ಮುಂಬೈ: ಕುಂಬ್ಳೆ ರಾಜೀನಾಮೆಗೆ ಕೊಹ್ಲಿಯೆ ಕಾರಣ ಎನ್ನುವ ಭಾರೀ ಚರ್ಚೆ ನಡೆಯುತ್ತಿರುವಾಗಲೇ ಕೊಹ್ಲಿ ಒಂದು ವರ್ಷದ ಹಿಂದೆ ತಾವು ಮಾಡಿದ್ದ ಟ್ವೀಟ್ ಒಂದನ್ನು ಡಿಲೀಟ್ ಮಾಡುವ ಮೂಲಕ ಮತ್ತೊಮ್ಮೆ ಚರ್ಚೆಗೆ ಕಾರಣರಾಗಿದ್ದಾರೆ.
ಹೌದು. ಕುಂಬ್ಳೆ ಟೀಂ ಇಂಡಿಯಾದ ಕೋಚ್ ಆಗಿ ನೇಮಕವಾದ ಬಳಿಕ 2016ರ ಜೂನ್ 23ರಂದು ಕೊಹ್ಲಿ ಅವರನ್ನು ಅಭಿನಂದಿಸಿ ಟ್ವೀಟ್ ಮಾಡಿದ್ದರು. ಆದರೆ ಈಗ ಅವರ ಖಾತೆಯಲ್ಲಿ ಅಭಿನಂದಿಸಿದ ಆ ಟ್ವೀಟ್ ಈಗ ಮಾಯವಾಗಿದೆ.
Advertisement
ನಿಮಗೆ ನಮ್ಮ ತಂಡಕ್ಕೆ ಹೃದಯಪೂರ್ವಕ ಸ್ವಾಗತಗಳು, ಭಾರತೀಯ ಕ್ರಿಕೆಟ್ ತಂಡದ ಜೊತೆ ನೀವು ಇರುವುದು ದೊಡ್ಡ ವಿಚಾರ ಎಂದು ಕುಂಬ್ಳೆ ಅವರಿಗೆ ಟ್ಯಾಗ್ ಮಾಡಿ ಅವರನ್ನು ಸ್ವಾಗತಿಸಿದ್ದರು.
Advertisement
ಕುಂಬ್ಳೆ ರಾಜೀನಾಮೆ ಚರ್ಚೆಯ ನಡುವೆ ಈ ಟ್ವೀಟ್ ಈಗ ಡಿಲೀಟ್ ಆಗಿದ್ದು ಸಾಮಾಜಿಕ ಜಾಲತಾಣದಲ್ಲಿ ಜನರು ಕೊಹ್ಲಿಗೆ ಆ ಟ್ವೀಟನ್ನು ಡಿಲೀಟ್ ಮಾಡುವ ಉದ್ದೇಶ ಏನಿತ್ತು ಎಂದು ಪ್ರಶ್ನಿಸುತ್ತಿದ್ದಾರೆ.
Advertisement
ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಮತ್ತು ಮಾಜಿ ಕ್ರಿಕೆಟ್ ಕೋಚ್ ಅನಿಲ್ ಕುಂಬ್ಳೆ ಮಧ್ಯೆ ಬಿರುಕು ಇರುವ ವಿಚಾರ ಚಾಂಪಿಯನ್ಸ್ ಟ್ರೋಫಿ ವೇಳೆ ತುಂಬಾ ಓಡಾಡಿತ್ತು. ಆದ್ರೆ, ಇಬ್ಬರೂ ಟೂರ್ನ್ ಮೆಂಟ್ ಮುಗಿಯುವ ವರೆಗೂ ಅದೇಕೋ ಮೌನತಾಳಿದ್ದರು. ಆದರೆ ಜೂನ್ 20 ರಂದು ಕೋಚ್ ಸ್ಥಾನಕ್ಕೆ ಕುಂಬ್ಳೆ ರಾಜೀನಾಮೆ ನೀಡಿದ್ದರು.
Advertisement
ಇದನ್ನೂ ಓದಿ: ಕುಂಬ್ಳೆ ರಾಜೀನಾಮೆ ನೀಡಿದ್ದು ಯಾಕೆ? ಡ್ರೆಸ್ಸಿಂಗ್ ರೂಂ ಸೀಕ್ರೆಟ್ ಬಹಿರಂಗ
ಇದನ್ನೂ ಓದಿ: ಪಾಕ್ ಗೆದ್ದ ಬಳಿಕ ಅಭಿಮಾನಿ ಉದ್ಧಟತನ: ಗರಂ ಶಮಿಯನ್ನು ಕೂಲ್ ಮಾಡಿದ ಧೋನಿ – ವಿಡಿಯೋ
ಇದನ್ನೂ ಓದಿ: ಅಂಗಳದಲ್ಲಿ ಆಯ್ತು, ಟ್ವಿಟ್ಟರ್‍ನಲ್ಲೂ ಪಾಂಡ್ಯ ಕಿಡಿ ಕಿಡಿ: ವೈರಲ್ ಆಯ್ತು ಟ್ವೀಟ್