ವಿಶಾಖಪಟ್ಟಣ: ಪುಲ್ವಾಮಾ ದಾಳಿಯ ಬಳಿಕ ಮೊದಲ ಭಾರಿಗೆ ಮೈದಾನಕ್ಕಿಳಿದಿದ್ದ ಟೀಂ ಇಂಡಿಯಾಗೆ ಬೆಂಬಲವಾಗಿ ನೆರೆದಿದ್ದ ಅಭಿಮಾನಿಗಳು ‘ಭಾರತ್ ಮಾತ ಕೀ ಜೈ’ ಎಂಬ ಘೋಷಣೆ ಕೂಗಿ ಸ್ವಾಗತ ಮಾಡಿದ್ದರು.
ಪಂದ್ಯ ಆರಂಭಕ್ಕೂ ಮುನ್ನ ಇತ್ತಂಡಗಳ ಆಟಗಾರರು ಕೂಡ ಕ್ರೀಡಾಂಗಣದಲ್ಲಿ 2 ನಿಮಿಷ ಮೌನಾಚರಣೆ ಮಾಡುವ ಮೂಲಕ ನಮನ ಹುತಾತ್ಮ ಯೋಧರಿಗೆ ಸಲ್ಲಿಸಿದರು. ಆದರೆ ಈ ವೇಳೆ ಅಭಿಮಾನಿಗಳು ಘೋಷಣೆ ಕೂಗುವುದನ್ನು ನಿಲ್ಲಿಸದ ಕಾರಣ ಕೊಹ್ಲಿ ಮೌನವಾಗಿ ಇರುವಂತೆ ಸೂಚನೆ ನೀಡಿ ಮನವಿ ಮಾಡಿದ್ದ ಘಟನೆ ನಡೆದಿದೆ.
Advertisement
#TeamIndia and Australia pay homage to the martyrs of Pulawama Terror Attack before the start of play today at Vizag.
Full video here – https://t.co/kNZfOh4cUB #AUSvIND pic.twitter.com/jm3sen0h2F
— BCCI (@BCCI) February 24, 2019
Advertisement
ರಾಷ್ಟ್ರ ಗೀತೆಯ ಬಳಿಕ ಆಟಗಾರರು 2 ನಿಮಿಷ ಮೌನಾಚರಣೆ ಮಾಡಿದ್ದರು. ಈ ವೇಳೆ ಅಭಿಮಾನಿಗಳ ಗ್ಯಾಲರಿಯಿಂದ ಘೋಷಣೆ ಮೊಳಗುತ್ತಲೇ ಇತ್ತು. ಈ ವೇಳೆ ಎಚ್ಚೆತ್ತ ಕೊಹ್ಲಿ ಕೈಸನ್ನೆ ಮಾಡುವ ಎಲ್ಲರ ಮನ ಗೆದ್ದಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಕೊಹ್ಲಿ ಅವರ ಈ ಫೋಟೋ ಸಖತ್ ವೈರಲ್ ಆಗಿದೆ. ಪಂದ್ಯದಲ್ಲಿ ಟೀಂ ಇಂಡಿಯಾ ಆಟಗಾರರು ಕಪ್ಪು ಪಟ್ಟಿ ಧರಿಸಿ ಆಡಿದ್ದರು.
Advertisement
ಪಂದ್ಯದಲ್ಲಿ ಟೀಂ ಇಂಡಿಯಾ ಕೊನೆಯ ಸೋಲುಂಡಿತ್ತು. ಪಂದ್ಯದ ಸೋತ ಪರಿಣಾಮ ಕೆಲ ಅಭಿಮಾನಿಗಳು ತಂಡದ ಆಟಗಾರರ ಅಸಮಾಧಾನ ವ್ಯಕ್ತಪಡಿಸಿದ್ದರು. ಪ್ರಮುಖವಾಗಿ ಟೀಂ ಇಂಡಿಯಾ ಬ್ಯಾಟಿಂಗ್ ವೇಳೆ ಅಂತಿಮ ಓವರ್‍ಗಳನ್ನು ಆಡಿದ ಧೋನಿ ಹಾಗು ಅಂತಿಮ ಬೌಲರ್ ಎಸೆತ ಉಮೇಶ್ ಯಾದವ್ ವಿರುದ್ಧ ಹೆಚ್ಚು ಅಕ್ರೋಶ ವ್ಯಕ್ತವಾಗಿದೆ. 2 ಪಂದ್ಯ ಟಿ20 ಸರಣಿಯಲ್ಲಿ ಸದ್ಯ ಆಸೀಸ್ ಮುನ್ನಡೆ ಪಡೆದಿದ್ದು, ಬುಧವಾರ 2ನೇ ಹಾಗೂ ಅಂತಿಮ ಟಿ20 ಪಂದ್ಯ ಬೆಂಗಳೂರಿನಲ್ಲಿ ನಡೆಯಲಿದೆ.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv