ನೋದಲ್ಲಿ ನಡೆದ ಎಸ್‌ಆರ್‌ಹೆಚ್ ವಿರುದ್ಧದ ಪಂದ್ಯದಲ್ಲಿ ಕೊಹ್ಲಿಗೆ ಆರ್‌ಸಿಬಿ ಅಭಿಮಾನಿಗಳು ಫೇರ್‌ವೆಲ್ ಹೇಳಿದ್ದಾರೆ. ಹಲವರು ಪ್ಲೆಕಾರ್ಡ್ ಪ್ರದರ್ಶಿಸಿ ಬೀಳ್ಕೊಡುಗೆಯ ವಿಶ್ ಮಾಡಿದ್ದಾರೆ.
‘ನಾವು ನಿಮ್ಮನ್ನು ತುಂಬಾ ಮಿಸ್ ಮಾಡಿಕೊಳ್ತಿದ್ದೀವಿ ಕ್ಯಾಪ್ಟನ್’.. ‘ಫೇರ್‌ವೆಲ್ ಕಿಂಗ್’.. ಹೀಗೆ ಹಲವಾರು ಪ್ಲೆಕಾರ್ಡ್ ಪ್ರದರ್ಶಿಸಿ ಫ್ಯಾನ್ಸ್ ಬೀಳ್ಕೊಡುಗೆ ನೀಡಿದರು. ಮೈದಾನದಲ್ಲಿ ಈ ದೃಶ್ಯವನ್ನು ಕಂಡು ಕೊಹ್ಲಿ ಸಂತಸ ಪಟ್ಟರು. ಇದನ್ನೂ ಓದಿ: ಅಭಿಷೇಕ್ ಶರ್ಮಾ ಹೊಡೆದ ಸಿಕ್ಸ್‌ಗೆ ಕಾರಿನ ಗ್ಲಾಸ್ ಪುಡಿ.. ಪುಡಿ.. – 5 ಲಕ್ಷ ನಷ್ಟ
ವಿರಾಟ್ ಕೊಹ್ಲಿ ಒಟ್ಟು 123 ಟೆಸ್ಟ್ ಮ್ಯಾಚ್‌ಗಳನ್ನು ಆಡಿದ್ದಾರೆ. ನಾಯಕನಾಗಿ 68 ಪಂದ್ಯಗಳನ್ನು ಆಡಿದ್ದು, 40 ಪಂದ್ಯಗಳನ್ನು ಗೆಲ್ಲಿಸಿಕೊಟ್ಟಿದ್ದಾರೆ. ಒಟ್ಟು 9,230 ರನ್ ಗಳಿಸಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿ 30 ಶತಕ ಹಾಗೂ 31 ಅರ್ಧಶತಕ ಗಳಿಸಿದ್ದಾರೆ.