ಮುಂಬೈ: ಟೀಂ ಇಂಡಿಯಾದ ರನ್ ಮೆಷಿನ್, ನಾಯಕ ವಿರಾಟ್ ಕೊಹ್ಲಿ ಆಸೀಸ್ ನೆಲದಲ್ಲಿ ಸಚಿನ್ ದಾಖಲೆಯನ್ನು ಮುರಿಯುವ ಅವಕಾಶವನ್ನು ಹೊಂದಿದ್ದಾರೆ.
ಸಚಿನ್ ಆಸ್ಟ್ರೇಲಿಯಾ ನೆಲದಲ್ಲಿ 6 ಶತಕಗಳನ್ನು ಸಿಡಿಸಿದ್ದು, ಕೊಹ್ಲಿ ಇದುವರೆಗೂ 5 ಶತಕಗಳನ್ನು ಸಿಡಿಸಿದ್ದಾರೆ. ಇದರಂತೆ ಆಸೀಸ್ ನೆಲದಲ್ಲಿ ಟೀಂ ಇಂಡಿಯಾ ಪರ ಸಚಿನ್ ತೆಂಡೂಲ್ಕರ್ ಅವರ ದಾಖಲೆ ಹಿಂದಿಕ್ಕಲು ಕೊಹ್ಲಿ ಅವಕಾಶವನ್ನು ಪಡೆದಿದ್ದಾರೆ. ಡಿಸೆಂಬರ್ 6ರಿಂದ ಆರಂಭವಾಗಲಿರುವ ಮೊದಲ ಟೆಸ್ಟ್ ಪಂದ್ಯಕ್ಕೂ ಮುನ್ನವೇ ಕೊಹ್ಲಿ ಮೇಲಿನ ನಿರೀಕ್ಷೆ ಹೆಚ್ಚಾಗಿದೆ. ಅಂತಿಮ ಟೆಸ್ಟ್ ಪಂದ್ಯದಲ್ಲೂ ಮಿಂಚಿದ್ದ ವಿರಾಟ್ ಕೊಹ್ಲಿ ಅರ್ಧ ಶತಕ ಸಿಡಿಸಿದ್ದರು. ಅಲ್ಲದೆ ಟಿ20 ಟೂರ್ನಿಯಲ್ಲಿ ಕೊಹ್ಲಿ ನೀಡಿದ ಪ್ರದರ್ಶನ ಅವರ ಮೇಲಿನ ಭರವಸೆಯನ್ನು ಮತ್ತಷ್ಟು ಹೆಚ್ಚಿಸಿದೆ.
Advertisement
Advertisement
ಸಚಿನ್ ಆಸೀಸ್ ನೆಲದಲ್ಲಿ ಆಡಿರುವ 20 ಟೆಸ್ಟ್ ಪಂದ್ಯಗಳಲ್ಲಿ ಶೇ.53.20 ಸರಾಸರಿಯಲ್ಲಿ 6 ಶತಕಗಳ ನೆರವಿನಿಂದ 1,809 ರನ್ ಗಳಿಸಿದ್ದಾರೆ. ಕೊಹ್ಲಿ 8 ಟೆಸ್ಟ್ ಪಂದ್ಯಗಳಿಂದ ಶೇ. 62 ರ ಸರಾಸರಿಯಲ್ಲಿ 992 ರನ್ ಸಿಡಿದ್ದು, 8 ರನ್ ಸಿಡಿಸಿದರೆ 1 ಸಾವಿರ ರನ್ ಕೂಡ ಪೂರ್ಣಗೊಳ್ಳಲಿದೆ. ಉಳಿದಂತೆ ಆಸೀಸ್ ನೆಲದಲ್ಲಿ ಹೆಚ್ಚು ಶತಕ ಸಿಡಿಸಿದ ಟೀಂ ಇಂಡಿಯಾ ಆಟಗಾರ ಪಟ್ಟಿಯಲ್ಲಿ ಮಾಜಿ ನಾಯಕ ಸುನಿಲ್ ಗವಾಸ್ಕರ್ 5 ಶತಕ ಸಿಡಿಸಿ ಸ್ಥಾನ ಪಡೆದಿದ್ದು, ಮಾಜಿ ಆಟಗಾರರ ವಿವಿಎಸ್ ಲಕ್ಷಣ್ 15 ಪಂದ್ಯಗಳಿಂದ 4 ಶತಕ ಗಳಿಸಿದ್ದಾರೆ.
Advertisement
ಕಳೆದ ಬಾರಿ ಆಸೀಸ್ ಪ್ರವಾಸ ಕೈಗೊಂಡಿದ್ದ ಟೀಂ ಇಂಡಿಯಾ 4 ಟೆಸ್ಟ್ ಪಂದ್ಯಗಳಲ್ಲಿ ಸೋತು ವೈಟ್ ವಾಶ್ ಆಗಿತ್ತು. ಆದರೆ ಈ ಬಾರಿ ಕೊಹ್ಲಿ ನಾಯಕತ್ವದ ಬಳಗ ಟೆಸ್ಟ್ ಸರಣಿಯನ್ನು ಕ್ಲೀನ್ ಸ್ವಿಪ್ ಮಾಡುವ ಗುರಿ ಹೊಂದಿದೆ. ಆಸೀಸ್ ತಂಡಕ್ಕೆ ನಾಯಕ ವಿರಾಟ್ ಕೊಹ್ಲಿರನ್ನ ಕಟ್ಟಿ ಹಾಕುವ ಬಗ್ಗೆ ಈಗಾಗಲೇ ತಲೆನೋವು ಶುರುವಾಗಿದ್ದು, ಕೊಹ್ಲಿ ನಿಯಂತ್ರಣ ಮಾಡಲು ತಂತ್ರಗಳನ್ನು ರೂಪಿಸುತ್ತಿದೆ.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv