ಮುಂಬೈ: ಟೀ ಇಂಡಿಯಾ ಮಾಜಿ ನಾಯಕ ಎಂಎಸ್ ಧೋನಿ ಅವರ ಸ್ಥಾನವನ್ನು ಯಾರು ತುಂಬಲಾಗದು ಎಂಬುವುದು ಕ್ಯಾಪ್ಟನ್ ಕೊಹ್ಲಿ ಅವರ ಅಭಿಪ್ರಾಯವಾಗಿದೆ ಎಂದು ಕ್ರಿಕೆಟ್ ಆಡಳಿತ ಸಮಿತಿ ಮುಖ್ಯಸ್ಥ ವಿನೋದ್ ರಾಯ್ ಹೇಳಿದ್ದಾರೆ.
ಎಂಎಸ್ ಧೋನಿ ಹಾಗೂ ಕೊಹ್ಲಿ ನಡುವಿನ ಬಾಂಧವ್ಯದ ಕುರಿತು ಬಹಿರಂಗಪಡಿಸಿದ ವಿನೋದ್ ರಾಯ್ ಅವರು, ಇಬ್ಬರ ನಡುವೆಯೂ ಉತ್ತಮ ಗೌರವ ಮನೋಭಾವವಿದೆ. ಧೋನಿ ಅವರ ಕ್ರಿಕೆಟ್ ಕೌಶಲ್ಯ ಹಾಗೂ ಕೊಹ್ಲಿ ಯಶ್ಸಸನ್ನು ಇಬ್ಬರು ಪರಸ್ಪರ ಗೌರವಿಸುತ್ತಾರೆ ಎಂದು ಮಾಧ್ಯಮ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.
Advertisement
Advertisement
ಕೊಹ್ಲಿ, ಧೋನಿ ಅವರ ಬಗೆಗಿನ ತಮ್ಮ ಅಭಿಪ್ರಾಯವನ್ನು ರಾಯ್ ಅವರ ಬಳಿ ಹಂಚಿಕೊಂಡಿದ್ದಾರೆ. ತಂಡದ ನಾಯಕರಾಗಿ ಟಿ20 ಹಾಗೂ ಐಸಿಸಿ ಏಕದಿನ ವಿಶ್ವಕಪ್ ಗೆದ್ದ ಧೋನಿ ಅವರ ಸ್ಥಾನವನ್ನು ಯಾರು ತುಂಬಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.
Advertisement
ಧೋನಿ ಅವರ ನಾಯತ್ವ ಮಾತ್ರವಲ್ಲದೇ ಅವರ ವಿಕೆಟ್ ಕೀಪಿಂಗ್ ಕೌಶಲ್ಯಗಳು ಅತ್ಯುತ್ತಮವಾಗಿದ್ದು. ಧೋನಿ ಅವರಿಗಿಂತ ವೇಗವಾಗಿ ವಿಕೆಟ್ ಹಾರಿಸುವ ಕೀಪರ್ ತಂಡದಲಿಲ್ಲ. ಧೋನಿ ಕ್ರಿಕೆಟ್ ಬಗೆಗಿನ ಜ್ಞಾನವು ಕೊಹ್ಲಿ ಪಾಲಿಗೆ ದೊಡ್ಡ ಆಸ್ತಿಯಾಗಿದೆ. ಧೋನಿ ಎಷ್ಟು ವರ್ಷ ಕ್ರಿಕೆಟ್ ನಲ್ಲಿ ಉಳಿಯಲಿದ್ದಾರೆ ಎಂಬುದನ್ನು ಸಮಯವೇ ತಿಳಿಸಲಿದೆ ಎಂದು ರಾಯ್ ಹೇಳಿದ್ದಾರೆ.
Advertisement
2014 ರಲ್ಲಿ ಕೊಹ್ಲಿ ಟೆಸ್ಟ್ ತಂಡದ ನಾಯಕತ್ವ ವಹಿಸಿದ ಬಳಿಕ ಧೋನಿ ತಮ್ಮ ಟೆಸ್ಟ್ ವೃತ್ತಿ ಜೀವನಕ್ಕೆ ನಿವೃತ್ತಿ ಘೋಷಿಸಿದರು. ಬಳಿಕ ಏಕದಿನ ಮತ್ತು ಟಿ20 ಮಾದರಿಯಲ್ಲಿ ತಂಡದ ಮುಖ್ಯ ಪಾತ್ರವಹಿಸಿದ್ದಾರೆ.