ಮುಂಬೈ: ಮೊದಲ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಆಸ್ಟ್ರೇಲಿಯಾ ವಿರುದ್ಧ ಕೆಟ್ಟ ದಾಖಲೆ ಬರೆದಿದ್ದಾರೆ.
ಇಲ್ಲಿಯವರೆಗೆ ಆಸ್ಟ್ರೇಲಿಯಾ ಭಾರತದ ವಿರುದ್ಧ 10 ವಿಕೆಟ್ ಗಳ ಜಯವನ್ನು ಸಾಧಿಸಿರಲಿಲ್ಲ. ಆದರೆ ಮಂಗಳವಾರ ನಡೆದ ಪಂದ್ಯದಲ್ಲಿ ಭಾರತದ ವಿರುದ್ಧ 10 ವಿಕೆಟ್‍ಗಳ ಜಯವನ್ನು ಸಾಧಿಸಿತ್ತು. ಈ ಮೂಲಕ ಕೊಹ್ಲಿ ನೇತೃತ್ವದ ತಂಡವನ್ನು ಸೋಲಿಸಿ ಮೊದಲ ಬಾರಿಗೆ ಆಸ್ಟ್ರೇಲಿಯಾ ಈ ಸಾಧನೆ ನಿರ್ಮಿಸಿತು.
Advertisement
ಈ ಹಿಂದೆ ನ್ಯೂಜಿಲೆಂಡ್(1981), ವೆಸ್ಟ್ ಇಂಡೀಸ್(1997), ದಕ್ಷಿಣ ಆಫ್ರಿಕಾ(2000), ದಕ್ಷಿಣ ಆಫ್ರಿಕಾ(2005) ಭಾರತದ ವಿರುದ್ಧ 10 ವಿಕೆಟ್‍ಗಳ ಜಯ ಸಾಧಿಸಿತ್ತು.
Advertisement
Advertisement
ಆರಂಭಿಕ ಬ್ಯಾಟ್ಸ್ ಮನ್ ಆ್ಯರನ್ ಫಿಂಚ್ ಹಾಗೂ ಡೇವಿಡ್ ವಾರ್ನರ್ ಸ್ಫೋಟಕ ಬ್ಯಾಟಿಂಗ್‍ನಿಂದ ಆಸ್ಟ್ರೇಲಿಯಾ ತಂಡವು ಟೀಂ ಇಂಡಿಯಾ ವಿರುದ್ಧ 74 ಎಸೆತಗಳು ಬಾಕಿ ಇರುವಂತೆ 10 ವಿಕೆಟ್‍ಗಳ ಭರ್ಜರಿ ಗೆಲುವು ಸಾಧಿಸಿ ಮೂರು ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.
Advertisement
ಆ್ಯರನ್ ಫಿಂಚ್ 110 ರನ್ (114 ಎಸೆತ, 13 ಬೌಂಡರಿ, 2 ಸಿಕ್ಸರ್) ಹಾಗೂ ಡೇವಿಡ್ ವಾರ್ನರ್ 128 ರನ್ (112 ಎಸೆತ, 17 ಬೌಂಡರಿ, 3 ಸಿಕ್ಸರ್) ಹೊಡೆದಿದ್ದರಿಂದ 37.4 ಓವರ್ ನಲ್ಲಿ 258 ರನ್ ಗಳಿಸಿ ಭರ್ಜರಿ ಗೆಲುವು ಸಾಧಿಸಿತು.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ್ದ ಭಾರತ 49.1 ಓವರ್ ಗಳಲ್ಲಿ 255 ರನ್‍ಗಳಿಗೆ ಆಲೌಟ್ ಆಗಿತ್ತು. ಇದನ್ನೂ ಓದಿ: ಪಂತ್ ಬದಲು ಕೀಪಿಂಗ್ ಗ್ಲೌಸ್ ತೊಟ್ಟ ರಾಹುಲ್
ಇದಕ್ಕೂ ಮುನ್ನ ಬ್ಯಾಟಿಂಗ್ ಮಾಡಿದ್ದ ಟೀಂ ಇಂಡಿಯಾ 49.1 ಓವರ್ ಗಳಲ್ಲಿ ಎಲ್ಲಾ ವಿಕೆಟ್ ಕಳೆದುಕೊಂಡು 255 ರನ್ ಪೇರಿಸಿತ್ತು. ಶಿಖರ್ ಧವನ್ 74 ರನ್ (91 ಎಸೆತ, 9 ಬೌಂಡರಿ, ಸಿಕ್ಸ್), ಕೆ.ಎಲ್.ರಾಹುಲ್ 47 ರನ್ (61 ಎಸೆತ, 4 ಬೌಂಡರಿ) ಹೊಡೆದಿದ್ದರು.
ಎರಡನೇ ಪಂದ್ಯ ಜ.17 ರಂದು ಗುಜರಾತಿನ ರಾಜ್‍ಕೋಟ್ ನಲ್ಲಿ ನಡೆಯಲಿದ್ದರೆ ಕೊನೆಯ ಪಂದ್ಯ ಜ.19 ರಂದು ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಲಿದೆ.