ಮುಂಬೈ: ಮೊಹಾಲಿ ಏಕದಿನ ಕ್ರಿಕೆಟ್ ಪಂದ್ಯದ ಸೋಲಿನ ಬಳಿಕ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಡಿಆರ್‌ಎಸ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದು, ಡಿಆರ್‍ಎಸ್‍ನಲ್ಲಿ ಸ್ಥಿರತೆ ಇಲ್ಲ ಎಂದು ತಿಳಿಸಿದ್ದಾರೆ.
4ನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಸೋಲಿಗೆ ಕಾರಣರಾದ ಟರ್ನರ್ ಅವರ ಔಟ್ ಮನವಿಯನ್ನು ಅಂಪೈರ್ ನಿರಾಕರಿಸಿದ ಘಟನೆಯ ಕುರಿತು ಕೊಹ್ಲಿ ಪ್ರತಿಕ್ರಿಯೆ ನೀಡಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
Advertisement
ಪಂದ್ಯದ 44 ಓವರಿನಲ್ಲಿ ಟರ್ನರ್ 41 ರನ್ ಗಳಿಸಿದ್ದರು. ಬೌಲಿಂಗ್ ಎಸೆದ ಚಹಲ್ ಎಸೆತದಲ್ಲಿ ಭಾರೀ ಶಾಟ್‍ಗೆ ಸಿಡಿಸಲು ಮುಂದಾದ ಟರ್ನರ್ ವಿಫಲರಾಗಿದ್ದರು. ಇತ್ತ ವಿಕೆಟ್ ಹಿಂದಿದ್ದ ಪಂತ್ ಬಾಲ್ ಕ್ಯಾಚ್ ಪಡೆದು, ಕೂಡಲೇ ಸ್ಟಂಪ್ ಕೂಡ ಮಾಡಿದ್ದರು. ಆಟಗಾರರ ಮನವಿಯನ್ನು ಅಂಪೈರ್ ನಿರಾಕರಿಸಿ ನಾಟೌಟ್ ಎಂದು ತಿಳಿಸಿದ್ದರು. ಕೂಡಲೇ ಕೊಹ್ಲಿ 3ನೇ ಅಂಪೈರ್ ಗೆ ಮನವಿ ಸಲ್ಲಿಸಿದ್ದರು.
Advertisement
Advertisement
ಟರ್ನರ್ ಸ್ಟಂಪ್ ಸೇರಿದಂತೆ ಕ್ಯಾಚ್ ಪರಿಶೀಲನೆ ನಡೆಸಿದ 3ನೇ ಅಂಪೈರ್ ಕೂಡ ನಾಟೌಟ್ ಎಂದು ತೀರ್ಪು ನೀಡಿದ್ದರು. ಆದರೆ ಡಿಆರ್‍ಎಸ್ ನಲ್ಲಿ ಚೆಂಡು ಟರ್ನರ್ ಬ್ಯಾಟಿಗೆ ತಾಗಿ ಹೋಗಿದ್ದು ಸ್ಪಷ್ಟವಾಗಿತ್ತು. ಈ ವೇಳೆ ಕೊಹ್ಲಿ ಮೈದಾನದಲ್ಲೇ ಗರಂ ಆಗಿದ್ದರು.
Advertisement
ನಿರ್ಣಯಕ ಹಂತದ ವಿಕೆಟ್ ಪಡೆದರೂ ಕೂಡ ಅಂಪೈರ್ ಕೆಟ್ಟ ತೀರ್ಪಿಗೆ ಬೆಲೆ ತೆತ್ತ ಟೀಂ ಇಂಡಿಯಾ ಸೋಲುಂಡಿತ್ತು. ಪರಿಣಾಮ ಸರಣಿಯಲ್ಲಿ ಆಸೀಸ್ ಸಮಬಲ ಸಾಧಿಸಿತ್ತು.
ಆಸೀಸ್ ಆಟಗಾರರು ಉತ್ತಮ ಪ್ರದರ್ಶನ ನೀಡಿದ್ದು, ಅವರು ಗೆಲುವಿಗೆ ಅರ್ಹರಿದ್ದಾರೆ. ಆದರೆ ಡಿಆರ್‍ಎಸ್ ನಿರ್ಧಾರ ನನ್ನನ್ನು ಕ್ಷಣ ಕಾಲ ಅಚ್ಚರಿಗೊಳ್ಳುವಂತೆ ಮಾಡಿತ್ತು ಎಂದು ಕೊಹ್ಲಿ ಹೇಳಿದ್ದಾರೆ.
ಏಕದಿನ ಸರಣಿಯ ಅಂತಿಮ ಪಂದ್ಯ ಮಾರ್ಚ್ 13ರಂದು ದೆಹಲಿಯಲ್ಲಿ ನಡೆಯಲಿದ್ದು, ಸಮಬಲ ಸಾಧಿಸಿರುವ ಇತ್ತಂಡಗಳು ಸರಣಿ ಕೈವಶ ಮಾಡಿಕೊಳ್ಳುವ ವಿಶ್ವಾಸದಲ್ಲಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live ವೀಕ್ಷಿಸಲು ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv