ಲಂಡನ್: ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಬ್ಯಾಟ್ ಶತಕ ಕಾಣದೇ ಇದೀಗ 50ನೇ ಇನ್ನಿಂಗ್ಸ್ ಕಳೆದು ಹೋಗಿದೆ.
ಭಾರತ ತಂಡದ ಪರ ಯಾವತ್ತು ಅಬ್ಬರಿಸುವ ವಿರಾಟ್ ಬ್ಯಾಟ್ ಕೆಲಪಂದ್ಯಗಳಿಂದ ಸೈಲೆಂಟ್ ಅಗಿದೆ. ಭಾರತದ ರನ್ ಮಿಷಿನ್ ಎಂದೇ ಖ್ಯಾತರಾದ ವಿರಾಟ್ ಬ್ಯಾಟ್‍ನಿಂದ ಸೆಂಚುರಿ ಬರದೆ 50 ಇನ್ನಿಂಗ್ಸ್ ಕಳೆದುಹೋಗಿದೆ. ಕೊನೆಯದಾಗಿ 2019ರಲ್ಲಿ ಬಾಂಗ್ಲದೇಶದ ವಿರುದ್ಧ ಶತಕದ ಬಳಿಕ ಇಲ್ಲಿಯವರೆಗೆ ವಿರಾಟ್ ಕೊಹ್ಲಿ ಒಂದೇ ಒಂದು ಶತಕ ಸಿಡಿಸಿಲ್ಲ ಎಂಬುದು ಅಚ್ಚರಿಯಾದರು ಸತ್ಯ. ಇದನ್ನೂ ಓದಿ: ಇತರೇ 16 ರನ್ – 78 ರನ್‍ಗಳಿಗೆ ಭಾರತ ಆಲೌಟ್
ಅದಲ್ಲದೆ ಇದೀಗ ಸದ್ಯ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲೂ ಕೂಡ ವಿರಾಟ್ ಬ್ಯಾಟ್ ಸದ್ದು ಮಾಡುತ್ತಿಲ್ಲ. ಕಳೆದ ನಾಲ್ಕು ಇನ್ನಿಂಗ್ಸ್ ಗಳಿಂದ ವಿರಾಟ್ ಬ್ಯಾಟ್‍ನಿಂದ ಸಿಡಿದಿರುವುದು ಕೇವಲ 69ರನ್ ಮಾತ್ರ ಅದರಲ್ಲೂ ಲಾಡ್ರ್ಸ್ ಟೆಸ್ಟ್ ನಲ್ಲಿ ಸಿಡಿಸಿದ 42ರನ್ ಹೆಚ್ಚಿನ ಗಳಿಕೆಯಾಗಿದೆ. ಇದನ್ನೂ ಓದಿ: ಭಾರತ ತಂಡದ ಶಕ್ತಿಯಾಗಿ ಬೆಳೆದ ವೇಗಿಗಳು
ವಿರಾಟ್ ಕೊಹ್ಲಿ ಬ್ಯಾಟ್‍ನಿಂದ ರನ್ ಹೊಳೆ ಹರಿದರೆ ಭಾರತಕ್ಕೆ ಯಾವುದೇ ಭಯವಿಲ್ಲ, ಆದರೆ ಇದೀಗ ಕೊಹ್ಲಿ ರನ್ ಗಳಿಸಲು ಪರದಾಡುವುದನ್ನು ಗಮನಿಸುತ್ತಿದ್ದಂತೆ ಭಾರತಕ್ಕೆ ಚಿಂತೆ ಕಾಡುತ್ತಿದೆ. ಕೊಹ್ಲಿ 95 ಟೆಸ್ಟ್ ಪಂದ್ಯಗಳಿಂದ 27 ಶತಕ ಸಹಿತ 7,616ರನ್ ಸಿಡಿಸಿದರೆ, 254 ಏಕದಿನ ಪಂದ್ಯಗಳಿಂದ 43 ಶತಕ ಸಹಿತ 12,169ರನ್ ಬಾರಿಸಿದ್ದಾರೆ. ಇದೀಗ ವಿರಾಟ್ ಅಭಿಮಾನಿಗಳು ಕೊಹ್ಲಿ ಬ್ಯಾಟ್‍ನಿಂದ ಶತಕದಾಟಕ್ಕಾಗಿ ಕಾಯುತ್ತಿದ್ದಾರೆ.